Sunday, July 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಚೆನ್ನೈ ಕನ್ನಡ ಬಳಗದ ಸಾಧನೆಯ ಹಾದಿಯೇ ಒಂದು ಮೈಲಿಗಲ್ಲು

October 30, 2023
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   | ವಿಶೇಷ ಲೇಖನ |

ತಮಿಳುನಾಡಿನ ರಾಜಧಾನಿ ಚೆನ್ನೈ.. ಹಿಂದೆ ಮದರಾಸು ಎಂದೆನಿಸಿದ್ದ ಇದು ಈಗ ಚೆನ್ನೈ ಎಂದು ಮರುನಾಮಕರಣಗೊಂಡಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಜನ ಇಲ್ಲಿ ವಾಸಿಸುತ್ತಿದ್ದಾರೆ.. ಇಲ್ಲಿನ ಜನಸಾಗರದಲ್ಲಿ ಆರು ಲಕ್ಷಕ್ಕೂ ಹೆಚ್ಚು ಕನ್ನಡಿಗರೂ ವಾಸಿಸುತ್ತಿದ್ದಾರೆ.

ತವರು ನಾಡು ಕರ್ನಾಟಕದಿಂದ ಬಂದು ತಬ್ಬಲಿತನ ಅನುಭವಿಸಬಾರದೆಂಬ ದೃಷ್ಟಿಯಿಂದ ಹಾಗೂ ನಮ್ಮತನ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹಿಂದಿನವರು ಯೋಚಿಸಿದ ಪರಿಣಾಮ ಹಲವಾರು ಕನ್ನಡ ಸಂಘಟನೆಗಳು ಚೆನ್ನೈನಲ್ಲಿವೆ.
ಇಂಥ ಕನ್ನಡ ಸಂಘಟನೆಗಳಲ್ಲಿ ಕನ್ನಡ ಬಳಗವೂ ಒಂದು.. 1965ರಲ್ಲಿ ಯಾವ ಕ್ಷಣದಲ್ಲಿ ಇದಕ್ಕೆ ಬಳಗ ಎಂದು ನಾಮಕರಣವನ್ನು ಯಾರು ಮಾಡಿದರೋ ಆ ಮಧುರ ಕ್ಷಣ ಅಕ್ಷರಶಃ ಸಾಕಾರಗೊಂಡಿದೆ.

ಬಳಗಕ್ಕೆ ಬರುವವರೆಲ್ಲರನ್ನೂ ಆಪ್ಯಾಯತೆಯಿಂದ ಆವರಿಸುವುದು ಇದು ನಮ್ಮ ಕುಟುಂಬ, ನಮ್ಮ ಸ್ವಂತದವರು ಎಂಬ ಭಾವನೆ.. ಹೀಗಾಗಿ ಅಂದಿನಿಂದದ ಇಂದಿನವರೆಗೂ ಕೌಟುಂಬಿಕ ಬಂಧನವನ್ನೇ ಮೀರಿಸುವಂಥ ಬಂಧನ ಬಳಗದ ಸದಸ್ಯರನ್ನು ಆವರಿಸಿಕೊಂಡಿದೆ. ತನ್ನ ವಿಶಿಷ್ಟ ಕಾರ್ಯಕ್ರಮಗಳಿಂದ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡ ಬಳಗ ಹುಟ್ಟಿಕೊಂಡಿದ್ದೇ ಒಂದು ವಿಶಿಷ್ಟ ರೀತಿಯಲ್ಲಿ.. ತರಕಾರಿ ಮಾರುಕಟ್ಟೆಯಲ್ಲಿ ಕೇಳಿಬಂದ ಕನ್ನಡ ಮಾತುಗಳು ಬಳಗಕ್ಕೆ ಮುನ್ನುಡಿಯಾದವು..

