ವಾರಣಾಸಿ: ಲೋಕಸಭಾ ಚುನಾವಣೆಯ ಕೇಂದ್ರ ಬಿಂದು ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಸೇನೆಯಲ್ಲಿ ಕಳಪೆ ಆಹಾರ ನೀಡುತ್ತಾರೆ ಎಂದು ವೀಡಿಯೋ ಮಾಡಿ ದೇಶದಾದ್ಯಂತ ಸುದ್ದಿ ಮಾಡಿದ್ದ ಯಾದವ್, ಈ ಕಾರಣಕ್ಕಾಗಿ ಅಶಿಸ್ತಿನ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡಿದ್ದರು. ಅಲ್ಲದೇ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಎಸ್’ಪಿ ಹಾಗೂ ಬಿಎಸ್’ಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಆದರೆ, ಸೇನೆ ಅಮಾನತು ಮಾಡಲು ಕಾರಣವಾಗಿದ್ದ ವಿಶ್ವಾಸದ್ರೋಹ, ಭ್ರಷ್ಟಾಚಾರ ಆರೋಪಗಳಿಂದ ಮುಕ್ತನಾಗಿದ್ದೇನೆ ಎಂದು ಬಿಎಸ್’ಎಫ್’ನಿಂದ ನಿರಪೇಕ್ಷಣಾ ಪ್ರಮಾಣ ಪತ್ರ ತರಬೇಕೆಂದು ಚುನಾವಣಾ ಆಯೋಗ ತೇಜ್ ಬಹದ್ದೂರ್’ಗೆ ಸೂಚನೆ ನೀಡಿತ್ತು.
ಅಲ್ಲದೆ ಸ್ವತಂತ್ರ ಅಭ್ಯಥಿಯಾಗಿ ಸಲ್ಲಿಸಿದ ನಾಮಪತ್ರದಲ್ಲಿ ಸೇನೆಯಿಂದ ವಜಾಗೊಂಡಿದ್ದನ್ನು ಒಪ್ಪಿಕೊಂಡಿದ್ದ ಇವರು, ಎಸ್’ಪಿ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರದಲ್ಲಿ ಇದನ್ನು ನಿರಾಕರಿಸಿದ್ದರು. ಈ ಬಗ್ಗೆಯೂ ಪ್ರಶ್ನೆ ಮಾಡಿ ಚುನಾವಣೆ ಆಯೋಗ ನೋಟೀಸ್ ನೀಡಿತ್ತು.
Discussion about this post