ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ Rama Mandira Ayodhya ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಾಲ್ಕು ವರ್ಷಗಳ ಬಳಿಕ ಯೋಜನೆಯ ಮೊದಲ ಹಂತವು ಬಹುತೇಕ ಸಿದ್ಧವಾಗಿದೆ.
ಪ್ರಸಿದ್ಧ ವಾಸ್ತುಶಿಲ್ಪಿ ಚಂದ್ರಕಾಂತ್ ಭಾಯಿ ಸೋಂಪುರ ಅವರ ನೇತೃತ್ವದಲ್ಲಿ ಅನುಭವಿ ವಾಸ್ತುಶಿಲ್ಪಿಗಳ ತಂಡವು ವಿನ್ಯಾಸಗೊಳಿಸಿದ ನಗರ ಶೈಲಿಯ ಮಂದಿರವನ್ನು ಪ್ರಾಥಮಿಕವಾಗಿ ಗುಲಾಬಿ ಮರಳುಗಲ್ಲಿನಿಂದ ಮತ್ತು ರಾಜಸ್ಥಾನದ ಮಿರ್ಜಾಪುರ ಮತ್ತು ಬನ್ಸಿ-ಪಹಾರ್‌ಪುರದಿಂದ ಕೆತ್ತಿದ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಹಾಗೂ ತಲಾ 2 ಟನ್ ತೂಕದ 17,000 ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ದೇವಾಲಯಕ್ಕೆ ಕನಿಷ್ಠ 1,000 ವರ್ಷಗಳವರೆಗೆ ಯಾವುದೇ ದುರಸ್ತಿ ಅಗತ್ಯವಿಲ್ಲ ಮತ್ತು 6.5 ತೀವ್ರತೆಯ ಭೂಕಂಪನವು ಅದರ ಅಡಿಪಾಯವನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ದೇವಾಲಯದ ಅಡಿಪಾಯವೂ 12ಮೀ ಆಳವಾಗಿದೆ. ಅಡಿಪಾಯವನ್ನು ಮರುಪೂರಣ ಮಾಡಲು ಬಳಸಿದ ಮಣ್ಣನ್ನು 28 ದಿನಗಳಲ್ಲಿ ಕಲ್ಲಾಗಿ ಪರಿವರ್ತಿಸಬಹುದು ಮತ್ತು ಅಡಿಪಾಯದಲ್ಲಿ ಒಟ್ಟು 47 ಪದರಗಳನ್ನು ಹಾಕಲಾಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ ಎನ್ನಲಾಗಿದೆ.
Also read: ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ: ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ
ಇಲ್ಲಿಯವರೆಗೆ 21 ಲಕ್ಷ ಘನ ಅಡಿಗಳಷ್ಟು ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ. 1992ರ ‘ಶಿಲಾದಾನ’ ಸಮಯದಲ್ಲಿ ಮತ್ತು ನಂತರ ದಾನ ಮಾಡಿದ ಎಲ್ಲಾ ಇಟ್ಟಿಗೆಗಳನ್ನು ದೇವಾಲಯದ ನಿರ್ಮಾಣದಲ್ಲಿ ಬಳಸಲಾಗಿದೆ ಎಂಬುದು ಕುತೂಹಲಕಾರಿ ಅಂಶವಾಗಿದೆ.
ಬಾಕಿ ಉಳಿದಿರುವ ಯೋಜನೆ
ಮೊದಲ ಹಂತವನ್ನು ಪೂರ್ಣಗೊಳಿಸಲು ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಪ್ರಧಾನಿ ಮೋದಿಯ ಮಾಜಿ ಪ್ರಧಾನ ಕಾರ್ಯದರ್ಶಿ ಅವರು ಡಿಸೆಂಬರ್ 15 ಗಡುವನ್ನು ನಿಗದಿಪಡಿಸಿದ್ದರು. ಹಾಗೂ ಗರ್ಭಗುಡಿ ನೆಲೆಗೊಂಡಿರುವ ನೆಲ ಮಹಡಿ. ಮೊದಲ ಮತ್ತು ಎರಡನೇ ಮಹಡಿಗಳು, ಎಲ್ಲಾ ಭಿತ್ತಿಚಿತ್ರಗಳು ಮತ್ತು ಪ್ರತಿಮಾಶಾಸ್ತ್ರದ ಕೆಲಸ, ಕೆಳಗಿನ ಸ್ತಂಭ ಮತ್ತು ಸುಮಾರು 360 ಬೃಹತ್ ಕಂಬಗಳ ಮೇಲೆ ಕೆತ್ತನೆಯನ್ನು ಒಳಗೊಂಡಿರುವ ಎರಡನೇ ಹಂತವು ಡಿಸೆಂಬರ್ 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post