ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ಮಹತ್ವದ ನಿರ್ಧಾರವೊಂದರಲ್ಲಿ ಅಕ್ಟೋಬರ್ 22ರ ನಾಳೆ ಬುಧವಾರ ಬೆಂಗಳೂರು – ಶಿವಮೊಗ್ಗ ನಡುವೆ ಎರಡು ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿರ್ವಹಣೆಗಾಗಿ ಈ ವ್ಯವಸ್ಥೆ ಮಾಡಲಾಗಿದೆ.ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು-ಶಿವಮೊಗ್ಗ ಟೌನ್ ನಡುವೆ ಹಾಗೂ ಬೆಂಗಳೂರು ಕಂಟೋನ್ಮೆಂಟ್-ಶಿವಮೊಗ್ಗ ಟೌನ್ ನಡುವೆ ತಲಾ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳ ವಿವರಗಳು ಹೀಗಿವೆ:
1. 06225 ಸಂಖ್ಯೆಯ ವಿಶೇಷ ರೈಲು, ಅಕ್ಟೋಬರ್ 22 ರಂದು ಬೆಳಿಗ್ಗೆ 08:05 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು, ಅದೇ ದಿನ ಮಧ್ಯಾಹ್ನ 01:00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ. ಮರಳಿ ರೈಲು ಸಂಖ್ಯೆ 06226 ಅಕ್ಟೋಬರ್ 22ರಂದು ಸಂಜೆ 05:15 ಗಂಟೆಗೆ ಶಿವಮೊಗ್ಗ ಟೌನ್‌ನಿಂದ ಹೊರಟು, ಅದೇ ದಿನ ರಾತ್ರಿ 10:45 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.ಎಲ್ಲೆಲ್ಲಿ ನಿಲುಗಡೆ?
ಈ ರೈಲು ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ ಮತ್ತು ಶಿವಮೊಗ್ಗ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ರೈಲು ಒಂದು ಎಸಿ 2- ಟೈರ್, ಒಂದು ಎಸಿ 3- ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಎಸ್‌ಎಲ್‌ಆರ್/ಡಿ ಬೋಗಿಗಳನ್ನು ಒಳಗೊಂಡಿರುತ್ತದೆ.
2. 06215 ಸಂಖ್ಯೆಯ ವಿಶೇಷ ರೈಲು ಅಕ್ಟೋಬರ್ 22ರಂದು ಬೆಳಿಗ್ಗೆ 10:45 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಅದೇ ದಿನ ಸಂಜೆ 06:00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ. ಮರಳಿ, ರೈಲು ಸಂಖ್ಯೆ 06216 ಅಕ್ಟೋಬರ್ 22 ರಂದು ರಾತ್ರಿ 11:55 ಗಂಟೆಗೆ ಶಿವಮೊಗ್ಗ ಟೌನ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 07:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಎಸ್ಎಂಟಿವಿ ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ಬಾಣಸಂದ್ರ, ತಿಪಟೂರು, ಅರಸೀಕೆರೆ, ಕಡೂರು, ಬೀರೂರ, ತರೀಕೆರೆ, ಭದ್ರಾವತಿ ಮತ್ತು ಶಿವಮೊಗ್ಗ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ರೈಲಿನಲ್ಲಿ ಒಂದು ಎಸಿ 2- ಟೈರ್, ಎರಡು ಎಸಿ 3- ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post