ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈಋತ್ಯ ರೈಲ್ವೆಯ #SWR ಮೈಸೂರು ವಿಭಾಗದಲ್ಲಿ ನಡೆಸಿದ ಪರಿಶೀಲನಾ ಅಭಿಯಾನದ ಪರಿಣಾಮವಾಗಿ ಒಟ್ಟು 727 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 6 ಲಕ್ಷ ರೂ.ಗೂ ಅಧಿಕ ದಂಡವನ್ನು ಸಂಗ್ರಹಿಸಲಾಗಿದೆ.
ಮೈಸೂರು #Mysore ವಿಭಾಗದ ವಾಣಿಜ್ಯ ವಿಭಾಗವು ಟಿಕೆಟ್ ಪರಿಶೀಲನಾ ಸಿಬ್ಬಂದಿ ನಡೆಸಿದ ಕ್ಷೇತ್ರ ಪರಿಶೀಲನೆಗಳಲ್ಲಿ ಉತ್ತರ ಫಲಿತಾಂಶವನ್ನು ಸಾಧಿಸಿದೆ. ಟಿಕೆಟ್ ಇಲ್ಲದೆ ಪ್ರಯಾಣ ಮತ್ತು ಇತರ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ವಿಭಾಗದ ವಿವಿಧ ಮಾರ್ಗಗಳಲ್ಲಿ ತೀವ್ರ ಟಿಕೆಟ್ ಪರಿಶೀಲನಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪರಿಶೀಲನೆಗಳಲ್ಲಿ ಒಟ್ಟು 727 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 6,29,010 ರೂ.ದಂಡವನ್ನು ಸಂಗ್ರಹಿಸಲಾಗಿದೆ.ಈ ಕುರಿತಂತೆ ಮಾತನಾಡಿದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಜೆ. ಲೋಹಿತೇಶ್ವರ ಅವರು, ಮೈಸೂರು ವಿಭಾಗದ ವಾಣಿಜ್ಯ ವಿಭಾಗವು ಪ್ರಯಾಣಿಕರು ಸರಿಯಾದ ಟಿಕೆಟ್’ಗಳೊಂದಿಗೆ ಪ್ರಯಾಣಿಸುವಂತೆ ಮತ್ತು ರೈಲ್ವೆ ನಿಯಮಗಳನ್ನು ಪಾಲಿಸುವಂತೆ ಖಚಿತಪಡಿಸಲು ನಿರಂತರವಾಗಿ ಕಟ್ಟುನಿಟ್ಟಿನ ಜಾಗರೂಕತೆ ವಹಿಸುತ್ತಿದೆ. ಇಂತಹ ಅಭಿಯಾನಗಳು ಆದಾಯವನ್ನು ಹೆಚ್ಚಿಸುವುದಲ್ಲದೆ, ಪ್ರಯಾಣಿಕರಲ್ಲಿನ ಶಿಸ್ತಿನ ಮತ್ತು ಕಾನೂನು ಪಾಲನೆಯ ಮನೋಭಾವವನ್ನು ಉತ್ತೇಜಿಸುತ್ತದೆ ಎಂದವರು ತಿಳಿಸಿದರು.
ಎಷ್ಟು ದಂಡ ಸಂಗ್ರಹ?
- ಹೆಚ್ಚಿನ ದಂಡದ ಪ್ರಕರಣಗಳು: 543 – 5,60,060 ರೂ. ದಂಡ
- ಅತಿಕ್ರಮ ಪ್ರಯಾಣದ ಪ್ರಕರಣಗಳು: 33 – 37,640 ರೂ. ದಂಡ
- ಬುಕ್ ಮಾಡದ ಸರಕು (ಲಗೇಜ್) ಪ್ರಕರಣಗಳು: 7 – 1,250 ರೂ. ದಂಡ
- ಧೂಮಪಾನ ಪ್ರಕರಣಗಳು: 3 – 600 ರೂ. ದಂಡ
- ಅನಧಿಕೃತ ವ್ಯಾಪಾರ (ವೆಂಡಿಂಗ್) ಪ್ರಕರಣ: 1 – 1,000 ರೂ. ದಂಡ
- ಇತರ ಪ್ರಕರಣಗಳು: 140 – 28,460 ರೂ. ಸಂಗ್ರಹ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post