ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಹುಬ್ಬಳ್ಳಿ |
2025-26 ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ನೈಋತ್ಯ ರೈಲ್ವೆ #SWR ಸರಕು ಸಾಗಣೆ ಮತ್ತು ಒಟ್ಟಾರೆ ಗಳಿಕೆ ಎರಡರಲ್ಲೂ ಗಮನಾರ್ಹ ಏರಿಕೆ ದಾಖಲಿಸಿದೆ.
ಈ ದಾಖಲೆಯು ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಗ್ರಾಹಕ-ಆಧಾರಿತ ತಂತ್ರಗಳ ಮೇಲಿನ ನಿರಂತರ ಗಮನವನ್ನು ಪ್ರತಿಬಿಂಬಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮ್ಹಿತಿ ಪ್ರಕಟಿಸಿದೆ. ಏಪ್ರಿಲ್ ನಿಂದ ಜುಲೈ 2025ರ ವರೆಗೆ, ನೈಋತ್ಯ ರೈಲ್ವೆ ಒಟ್ಟು 16.27 ಮಿಲಿಯನ್ ಟನ್ ಸರಕು ಸಾಗಣೆಯನ್ನು ನೆಸಾಗಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿನ 14.05 ಮಿಲಿಯನ್ ಟನ್’ಗಿಂತ ಶೇ 15.8% ಅಧಿಕವಾಗಿದೆ.
ಇನ್ನು, ಈ 2.22 ಮಿಲಿಯನ್ ಟನ್ ಗಳ ಏರಿಕೆ, ನೈಋತ್ಯ ರೈಲ್ವೆ ತನ್ನ ಕಾರ್ಯಪದ್ಧತಿಗಳನ್ನು ಉತ್ತಮಗೊಳಿಸಿದ್ದನ್ನೂ, ಪ್ರಮುಖ ಕೈಗಾರಿಕೆಗಳೊಂದಿಗೆ ಉತ್ತಮ ಸಮ್ಮಿಲನ ಸಾಧಿಸಿದ್ದನ್ನೂ ತೋರಿಸುತ್ತದೆ.
ಉಕ್ಕಿನ ತಯಾರಿಕಾ ಘಟಕಗಳಿಗೆ ಕಚ್ಚಾ ವಸ್ತುಗಳಾದ 0.47 ಮಿಲಿಯನ್ ಟನ್ನಿಂದ ಶೇ 51.4% ಹೆಚ್ಚಾಗಿ 0.71 ಮಿಲಿಯನ್ ಟನ್ ಆಗಿದ್ದು, ಇದು ಶೇಕಡಾವಾರು ಏರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ರಸಗೊಬ್ಬರ ಲೋಡಿಂಗ್ ಕೂಡ 0.37 ಮಿಲಿಯನ್ ಟನ್’ನಿಂದ ಶೇ 12.6% ಏರಿಕೆ ಕಂಡು 0.42 ಮಿಲಿಯನ್ ಟನ್ ಆಗಿದೆ. ಕಂಟೇನರ್ ಸಾಗಣೆ 0.25 ಮಿಲಿಯನ್ ಟನ್ನಿಂದ ಶೇ 29.4% ಏರಿಕೆಯಾಗಿ 0.32 ಮಿಲಿಯನ್ ಟನ್’ಗೆ ತಲುಪಿದೆ.
ಆದಾಯದ ವಿಷಯದಲ್ಲಿ, ನೈಋತ್ಯ ರೈಲ್ವೆ ಎಲ್ಲಾ ಪ್ರಮುಖ ಆದಾಯ ಶ್ರೇಣಿಗಳಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಪ್ರಯಾಣಿಕರ ಆದಾಯ 1,064 ಕೋಟಿ ಆಗಿದ್ದು, ಕಳೆದ ವರ್ಷದ ಅವಧಿಯಲ್ಲಿ ಪ್ರಯಾಣಿಸಿದ 55 ಮಿಲಿಯನ್ ಪ್ರಯಾಣಿಕರ ಜತೆಗೆ ಹೋಲಿಸಿದರೆ, ಈ ವರ್ಷ 59 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋಚಿಂಗ್ ಸೇವೆಗಳಿಂದ-ಪಾರ್ಸೆಲ್ ಮತ್ತು ಇತರೆ ಪ್ರಯಾಣಿಕರಲ್ಲದ ಸೇವೆಗಳು ಸೇರಿ-113 ಕೋಟಿ ಗಳಿಕೆಯಾಗಿದೆ, ಇದು ಕಳೆದ ವರ್ಷದ 107 ಕೋಟಿ ಆಧಾರದ ಮೇಲೆ ಸಾಧನೆಯಾಗಿದೆ.
ಒಟ್ಟಾರೆಯಾಗಿ, ನೈಋತ್ಯ ರೈಲ್ವೆ ಏಪ್ರಿಲ್ ನಿಂದ ಜುಲೈ 2025 ರವರೆಗೆ 2,972 ಕೋಟಿಗಳ ಒಟ್ಟು ಆದಾಯವನ್ನು ಗಳಿಸಿದೆ, 2024 ರಲ್ಲಿ ಇದೇ ಅವಧಿಯಲ್ಲಿ ಗಳಿಸಿದ 2,634 ಕೋಟಿಗಳಿಗಿಂತ 338 ಕೋಟಿಗಳ ಬೆಳವಣಿಗೆಯನ್ನು ದಾಖಲಿಸಿದೆ. ಈ ಸ್ಥಿರ ಮತ್ತು ವಿಶಾಲ-ಆಧಾರಿತ ಕಾರ್ಯಕ್ಷಮತೆಯು ನೈಋತ್ಯ ರೈಲ್ವೆ ಆರ್ಥಿಕ ವಿವೇಕ, ಸುಧಾರಿತ ಸೇವಾ ವಿತರಣೆ ಮತ್ತು ಸರಕು ಮತ್ತು ಪ್ರಯಾಣಿಕ ವಲಯಗಳಲ್ಲಿ ಕಾರ್ಯತಂತ್ರದ ಬೆಳವಣಿಗೆಗೆ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post