Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಪರಮ ಭಾಗವತೋತ್ತಮ – ದೇವರ್ಷಿ ನಾರದ

ಮೇ 28 , ನಾರದ ಜಯಂತಿ ತದಂಗವಾಗಿ ಹೀಗೊಂದು ಚಿಂತನ

March 17, 2022
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Devarshi Narada

Devarshi Narada

Share on facebookShare on TwitterWhatsapp
Read - 7 minutes

ಕಲ್ಪ ಮೀಡಿಯಾ ಹೌಸ್

ವಿಷಾದವೂ ಕೆಲವೊಮ್ಮೆ ಮಹತ್ಕಾರ್ಯಸಾಧನೆಗೆ ಪ್ರೇರಣೆ ಆಗುತ್ತದೆ. ವಾಲ್ಮೀಕಿಗಳ ವಿಷಾದದಿಂದ (ಕ್ರೌಂಚವಧ ಪ್ರಸಂಗ) ರಾಮಾಯಣ ಮಹಾಕಾವ್ಯ ಸಿಗುವಂತೆ ಆಯಿತು. ಅರ್ಜುನನ ವಿಷಾದದಿಂದ ಮುಂದೆ ದುಷ್ಟರ ದಮನವಾಗಿ ಸುಖೀರಾಜ್ಯ ನಿರ್ಮಾಣವಾಯಿತು. ಅಂತೆ ವ್ಯಾಸರ ವಿಷಾದದಿಂದ ಶ್ರೀಮದ್ಭಾಗವತ ಮಹಾಪುರಾಣವು ಜಗತ್ತಿಗೆ ಸಿಗುವಂತೆ ಆಯಿತು, ವ್ಯಾಸರ ವಿಷಾದಕ್ಕೆ ಖಚಿತವಾದ ಕಾರಣವನ್ನು ತಿಳಿಸಿ ಶ್ರೀಮದ್ಭಾಗವತ ಮಹಾಪುರಾಣ ರಚನೆಗೆ ಪ್ರೇರಣೆ ನೀಡಿದವರೇ ಕಲಹಪ್ರಿಯರೆಂದು ಪ್ರಸಿದ್ಧರಾದ ನಾರದರು.

ಈ ನಾರದರು ಸಾಮಾನ್ಯರಲ್ಲ. ಇವರು ಸಾಮಾನ್ಯರಲ್ಲಿ ಅಸಾಮಾನ್ಯರು. ಸ್ವಯಂಭೂ ಮನ್ವಂತರದಲ್ಲಿ ಬ್ರಹ್ಮನ ಹತ್ತು ಮಂದಿ ಮಾನಸ ಪುತ್ರರಲ್ಲಿ ಕೊನೆಯವರು. ಇವರು ಬ್ರಹ್ಮನ ತೊಡೆಯಿಂದ ಜನಿಸಿದವರು. ಆದಕಾರಣ ನಾರದರಿಗೆ ಜಂಘಾಬಲವೇ ದೊಡ್ಡದು. ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ಭೃಗು, ದಕ್ಷ, ವಸಿಷ್ಠ ಎಂಬ ಒಂಬತ್ತು ಮಂದಿ ಇವರ ಅಣ್ಣಂದಿರು. ಸಾಮಾನ್ಯರಿಗೂ ಹಾಗೂ ಕಷ್ಟದಲ್ಲಿ ಸಿಲುಕಿದವರಿಗೆ ಅದರಿಂದ ಪಾರಾಗುವ ಉಪಾಯವನ್ನು ತೋರಿಸಿ ಸಹಾಯ ಮಾಡುವುದರ ಮೂಲಕ ಜಗತ್ತಿಗೆ ಮಂಗಳವನ್ನು ಉಂಟುಮಾಡುವುದೇ ಇವರ ಜೀವನದ ಉದ್ದೇಶವಾಗಿತ್ತು. ನಾರದರ ಬಾಳು ಸದಾಚಾರದ ಕಾರಣದಿಂದ ಪರಿಮಳಪೂತವಾಗಿತ್ತು. ಆದ್ದರಿಂದಲೇ ಇವರು ನಾರದರು. ನಾರದರೆಂದರೆ ಲೋಕಮಿತ್ರರು. ತ್ರಿಲೋಕ ಸಂಚಾರಿಗಳು.

ನಾರದರ ಹೆಸರನ್ನು ಕೇಳದವರು ಯಾರಿದ್ದಾರೆ? ಎಲ್ಲ ಪುರಾಣ ಕಥೆಗಳಲ್ಲೂ ನಾರದರ ಪಾತ್ರವಿದೆ. ಜಗಳ ಗಂಟಿಕ್ಕುವವರಿಗೆ ನಾರದ ಎಂಬ ಅಡ್ಡ ಹೆಸರಿದೆಯಲ್ಲ. ಆದರೆ ನಾರದರು ಇಬ್ಬರ ನಡುವೆ ಕಲಹ ಉಂಟುಮಾಡುವುದು ಲೋಕಕ್ಷೇಮದ ಕಾರಣಕ್ಕಾಗಿ.
ಒಮ್ಮೆ ಬ್ರಹ್ಮದೇವರು ತನ್ನ ಸೃಷ್ಟಿಕಾರ್ಯಕ್ಕೆ ಸಹಾಯ ಮಾಡುವಂತೆ ನಾರದರಲ್ಲಿ ಕೇಳಿದರು. ಪ್ರಾಪಂಚಿಕವಾದ ಸಂಗತಿಗಳಲ್ಲಿ ಆಸಕ್ತಿಯನ್ನು ಹೊಂದದ್ದೇ ಇದ್ದ ನಾರದರು ಇದಕ್ಕೆ ಒಪ್ಪಲಿಲ್ಲ. ಸಿಟ್ಟುಗೊಂಡ ಬ್ರಹ್ಮದೇವರು ಬೇರೆ ಬೇರೆ ಲೋಕಗಳಲ್ಲಿ ಎರಡು ಬಾರಿ ಜನ್ಮವೆತ್ತುವಂತೆ ಶಾಪ ನೀಡಿದರು. ಅದರಂತೆ, ನಾರದರು ಮೊದಲು ಗಂಧರ್ವ ಲೋಕದಲ್ಲಿ ಉಪಾಭರಣ ಎಂಬ ಹೆಸರಿನಿಂದ ಜಪಿಸಿದರು. ಸಂಸಾರಿಗಳಾಗಿ ಕೆಲವು ಕಾಲ ಗಂಧರ್ವ ಲೋಕದಲ್ಲಿ ಸುಖವಾಗಿದ್ದರು. ಅವರಿಗೆ ಮಕ್ಕಳು ಜನಿಸಿದರು.