ಆರಂಭಿಕವಾಗಿ ಶ್ರೀಯುತ ಸಿ.ಎಸ್.ಎಸ್. ಶೆಟ್ಟಿ ಅವರ ಮನೆಯಲ್ಲಿ ಸೇರುತ್ತಿದ್ದ ಕೆಲವೇ ಕನ್ನಡಿಗರ ಗುಂಪು ಕ್ರಮೇಣ ವಿಸ್ತಾರಗೊಂಡು ದೊಡ್ಡ ಬಳಗವಾಯಿತು.. ಹಬ್ಬಗಳಲ್ಲಿ ಒಟ್ಟಾಗಿ ಸೇರುತ್ತಿದ್ದ ಸದಸ್ಯರು ಕ್ರಮೇಣ ಪ್ರತಿ ತಿಂಗಳೂ ಸೇರಿ ಏನಾದರೂ ಒಂದು ಕಾರ್ಯಕ್ರಮದ ಮೂಲಕ ಕನ್ನಡತನ ಮೆರೆಯತೊಡಗಿದರು.
ತನ್ನ ಸದಸ್ಯರಿಗೆ ಕನ್ನಡದ ವಾತಾವರಣ, ಬಂಧು ಬಳಗದವರೊಂದಿಗೆ ಸಖ್ಯದ ಆನಂದ, ನೆಮ್ಮದಿ ತಂದು ಕೊಡುತ್ತಿರುವ ಬಳಗ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗಿ ಬೆಳೆದು ಬಂದಿತು.

ಕಲೆ, ಸಾಹಿತ್ಯ, ನಾಟಕ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಸ್ಯರಿಗೆ ತೀರಾ ಆಪ್ತ ಹಾಗೂ ಆಪ್ಯಾಯಮಾನ ಎನಿಸಿಕೊಂಡಿದೆ ಕನ್ನಡ ಬಳಗ.

ಕನ್ನಡ ಬಳಗದ ಯಾವುದೇ ಕಾರ್ಯಕ್ರಮಗಳಾದರೂ ಅದು ನಿಗದಿತ ಸಮಯದಲ್ಲೇ ನಡೆಯುವುದು ವಿಶೇಷ. ಪ್ರತಿ ಜುಲೈ ತಿಂಗಳಲ್ಲಿ ನಡೆಯುವ ಸರ್ವ ಸದಸ್ಯರ ಸಭೆ ಎಲ್ಲ ಚಟುವಟಿಕೆಗಳಿಗೆ ನಾಂದಿ ಹಾಡುತ್ತದೆ. ತನ್ನ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಕೊಳ್ಳದೆ ಇತರ ಸಂಘಟನೆಗಳೊಂದಿಗೆ ಸ್ನೇಹ ಸೌಹಾರ್ದತೆ ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.
ನಂತರ ಪ್ರತಿ ತಿಂಗಳೂ ಒಂದೊಂದು ರೀತಿಯ ವಿಶಿಷ್ಟ ಕಾರ್ಯಕ್ರಮಗಳು ನಡೆಯುತ್ತವೆ. ಜಾನಪದ ಗೀತೆ ಸ್ಪರ್ಧೆ ಪ್ರಮುಖ ಕಾರ್ಯಕ್ರಮಗಳಲ್ಲೊಂದು. ಚೆನ್ನೈ ಅಷ್ಟೇ ಅಲ್ಲದೆ ತಮಿಳುನಾಡಿನ ಇತರ ಕನ್ನಡ ಸಂಘಗಳು ಕೂಡಾ ಭಾಗವಹಿಸುತ್ತಿದ್ದು ಪ್ರತಿಷ್ಠೆಯನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ ನಡೆಯುವ ತಿಂಡಿ ಸಂತೆಯ ರುಚಿ ಎಲ್ಲರ ಮೆಚ್ಚುಗೆಯ ಅಂಶವಾಗಿದೆ.