ಮುಂದೆ, ತನ್ನ ಶಾಪದ ಅವಧಿ ಮುಗಿದ ಬಳಿಕ ಭೂಲೋಕದಲ್ಲಿ ಬ್ರಹ್ಮಜ್ಞಾನಿಯೊಬ್ಬನ ಮನೆಯಲ್ಲಿ ಸೇವೆಯನ್ನು ಮಾಡುತ್ತಿದ್ದ ದಾಸಿಯೊಬ್ಬಳ ಮಗನಾಗಿ ಜನಿಸಿದರು. ತಾಯಿ ಆ ಶಿಶುವಿಗೆ ನಾರದ ತನ್ನ ಮಗನಾಗಿ ಹುಟ್ಟಿದ್ದಾನೆ ಎಂದು ತಿಳಿದಿರಲಿಲ್ಲ. ಮುಂದೊಂದು ಆ ದಿನ ತಾಯಿ ಮರಣ ಹೊಂದಿದಳು. ಬಳಿಕ ನಾರದರು ಆ ಮನೆಯನ್ನು ತೊರೆದು ಕಾಡಿಗೆ ಹೋದರು. ಭಗವಂತನನ್ನು ಕುರಿತು ತಪಸ್ಸು ಮಾಡತೊಡಗಿದರು. ಅವರ ಮನಸ್ಸಿನಲ್ಲಿ ಭಗವಂತನ ದಿವ್ಯ ಮಂಗಳವಾದ ಸುಂದರ ರೂಪವು ಗೋಚರವಾಯಿತು.

ಆದರೆ, ಮರುಕ್ಷಣದಲ್ಲಿಯೇ ಆ ದಿವ್ಯ ಮಂಗಳ ವಿಗ್ರಹವು ಮರೆಯಾಯಿತು. ಇದರಿಂದ ಅವರಿಗೆ ತುಂಬ ಬೇಸರವಾಯಿತು. ಪುನಃ ಧ್ಯಾನಸ್ಥರಾದರೂ ದೇವರ ಮಂಗಳ ಮೂರ್ತಿ ಮನಸ್ಸಿನಲ್ಲಿ ಮೂಡಲಿಲ್ಲ. ಅದರ ಬದಲು ಗಂಭೀರವಾದ ಧ್ವನಿಯೊಂದು ಕೇಳಿಸಿತು. `ಈ ಜನ್ಮದಲ್ಲಿ ನನ್ನ ದರ್ಶನ ಭಾಗ್ಯ ನಿನಗೆ ಲಭಿಸುವುದು’ ಈ ಧ್ವನಿಯನ್ನು ಕೇಳಿದ ನಾರದರು ಮುಂದಿನ ಜನ್ಮದಲ್ಲಿ ಭಗವಂತನ ದರ್ಶನವನ್ನು ಪಡೆಯಲೇಬೇಕೆಂದು ಹಂಬಲದಿಂದ ಕಠಿಣವಾದ ತಪಸ್ಸನ್ನು ಆಚರಿಸಿದರು. ತಪಸ್ಸಿನಲ್ಲಿಯೇ ಅವರ ಭೂಲೋಕದ ಜೀವನ ಅಂತ್ಯವನ್ನು ಕಂಡಿತು. ಹೀಗೆ ಎರಡು ಜನ್ಮಗಳನ್ನು ಪೂರೈಸಿದ ನಾರದರು ಸತ್ಯಲೋಕಕ್ಕೆ ಮರಳಿದರು.

ಬ್ರಹ್ಮನಿಗೆ ಮತ್ತೊಬ್ಬ ಪುತ್ರನಿದ್ದ ದಕ್ಷನೆಂದು ಅವನ ಹೆಸರು. ಅವನು ತನ್ನ ತಂದೆಯ ಆದೇಶದಂತೆ ಸೃಷ್ಟಿಕಾರ್ಯದಲ್ಲಿ ನಿರತನಾಗಿದ್ದ. ಆಗಾಗ ಅಲ್ಲಿಗೆ ಬರುತ್ತಿದ್ದ ನಾರದರು ದಕ್ಷನ ಮಕ್ಕಳಿಗೆ ವೈರಾಗ್ಯದ ಉಪದೇಶ ಮಾಡುತ್ತಿದ್ದರು. ಮುಂದೆ, ದಕ್ಷನ ಮಕ್ಕಳು ಸನ್ಯಾಸಿಗಳಾಗಿ ಕಾಡಿಗೆ ತೆರಳಿದರು. ಈ ಮೂಲಕ ದಕ್ಷನ ಸೃಷ್ಟಿಕಾರ್ಯಕ್ಕೆ ತೊಡಕುಂಟಾಯಿತು. ದಕ್ಷನಿಗೆ ನಾರದರ ಮೇಲೆ ಸಿಟ್ಟು ಬಂತು. `ನೀನು ಒಂದಡೆ ನೆಲೆ ನಿಲ್ಲದೆ ಸದಾ ಸಂಚರಿಸುತ್ತಿರು’ ಎಂದು ಶಾಪವನ್ನಿತ್ತನು. ಇದರಿಂದಾಗಿ ನಾರದರು ಕೆಲವು ಘಳಿಗೆಗಳವರೆಗೂ ಒಂದೆಡೆ ನಿಲ್ಲದೆ ಗಾಳಿಯಂತೆ ಲೋಕಗಳಿಗೆ ಸಂಚರಿತೊಡಗಿದರು. ಹೀಗೆ ಅಲೆಯುತ್ತಿರುವಾಗಲೂ ನಾರದರು ಮಹತೀ ಎಂಬ ತಮ್ಮ ವೀಣೆಯನ್ನು ನುಡಿಸುತ್ತಾ ಭಗವಂತನ ನಾಮಸ್ಮರಣೆ ಮತ್ತು ಸಂಕೀರ್ತನೆಗಳನ್ನು ಹಾಡುತ್ತಿದ್ದರು. ರಾಮಯಣ, ಮಹಾಭಾರತ ಮತ್ತು ವಿವಿಧ ಪುರಾಣಗಳಲ್ಲಿ ನಾರದರ ಅನೇಕ ಕಥೆಗಳು ಬರುತ್ತವೆ.

ನಾರದ : ಭಾಗವತ ರಚನೆಗೆ ಪ್ರೇರಣೆ
ಭಾಗವತ ಕಥಾಮೃತವನ್ನು ಮೊಟ್ಟಮೊದಲು ಈ ಪ್ರಪಂಚದಲ್ಲಿ ಬೋಧಿಸಿ, ಚರ್ಚಿಸಿದ್ದು ಶುಕಮುನಿ ಮತ್ತು ಪರೀಕ್ಷಿತ ರಾಜನೇ ಆದರೂ ಈ ಕಥಾಮೃತವನ್ನು ಈ ಜಗತ್ತಿನಲ್ಲಿ ಶ್ರೀ ವ್ಯಾಸಮಹರ್ಷಿ ದ್ವಾರ ಅವತರಿಸಲು ಮೂಲ ಕಾರಣ ದೇವರ್ಷಿನಾರದರು.

ನಾರದರು ಸಾಧಾರಣವಾಗಿ ಎಲ್ಲರಿಗೂ ಕಲಹಪ್ರಿಯರಾಗೇ ಪರಿಚಯವೇ ಹೊರತು ಭಾಗವತೋತ್ತಮರಾಗಿ ಅಲ್ಲ. ಪ್ರಾಮಾಣಿಕ ಶಾಸ್ತ್ರಗಳಿಂದೊಂದೇ ಅಲ್ಲದೇ, ಸಿನಿಮಾ, ನಾಟಕಗಳ ಮೂಲಕ ನಾರದರನ್ನು ಕುರಿತು ತಿಳಿದುಕೊಳ್ಳುವುದೇ ಈ ದುಃಸ್ಥಿತಿಗೆ ಕಾರಣವು. ಜಗತ್ತು ಒಟ್ಟು ತ್ರಿಗುಣಗಳಿಂದ ತುಂಬಿದೆ. ಆದ್ದರಿಂದಲೇ ಮೊದಲು ತಾಪತ್ರಯ ಭರಿತವಾಗಿರುತ್ತದೆ. ಆದರೆ ಕಲಿಯುಗದಲ್ಲಿ ಅದಕ್ಕಿರುವ ಪರಿಹಾರ ಕೇವಲ ಶ್ರೀ ಮದ್ಭಾಗತವೇ. ಇನ್ನು ಅಂತಹ ಅಪರೂಪವಾದ ಕೊಡುಗೆಯನ್ನು ಜನರಿಗೆ ಕೊಡುವ ಮೂಲಕಾರಣ ದೇವರ್ಷಿನಾರದರೇ ಎಂದು ತಿಳಿದಲ್ಲಿ ಶ್ರೀಮದ್ಭಾಗವತ ಹೃದಯದಲ್ಲಿ ಆತನ ಮೇಲಿರುವ ಗೌರವ ಇಮ್ಮಡಿಯಾಗುತ್ತಿದೆ. ಪರಮಭಕ್ತರ ಕುರಿತಾದ ಪರಮಾದರವೇ ಭಕ್ತಿಮಾರ್ಗದಲ್ಲಿ ಪ್ರಥಮ ಹೆಜ್ಜೆಯಾಗುತ್ತದೆ.

ದೇವತೆಗಳು ಸುಲೋಕ ಜೀವಿಗಳು, ಸಾಧಾರಣವಾಗಿ ಅವರು ಮಹೋನ್ನತವಾದ ಭೋಗಗಳಲ್ಲಿ ನಿರತರಾಗಿರುತ್ತಾರೆ. ಆದರೆ ದೇವತೆಗಳ ಗುಣಗಳೊಂದಿಗೆ ಋಷಿಗಳ ಗುಣಗಳನ್ನು ಹೊಂದಿರುವವರೇ ದೇವರ್ಷಿಗಳು. ಈ ವಿಧವಾಗಿ ಭೋಗದಿಚ್ಛೆಗಳಿಲ್ಲದೇ ದೇವತೆಗಳ ಗಣದಲ್ಲಿ ಸೇರಿರುವವರೇ ದೇವರ್ಷಿಗಳು. ಅವರಲ್ಲಿ ನಾರದರು ಶ್ರೇಷ್ಠರು-ಸಾಕ್ಷಾತ್ ಶ್ರೀಕೃಷ್ಣನ ಪ್ರತಿನಿಧಿ.

ಶಾರ್ಜ್ಞಿ ಎನ್ನುವ ಧನಸ್ಸನ್ನು ಧರಿಸುವ ಶ್ರೀಕೃಷ್ಣನ ದಿವ್ಯಲೀಲೆಗಳನ್ನು ಹೊಗಳುವ ಕಾರಣವಾಗಿ ದೇವರ್ಷಿ ನಾರದರು ಪರಮಧನ್ಯರು, ಈ ರೀತಿಯಾಗಿ ಲೀಲಾಕೀರ್ತನೆಯನ್ನು ನಿರಂತರವಾಗಿ ಮಾಡುತ್ತಾ ಆತ್ಮಾನಂದವನ್ನು ಅನುಭವಿಸುವುದೊಂದೇ ಅಲ್ಲದೇ, ಶೋಕತಪ್ತರಾದ ಜೀವಿಗಳನ್ನು ಸಹಾ ರಂಜನೆಗೈಯುತ್ತಾರೆ ಎಂದು ನಾರದರ ಕುರಿತಾಗಿ ಶ್ರೀ ಮದ್ಭಾಗವತದಲ್ಲಿ ಭಗವತಾರಗಳು ಇಪ್ಪತ್ನಾಲ್ಕೆಂದು ಹೇಳಲಾಗಿದೆ. ಈ ಇಪ್ಪತ್ನಾಲ್ಕಲ್ಲಿ ಮೂರನೆಯದೇ ನಾರದರ ಅವತಾರ ಕಾರಣ ದೇವರ್ಷಿ ನಾರದರು ಭಗವತಾರವೇ ಹೊರತು ಸಾಮಾನ್ಯ ವ್ಯಕ್ತಿ ಇಲ್ಲವೇ ಜಗಳಗಳಿಗೆ ಬೆಂಕಿಯಿಡುವವರಲ್ಲ, ಭಕ್ತಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸುವುದಕ್ಕಾಗಿ, ಪ್ರಚಾರಕ್ಕಾಗಿ, ರಚನೆಗೈಯಲು ಈ ಅವತಾರವನ್ನು ಎತ್ತಲಾಗಿದೆ. ಇದು ಭಗವಂತನ ಶಕ್ತ್ಯಾವೇಶ ಅವತಾರ, ಯೋಗ್ಯನಾದ ಜೀವನಿಗೆ ಒಂದು ಪ್ರತ್ಯೇಕ ಕಾರ್ಯಸಾಧನೆಗಾಗಿ ಶಕ್ತಿ ಸ್ಪುರಿಸಲು ಮಾಡಿದ ಅವತಾರವೇ ಶಕ್ತ್ಯಾವೇಶ ಅವತಾರವಾಗುತ್ತದೆ.