ಸಾಹಿತ್ಯ ಚಟುವಟಿಕೆಗಳಿಗೆ ಬಳಗದ ಕೊಡುಗೆ ಅಪಾರ. ಹೊರನಾಡ ಕನ್ನಡಿಗರಲ್ಲಿನ ಸಾಹಿತ್ಯ ರಚನಾ ಹಂಬಲಕ್ಕೆ ನೀರೆರೆದು ಪೋಷಿಸುವ ನಿಟ್ಟಿನಲ್ಲಿ ಆರಂಭಗೊಂಡದ್ದು ಲಹರಿ ಮಾಸ ಪತ್ರಿಕೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ನಿರಂತರ ಮೂರು ದಶಕಗಳಿಗೂ ಹೆಚ್ಚು ಕಾಲ ಹೊರನಾಡಿನ ಕನ್ನಡಿಗರ ಮೆಚ್ಚುನ ಪತ್ರಿಕೆಯಾಗಿ ಗಮನ ಸೆಳೆದಿತ್ತು.

ಕನ್ನಡ ಬಳಗವನ್ನು ಕಟ್ಟಿ ಬೆಳೆಸಿದವರಲ್ಲಿ ಕೆ. ಎನ್. ಮಂಜುನಾಥ್ ಕೂಡಾ ಒಬ್ಬರು. ಕ್ರೀಡೆಯಲ್ಲಿ ಅತೀವ ಆಸಕ್ತಿ ಇಟ್ಟುಕೊಂಡಿದ್ದರು. ಅಕಸ್ಮಾತ್ತಾಗಿ ಅವಘಡದಲ್ಲಿ ನಮ್ಮನ್ನಗಲಿದಾಗ ಉಂಟಾದ ಕಂದಕವನ್ನು ಅವರ ಹೆಸರಿನಲ್ಲಿ ವಿವಿಧ ಕನ್ನಡ ಸಂಘಟನೆಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಸುವ ಮೂಲಕ ತುಂಬುವ ಕಾರ್ಯ ಯಶಸ್ವಿಯಾಗಿ ಸಾಗಿದೆ.

http://kalpa.news/wp-content/uploads/2023/05/VID-20230516-WA0005.mp4

ಎಲ್ಲ ಕನ್ನಡ ಸಂಘಟನೆಗಳನ್ನು ಒಂದೇ ವೇದಿಕೆ ಅಡಿಯಲ್ಲಿ ತರಬೇಕೆಂಬ ಹಂಬಲ ಮತ್ತೊಮ್ಮೆ ಈಡೇರಿದ್ದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮೂಲಕ. ಚೆನ್ನೆöÊನಲ್ಲಿ ಸಂಘಟಿತ ರಾಜ್ಯೋತ್ಸವ ಆಚರಣೆಗೆ ಮುನ್ನುಡಿ ಬರೆದದ್ದು ಕನ್ನಡ ಬಳಗ ಎಂಬ ಹೆಮ್ಮೆ ನಮ್ಮದು.
ಚೆನ್ನೈನಲ್ಲಿ ಕನ್ನಡ ನಾಟಕ ಅಂದ್ರೆ ತಕ್ಷಣ ನೆನಪಾಗುವುದೇ ಕನ್ನಡ ಬಳಗದ ಹೆಸರು. ಅಷ್ಟೊಂದು ನಾಟಕ ಪ್ರದರ್ಶನ ಮಾಡಿದ ಹಿರಿಮೆ ಬಳಗದ ಕಲಾವಿದ ಸದಸ್ಯರದು. ಕಿರಣ್‌ಕುಮಾರ್, ಎಚ್.ಎನ್. ಶ್ರೀನಿವಾಸ್ ಮತ್ತಿತರರ ಕಾಳಜಿಯಿಂದ ಆರಂಭಗೊಂಡ ನಾಟಕ ಪ್ರದರ್ಶನಗಳಿಂದ ನೂರಾರು ಕಲಾವಿದರು ಬೆಳಕಿಗೆ ಬಂದಿದ್ದಾರೆ. ಪರವೂರಿನಲ್ಲಿ ತಿಂಗಳಿಗೊಂದರಂತೆ ಕನ್ನಡ ನಾಟಕ ಪ್ರದರ್ಶಿಸಿದ ಹಿರಿಮೆಯೂ ಬಳಗಕ್ಕೆ ಸಲ್ಲುತ್ತದೆ.