ನಾರದರು, ವ್ಯಾಸಮಹರ್ಷಿ, ಪರಶುರಾಮರೆಲ್ಲರೂ ಅಂತಹವರೇ ಆಗಿದ್ದಾರೆ. ಭಗತತ್ತ್ವವನ್ನು ಪೂರ್ಣವಾಗಿ ಅಂತ ಹನ್ನೆರಡಂಗುಲ ಮಹಾಯೋಜನೆಗಳಲ್ಲಿ ಒಬ್ಬರು. ಆದರೆ ದೇವರ್ಷಿ ನಾರದರು ಭಗವತಾರರಾಗಿ ಅವತರಿಸುವ ಮೊದಲು ಎರಡು ಜನ್ಮಗಳನ್ನು ಹೊಂದಿದ್ದಾರೆ. ಆ ವಿವರಣೆಗಳೇನೋ ತಿಳಿಯೋಣ.

ನಾರದರ ಆದಿಜನ್ಮ ಗಂಧರ್ವಜನ್ಮವು. ಆ ಜನ್ಮದಲ್ಲಿ ಆತನು ಉಪೊರ್ವನೆಂಬ ಸುಂದರವಾದ ಗಂಧರ್ವನು. ಗಾಯನದಲ್ಲಿ ಒಳ್ಳೆ ಪ್ರಾವೀಣ್ಯವನ್ನು ಹೊಂದಿದ್ದ ಉಪಒರ್ವನು ತನ್ನ ಸೌಂದರ್ಯದಿಂದ ಗಂಧರ್ವ ಸ್ತ್ರೀಯರನ್ನೆಲ್ಲಾ ಆಕರ್ಷಿಸುತ್ತಿದ್ದನು. ಒಂದು ಸಾರಿ ದೇವತೆಗಳ ಸಭೆಯಲ್ಲಿ ಸಂಕೀರ್ತನೆ ಸಮಾರಂಭವು ಏರ್ಪಟ್ಟಿದೆ. ಸಂಕೀರ್ತನವೆಂದರೆ ಭಗವಂತನನ್ನು ಹೊಗಳುತ್ತಾ ಮಾಡುವ ಗಾಯನವು. ಅಂದರೆ ಹರಿ ಗುಣಗಾನ ಮಾಡುವುದೇ ಈ ಸಂಕೀರ್ತನವು. ಇದು ಯುಗಯುಗಗಳಲ್ಲಿ ಎಲ್ಲಾ ಲೋಕಗಳಲ್ಲಿಯೂ ಇರುವಂತಹುದು ಅಂತಹ ನಾಮ ಸಂಕೀರ್ತನೆ ಕಲಿಯುಗದಲ್ಲಿ ಭಗವದ್ರಾಪ್ತಿ ಮಾರ್ಗ ಇದೇ ಶಾಸ್ತ್ರವಾಣಿ. ದೇವತಾ ಸಭೆಯಲ್ಲಿ ಏರ್ಪಾಟು ಮಾಡಲ್ಪಟ್ಟ ಸಂಕೀರ್ತನ ಸಮಾರಂಭಕ್ಕೆ ಗಂಧರ್ವರು, ಅಪ್ಸರರು, ಪ್ರಜಾಪತಿಗಳು, ದೇವತೆಗಳು ಎಲ್ಲರೆಲ್ಲರೂ ಆಹ್ವಾನಿತರಾಗಿದ್ದಾರೆ. ಉಪಒರ್ವನು ಸಹ ಸ್ತ್ರೀ ಸಮೂಹ ಸಮೇತನಾಗಿ ಈ ಕಾರ್ಯಕ್ರಮಕ್ಕೆ ಹೋಗಿದ್ದಾನೆ ಆದರೆ ಸ್ತ್ರೀ ಸಾಂಗತ್ಯದಲ್ಲಿ ಮಗ್ನನಾಗಿ ಆತನು ಹರಿ ಕೀರ್ತನೆಯ ಬದಲಾಗಿ ದೇವತಾ ಕೀರ್ತನೆಯನ್ನು ಮಾಡಲು ಆರಂಭಿಸಿದ್ದಾನೆ. ಅದು ದೇವತೆಗಳಿಗೆ ಆನಂದವನ್ನುಂಟು ಮಾಡದೇ ಮೇಲಾಗಿ ಪ್ರಜಾಪತಿಗಳೆಲ್ಲರೂ ಅದೆಷ್ಟೋ ಮುನಿಸಿ ಕೊಂಡಿದ್ದಾರೆ. ಕೀರ್ತನಾರ್ಹನಾದ ಶ್ರೀಹರಿಯನ್ನು ಕೀರ್ತಿಸಬೇಕಾದ ಜಾಗದಲ್ಲಿ ದೇವತೆಗಳನ್ನು ಕೀರ್ತಿಸುವುದು ಶೂದ್ರ ಲಕ್ಷಣವೆಂದೂ, ಶಪಿಸಿದ್ದಾರೆ. ಭಾಗವತದಲ್ಲಿ ಈ ವೃತ್ತಾಂಶವು ದೇವತಾ ಕೀರ್ತನೆಯನ್ನು ಮಾಡುವವರಿಗೆ ದೊರಕಬಹುದಾದ ಗತಿಯನ್ನು ಸೂಚಿಸುತ್ತದೆ. ಪ್ರಜಾಪತಿಗಳೆಲ್ಲರೂ ಶಾಪದ ಫಲವಾಗಿ ಉರ್ಪರ್ವನು ಗಂಧರ್ವ ಲೋಕದಿಂದ ಬೀಳ್ಕೊಂಡು ಭೂಲೋಕದಲ್ಲಿ ಒಬ್ಬ ಶೂದ್ರ ಸ್ತ್ರೀ ಗರ್ಭದಿಂದ ಜನಿಸಿದ್ದಾನೆ. ಈ ರೀತಿಯಾಗಿ ಆತನು ಶೂದ್ರನಾಗಿದ್ದಾನೆ.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾರು ಸೇವಕ ವೃತ್ತಿಯಲ್ಲಿರುವರೋ ಅವರೇ ಶೂದ್ರರು. ಇದು ವರ್ಣಾಶ್ರಮ ವಿಂಗಡಣೆ, ವೇದಾಧ್ಯಯನದಲ್ಲಿರುವವರು ಬ್ರಾಹ್ಮಣರು, ಪ್ರಜಾಪಾಲನೆ-ಸಂರಕ್ಷಣೆಯಲ್ಲಿರುವ ಕ್ಷತ್ರಿಯರು, ವ್ಯಾಪಾರ-ಗೋರಕ್ಷಣೆಯಲ್ಲಿರುವವರು ವೈಶ್ಯರು, ಇನ್ನು ಸೇವಾ ವೃತ್ತಿಯಲ್ಲಿರುವವರು ಶೂದ್ರರು, ಇದೇ ಭಗವಂತನು ಏರ್ಪಡಿಸಿರುವ ವರ್ಣವ್ಯವಸ್ಥೆ. ಗಂಧರ್ವನು ಗಂಧರ್ವ ಲೋಕದಿಂದ ನಿರ್ಗಮಿಸಿ, ಒಬ್ಬನೇ ಮನೆಕೆಲದ ಮಾಡುವ ಕೆಲಸದವಳ ಗರ್ಭದಲ್ಲಿ ಬಂದು ಬಿದ್ದಿದ್ದಾನೆ. ಈ ರೀತಿಯಾಗಿ ಆತನು ದಾಸಿ ಪುತ್ರನಾಗಿ ಹುಟ್ಟಿ ದಾಸ್ಯ ವೃತ್ತಿಯನ್ನೇ ತನ್ನದಾಗಿಸಿಕೊಂಡು ಶೂದ್ರನಾಗಿದ್ದಾನೆ. ಇದು ಗಂಧರ್ವನ ಎರಡನೇ ಜನ್ಮ ಆದರೆ ಅದೃಷ್ಟವಶಾತ್, ಆತನ ತಾಯಿ ಒಬ್ಬ ಬ್ರಾಹ್ಮಣ ಗೃಹದಲ್ಲಿ ಕೆಲಸ ಮಾಡುವಾಕೆ. ಆ ಬ್ರಾಹ್ಮಣನು ನಿಷ್ಠಾವಂತ- ಭಕ್ತಿ ಮಾರ್ಗಕ್ರಮಿ. ಒಂದು ಸಾರಿ ಮಳೆಗಾಲದಲ್ಲಿ ಹಲವು ಬ್ರಾಹ್ಮಣರು ಅವರ ಮನೆಗೆ ಆಗಮಿಸಿದ್ದಾರೆ. ಅವರೆಲ್ಲಾ ಆತನ ಮನೆಯಲ್ಲೇ ಚಾತುರ್ಮಾಸ್ಯ ವ್ರತ -ಅಂದರೆ ನಾಲ್ಕು ತಿಂಗಳ ಪರ್ಯಂತ ಭಕ್ತಿಯುತ ಕಾರ್ಯಕ್ರಮಗಳನ್ನು ಮಾಡಬೇಕೆಂದು ನಿರ್ಣಯಿಸಿ ಕೊಂಡಿದ್ದಾರೆ. ಆ ಸಮಯದಲ್ಲಿ ಎಲ್ಲರೂ ಸ್ತ್ರೀಸಾಂಗತ್ಯದಿಂದ, ಸುಖಭೋಜನಗಳಿಂದ, ದೂರವಿರುತ್ತಾರೆ. ಅದಕ್ಕೆ ಈ ಮಹಾತ್ಮರ ಸೇವೆಯಲ್ಲಿ ದಾಸೀ ಪುತ್ರರಾದ ನಾರದರು ಪಾಲ್ಗೊಳ್ಳಬೇಕಾಗಿ ನೇಮಿಸಲ್ಪಟ್ಟಿದೆ. ಆಗ ಆತನ ವಯಸ್ಸು ಕೇವಲ ಐದು ವರ್ಷ.

ಮಹಾತ್ಮರೆಲ್ಲರೂ ನಸುಕಿನಲ್ಲೇ ಎದ್ದು. ದೈನಂದಿನ ಕ್ರಿಯೆಗಳನ್ನು ತೀರಿಸಿಕೊಂಡು, ಭಗವಂತನಿಗೆ ಮಂಗಳಾರತಿ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದು, ಜಪ-ತಪಗಳನ್ನಾಚರಿಸುವುದು, ನಂತರ ಕಥಾಶ್ರವಣ ಮಾಡುವುದು, ನಂತರ ಭಗತ್ಪ್ರಸಾದ ಸೇವೆನೆಯನ್ನು ಮಾಡುವುದು. ಐದು ವರ್ಷದ ಬಾಲಕನಾದ ನಾರದರೂ ಸಹಾ ತನ್ನ ಆಟ ಪಾಠಗಳನ್ನು ಬಿಟ್ಟು ಬಿಟ್ಟು ಅವರ ಸೇವೆಯಲ್ಲೇ ನಿರತನಾಗಿದ್ದಾನೆ. ಒಂದು ದಿನ, ಆತನು iಹಾತ್ಮರಾದ ಅವರೆಲ್ಲಾ ಊಟ ಮಾಡಿದ ಎಲೆಯಲ್ಲಿ ಉಳಿದಿರುವ ಎಂಜಲನ್ನವನ್ನು ಅವರ ಅನುಮತಿಯಿಂದ ತಿಂದಿದ್ದಾನೆ. ಅವರ ಉಚ್ಛಿಷ್ಠ ಸೇವನೆದಿಂದಾಗ ಬಾಲಕನಲ್ಲಿ ಒಂದು ತೆರನಾದ ದಿವ್ಯ ಬದಲಾವಣೆ ಅವರಿಸಿದೆ. ಕೃಷ್ಣ ಕಥೆಯ ರುಚಿ ಉಂಟಾಗಿದೆ. ತತ್ರಾಸ್ವಹಂ ಕೃಷ್ಣ ಕಥಾ ಪ್ರಗಾಯತಾ ಎಂದು ನಾರದರೇ ಸ್ವತಃ ಹೇಳಿದ್ದಾರೆ. ಮಹಾತ್ಮರೆಲ್ಲರೂ ಕೃಷ್ಣಕಥಾಶ್ರವಣ ಮಡುತ್ತಿದ್ದರೆ, ಅದು ಆತನ ಕರಣಕ್ಕೆ ಮಧುರವಾಗಿನ್ನಿಸಿದೆ. ಅವರ ಸೇವೆಯಲ್ಲಿ ಆತನು ಮತ್ತಷ್ಟು ನಿಗಾವಹಿಸಿದ್ದಾನೆ. ಆ ರೀತಿಯಲ್ಲೇ ನಾಲ್ಕು ತಿಂಗಳುಗಳು ಗತಿಸಿವೆ.