ಚೆನ್ನೈನ ಎಲ್ಲ ಕನ್ನಡ ಸಂಘಟನೆಗಳಲ್ಲಿದ್ದ ಕಲಾವಿದರನ್ನೊ ಒಂದೇ ವೇದಿಕೆಯಡಿ ತಂದು ನಾಟಕ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದ್ದೂ ಕೂಡಾ ಕನ್ನಡ ಬಳಗದಿಂದಲೇ. ರಂಗಚೇತನ ತಂಡವನ್ನು ಹುಟ್ಟು ಹಾಕಿ ಹಲವಾರು ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿತು. ರಂಗಚೇತನದ ಅಡಿಯಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿ, ಚೆನ್ನೆöÊನಲ್ಲಿ ಕನ್ನಡ ನಾಟಕಗಳಿಗೆ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಲಭ್ಯವಾಗುವಂತೆ ಮಾಡಿದ ಹಿರಿಮೆ ಬಳಗದ್ದು.

ಇನ್ನು ಕನ್ನಡ ಬಳಗದ ಏಳಿಗೆ ಮತ್ತು ಪ್ರತಿಷ್ಠೆಯಲ್ಲಿ ಮಹಿಳಾ ಸದಸ್ಯರ ಪಾತ್ರ ಅತಿ ಮುಖ್ಯ ಹಾಗೂ ಪ್ರಮುಖವಾದುದು.. ಬಳಗದ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿನ ತುದಿಗೆ ಮುಟ್ಟಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಳಗದ ಮಹಿಳಾ ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪ್ರತಿ ವರ್ಷ ನಡೆಯುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭಾ ಸಂಪನ್ನತೆ ಮೆರೆದು ಸೈ ಎನಿಸಿಕೊಂಡಿದ್ದಾರೆ.
ಇದಷ್ಟೇ ಅಲ್ಲದೆ ಉಲ್ಲಾಸ ಪಯಣ, ಯುವಕರಿಗೆ ಕ್ವಿಜ್ ಕಾರ್ಯಕ್ರಮ, ಯುವಕರ ಕಾರ್ಯಕ್ರಮ ಹೀಗೆ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಬಳಗ ಐದು ದಶಕಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದಕ್ಕೆ ಆರಂಭದಿಂದಲೂ ಇಂದಿನವರೆಗೂ ಆರ್ಥಿಕ ಕೊರತೆಯ ನಡುವೆಯೂ ಹಮ್ಮಿಕೊಂಡು ಬಂದಿರುವ ಕಾರ್ಯಕ್ರಮಗಳ ಆಯೋಜನೆಯಲ್ಲಿ ಅಷ್ಟೇ ತನ್ಮಯತೆ ಕಾಯ್ದುಕೊಂಡು ಬಂದಿರುವ ಬಳಗದ ಕಾರ್ಯಕಾರಿ ಮಂಡಳಿ ಹಾಗೂ ಸದಸ್ಯರ ಉತ್ಸಾಹವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ..

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited  

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaSpecial Articleವಿಶೇಷ ಲೇಖನ
Previous Post

ಹಸಿರನುಟ್ಟ ಭೂತಾಯಿಯ ಸೀಮಂತ | ಭೂಮಿ ಹುಣ್ಣಿಮೆ ಹಬ್ಬ

Next Post

ವಿಜಯಪುರಂನಲ್ಲಿ ರೈಲು ಅಪಘಾತ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಜಯಪುರಂನಲ್ಲಿ ರೈಲು ಅಪಘಾತ: ಪ್ರಧಾನಿ ನರೇಂದ್ರ ಮೋದಿ ಸಂತಾಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!