ನಂತರ ಅವರೆಲ್ಲರೂ ತಂತಮ್ಮ ಊರುಗಳಿಗೆ ಹೊರಡುತ್ತಾ ಆ ಬಾಲಕನ ಮೇಲಿನ ಪ್ರೀತಿಯಿಂದ, ಕರುಣೆಯಿಂದ ಭಗವಂತನ ಕುರಿತಾದ ಒಂದು ಪರಮ ರಹಸ್ಯ ಜ್ಞಾನವನ್ನು ಬಾಲಕನಿಗೆ ಬೋಧಿಸಿ ಹೊರಟು ಹೋಗಿದ್ದಾರೆ. ಇಷ್ಟರಲ್ಲಿ ಆತನ ತಾಯಿ ಹಾವಿನ ಕಡಿತದಿಂದ ಮರಣಿಸಿದ್ದಾಳೆ. ಇವೆಲ್ಲ ಭಗವಂತನ ಸಂಕಲ್ಪವೆಂದೇ ಭಾವಿಸಿದ ಬಾಲಕನು ಮನೆಬಿಟ್ಟು ಉತ್ತರ ದಿಕ್ಕಗೆ ಹೊರಟ ಹೋಗಿದ್ದಾನೆ. ನಗರಗಳನ್ನು, ಪಟ್ಟಣಗಳನ್ನು, ಗ್ರಾಮಗಳನ್ನು, ಪ್ರಾಣಿಕ್ಷೇತ್ರಗಳನ್ನು, ವನಗಳನ್ನು, ಬೇಸಾಯ ಕ್ಷೇತ್ರಗಳನ್ನು, ಕಣಿವೆಗಳನ್ನು, ಅರಣ್ಯಗಳನ್ನು, ದಾಟುತ್ತಾ ಆತನು ಅಂಧಕಾರ ರೂಪವಾದ ಕೀಕಾರಣ್ಯವನ್ನು ಪ್ರವೇಶಿಸಿದ್ದಾನೆ. ಹಾಗೇ ಪಯಣಿಸುತ್ತಾ ಆತನು ತುಂಬಾ ದಣಿವಾಗಿದ್ದಾನೆ. ಅಲ್ಲೇ ಆತನಿಗೆ ಒಂದು ನಿರ್ಮಲವಾದ ನದಿತೀರ ಕಾನಿಸಿದೆ. ಅದರಲ್ಲಿ ಇಳಿದು ಸ್ನಾನ ಮಾಡಿ, ಸ್ವಲ್ಪ ನೀರನ್ನು ಕುಡಿದು, ಪಕ್ಕದಲ್ಲೇಯಿದ್ದ ಅರಳಿ ಮರದ ನೆರಳಿನಲ್ಲಿ ಕುಳಿತು ಹೃದಯದಲ್ಲಿರುವ ಪರಮಾತ್ಮನನ್ನು ಧ್ಯಾನಿಸಿದ್ದಾನೆ. ಅಷ್ಟೇ! ಮರುಕ್ಷಣದಲ್ಲೇ ಆತನ ಹೃದಯದಲ್ಲಿ ಕೃಷ್ಣದರ್ಶನವಾಗಿದೆ. ಇದರಿಂದಾಗಿ ಬಾಲಕನು ಧ್ಯಾನದಲ್ಲಿದ್ದಾಗ್ಯೂ ಕಣ್ಣುಗಳು ಅಶ್ರುಪೂರ್ಣವಾಗಿದೆ. ಆತನ ತನು ಪುಳಕಿತವಾಗಿದೆ – ಮನ ಪುಳಕಿತಗೊಂಡಿದೆ. ಅಷ್ಟರಲ್ಲೇ ಆತನ ಹೃದಯದಿಂದ ಆ ಕೃಷ್ಣ ರೂಪವು ಅದೃಶ್ಯವಾಗಿದೆ.

ಮತ್ತೆ ಆ ಬಾಲಕನು ಧ್ಯಾನದಲ್ಲಿ ಕೃಷ್ಣನನ್ನು ಕಾಣಬೇಕೆಂದು ಹಂಬಲಿಸಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ. ಆದರೆ ಆಗ ಭಗವಂತನೇ ಸ್ವತಃ ಮಾತಾಡುತ್ತಾ ವತ್ಸ! ಈ ಜನ್ಮದಲ್ಲಿ ನಾನಿನ್ನು ನಿನಗೆ ಕಾಣಿಸುವುದಿಲ್ಲ. ನನ್ನ ಮೇಲಿನ ಪ್ರೀತಿ ವೃದ್ದಿಯಾಗಲೆಂದೇ ನಿನಗೆ ಕ್ಷಣ ಕಾಲ ದರ್ಶನವನಿತ್ತಿದ್ದೇನೆ.ನನ್ನ ಭಕ್ತಿಯಲ್ಲಿ ನಿಂತ ನಿನಗೆ ಎಂದೂ ದಿವ್ಯಸ್ಮರಣೆ ಭಂಗವಾದುದು. ನಿನ್ನ ಮುಂದಿನ ಜನ್ಮದಲ್ಲಿ ನೀ ನನಗೆ ಕೀರ್ತನಕಾರನಾಗುತ್ತೀ ಎಂದು ಹೇಳಿದ್ದಾನೆ. ಆಗ ಬಾಲಕನು ಬಾಗಿ ಭಗವಂತನಿಗೆ ನಮಸ್ಕರಿಸಿ, ಹರಿ ನಾಮ ಕೀರ್ತನೆಗೈಯುತ್ತಾ ಭೂಮಂಡಲವನ್ನೆಲ್ಲಾಸುತ್ತಿದ್ದಾನೆ. ನಂತರ ಕಲ್ಪಾಂತ್ಯದಲ್ಲಿ ಪ್ರಳಯವುಂಟಾಗಿ, ಸಮಸ್ತ ಬ್ರಹ್ಮಾಂಡಗಳು ನಶಿಸಿ ಹೋಗಿವೆ. ಆಗ ಆ ಬಾಲಕನು ಬ್ರಹ್ಮ ಸ್ಥಾನದಂತೆ ನಾರಾಯಣನ ದೇಹವನ್ನೇ ಪ್ರವೇಶಿಸಿದ್ದಾನೆ.

ತದನಂತರ ಬೇರೊಂದು ಕಲ್ಪದಲ್ಲಿ ಸೃಷ್ಟಿ ಕಾರ್ಯಕ್ಕಾಗಿ ಬ್ರಹ್ಮದೇವನು ಆವಿರ್ಭವಿಸಲು ಮರೀಚಾದಿ ಋಷಿಗಳೊಡನೆ ಆತನೇ ದೇವರ್ಷಿ ನಾರದನಾಗಿ ಅವತರಿಸಿದ್ದಾನೆ. ಇದೇ ನಾರದನ ಮೂರನೇ ಜನ್ಮ. ಭಗವಂತನ ಮೇಲಿನ ಅನನ್ಯವಾದ ಭಕ್ತಿ ಕಾರಣದಿಂದಾಗಿ ಭಗವತ್ಕೃಪೆಯಿಂದಾಗಿ ಆತನು ಶಕ್ತ್ಯಾವೇಶ ಅವತಾರನಾಗಿದ್ದಾನೆ. ನಿರಂತರವಾದ ಹರಿನಾಮ ಕೀರ್ತನೆಯಿಂದಾಗಿ ಜನರೆಲ್ಲರಿಗೂ ಮಂಗಳವನ್ನು ಕೋರುತ್ತಾ ಆತನು ನಿರಾತಂಕನಾಗಿ ಸರ್ವಲೋಕಗಳಲ್ಲಿ ಸಂಚರಿಸುವವನಾಗಿದ್ದಾನೆ. ಈ ಮಹನೀಯನೇ ತನ್ನ ಶಿಷ್ಯನಾದ ವ್ಯಾಸ ಮಹರ್ಷಿಯನ್ನು ಭೇಟಿ ಮಾಡಿ ಆತನ ಚಿಂತೆಗೆ ಕಾರಣವನ್ನು ಅರ್ಥೈಸಿಕೊಂಡು ಆ ಚಿಂತೆ ತೊಲಗಲು ಶ್ರೀ ಮದ್ಭಾಗವತ ರಚನೆಯನ್ನು ಮಾಡಬೇಕೆಂದು ಉಪದೇಶಿಸುತ್ತಾನೆ. ಈ ರೀತಿಯಾಗಿ ದೇವರ್ಷಿನಾರದರು ವ್ಯಾಸರ ಗುರುಗಳಾಗಿದ್ದಾರೆ. ಅವರ ಆದೇಶದ ಮೇರೆಗೆ ವ್ಯಾಸ ಮಹರ್ಷಿಯು ಶ್ರೀಮದ್ಭಾವತವನ್ನು ರಚಿಸಿ ಲೋಕ ಸಮರ್ಪಣೆ ಮಾಡಿದ್ದಾರೆ. ಈ ವಿಧವಾಗಿ ಭಾಗವತಾಮೃತವು ಈ ಜಗತ್ತಿನಲ್ಲೇ ಪ್ರವಹಿಸಲು ಕಾರಣ ಕರ್ತರು ಶ್ರೀ ನಾರದರು.

ಭಕ್ತ ಪ್ರಹ್ಲಾದರು ತಾಯಿ ಗರ್ಭದಲ್ಲಿರುವಾಗಲೇ ಶ್ರೀ ಹರಿಯ ಭಕ್ತಿಯನ್ನು ಬಿತ್ತಿ ಆತನನ್ನು ಭಕ್ತ ಶಿರೋಮಣಿಯನ್ನಾಗಿ ಮಾಡಿದ್ದು ಈ ನಾರದರೇ. ಆ ಬಳಿಕ ಮಲ ತಾಯಿಯ ಮೇಲಿನ ಕೋಪದಿಂದ ಕಾಡಿಗೆ ಹೋದ ಭಕ್ತ ಧ್ರುವನಿಗೆ ಓಂ ನಮೋ ಭಗವತೇ ವಾಸುದೇವಾಯ ಎಂಬ ಅಷ್ಟಾಕ್ಷರಿ ಮಂತ್ರವನ್ನು ಉಪದೇಶಿಸಿ, ಆರು ತಿಂಗಳುಗಳಲ್ಲಿಯೇ ಭಗವದ್ಧರ್ಶನ ಕಲ್ಪಿಸಿದ ಅಮೋಘವಾದ ಮಾರ್ಗದರ್ಶಕರು ನಾರದರೇ. ನಲಕೂಬರ, ಮಣಿಗ್ರೀವರೆಂಬ ಕುಬೇರ ಪುತ್ರರಿಗೆ ಶಾಪ ಕೊಟ್ಟ ಅವರಿಗೆ ದ್ವಾಪರಯುಗದಲ್ಲಿ ಕೃಷ್ಣ ಸಂದರ್ಶನವನ್ನು ಕಲ್ಪಿಸಿದುದು ಸಹ ನಾರದರೇ, ಅನುಕೂಲವಾಗಿಯೇ ಆಗಲೀ, ಪ್ರತಿಕೂಲವಾಗಿಯೇ ಆಗಲೀ, ಯಾರು ತಮ್ಮ ಸಾಂಗತ್ಯದಲ್ಲಿ ಬರುವರೋ ಅವರಿಗೆ ಉತ್ತಮಭಕ್ತಿ, ಕೃಷ್ಣ ಪ್ರೇಮವನ್ನು ಕಲ್ಪಿಸುವ ಪರಮ ಭಾಗವತರೇ ಈ ದೇವರ್ಷಿನಾರದರು.

ವಾಸ್ತವದಲ್ಲಿ ನಾರದರು ಸತತವಾಗಿ ತಿರುಗುತ್ತಿರಲು ಸಹ ಒಂದು ಕಾರಣವಿದೆ. ದಕ್ಷನಿಗೆ ಹತ್ತು ಸಾವಿರ ಮಂದಿ ಪುತ್ರರು. ನಾರದರು ಅವರಿಗೆ ಭಕ್ತಿ ಬೋಧನೆಯನ್ನು ಮಾಡಿ ಅವರನ್ನು ಜ್ಞಾನವಂತರನ್ನಾಗಿ ಮಾಡಿದ್ದಾರೆ. ಅವರೆಲ್ಲಾ ಕಾಮ್ಯಾಪೇಕ್ಷೆಗಳನ್ನು ತೊರೆದು ಭಗವದ್ಭಾಮಕ್ಕೆ ಹೊರಟು ಹೋಗಿದ್ದಾರೆ. ನಂತರ ದಕ್ಷನು ಮತ್ತೆ ಸಾವಿರ ಮಂದಿ ಸುತರಿಗೆ ಜನ್ಮವಿತ್ತಿದ್ದಾನೆ. ಅವರನ್ನು ಸಹಾ ನಾರದರು ಹರಿ ಭಕ್ತರನ್ನಾಗಿ ಮಾರ್ಪಡಿಸಿದ್ದಾನೆ. ಇದರಿಂದ ದಕ್ಷನಿಗೆ ಎಲ್ಲಿಲ್ಲದ ಕೋಪ ಬಂದಿದೆ. ತನ್ನ ಪುತ್ರರೆಲ್ಲರನ್ನೂ ಭಕ್ತರನ್ನಾಗಿಸಿ ಸನ್ಯಾಸಿಗಳನ್ನಾಗಿ ಮಾಡಿದ ಕಾರಣ ನಾರದರಿಗೂ ತಿರುಗುತ್ತಲೇ ಇರಬೇಕೆಂದು ದಕ್ಷನು ಶಾಪವಿತ್ತಿದ್ದಾನೆ. ಆ ಶಾಪವನ್ನು ನಾರದರು ವರವನ್ನಾಗಿಸಿ, ಒಂದು ಕ್ಷಣವೂ ಎಲ್ಲಿಯೂ ನಿಲ್ಲದಂತೆ, ತಿರುಗುತ್ತಾ, ಶ್ರೀಕೃಷ್ಣನಾಮ ಸಂಕೀರ್ತನೆಯನ್ನು ಮಾಡುತ್ತಾ ಜನರಿಗೆ ಮಂಗಳವನ್ನು ನಂದಿಸುತ್ತಾನೆ. ತ್ರಿಲೋಕ ಸಂಚಾರಿಯಾದ ಶ್ರೀನಾರದರು ಭಗವತಾರಮೂರ್ತಿಯಾಗಿ ಭಗವದ್ಭಕ್ತಿಯನ್ನ ನಿರಂತರವಾಗಿ ಪ್ರಚಾರ ಮಾಡುತ್ತಾ ಭಕ್ತರೆಲ್ಲರಿಗೆ ಪೂಜನೀಯರಾಗಿದ್ದಾರೆ.

ರಾಮಾಯಣದ ರಚನೆಗೆ ಮೂಲ ಪ್ರೇರಣೆ
ಅಂದಿಗೂ ಇಂದಿಗೂ ಎಂದೆಂದಿಗೂ ಜಗತ್ತಿನ ಶ್ರೇಷ್ಠ ಗ್ರಂಥವಾಗಿರುವ ರಾಮಾಯಣದ ರಚನೆಗೆ ಮೂಲ ಪ್ರೇರಣೆ ನಾರದರದೇ ಅಲ್ಲವೇ. ದಾರಿಹೋಕರ ತಲೆ ಒಡೆದು, ಅವರ ಬಳಿ ಇರುವುದನ್ನೆಲ್ಲ ದೋಚಿ ಜೀವನ ನಡೆಸುತ್ತಿದ್ದ ಒಬ್ಬ ದರೋಡೆಕೋರನನ್ನು ಮಹರ್ಷಿಯನ್ನಾಗಿ ಪರಿವರ್ತಿಸಿದ ಮೂಲ `ರಾಮ’ ಮಂತ್ರವನ್ನು ಆ ದರೋಡೆಕೋರನಿಗೆ ಕಲಿಸಿದವರು ನಾರದರೇ ಅಲ್ಲವೇ. ಆದಿ ಕಾವ್ಯದ ಆದಿ ಕವಿಯನ್ನು ನಿರ್ಮಿಸಿದವರು ನಾರದರೇ ಅಲ್ಲವೇ.

ವಾಲ್ಮೀಕಿ ಯಾರು? ಅವರ ಪೋರ್ವೋತ್ತರ ಏನು? ಪ್ರಾಚೇತಸ ಎಂಬ ಋಷಿಯ ಮಗ ರತ್ನಾಕರ. ಬಾಲಕನಾಗಿದ್ದಾಗಲೇ ಒಮ್ಮೆ ದಾರಿ ತಪ್ಪಿ ಕಾಡು ಸೇರಿದವನಂತೆ. ದರೋಡೆಕೋರರ ಗುಂಪು ಸೇರಿ ತನ್ನ ತಂದೆ ತಾಯಿಯನ್ನೇ ಮರೆತನಂತೆ. ಬೇಡರ ಕನ್ಯೆಯನ್ನು ವಿವಾಹವಾಗಿ ಮಕ್ಕಳನ್ನು ಪಡೆದ. ಕುಟುಂಬ ನಿರ್ವಹಣೆಗೆ ದರೋಡೆ ವೃತ್ತಿಯನ್ನು ಅನುಸರಿಸಲಾರಂಭಿಸಿದ.

ಸರ್ವಾಂತರ್ಯಾಮಿಯಾದ ನಾರದರು ಒಮ್ಮೆ ರತ್ನಾಕರನ ಕೈಗೆ ಸಿಕ್ಕಿಬಿದ್ದರು. ಅವರ ಮಾತುಗಳಿಂದ ತಾನು ಮಾಡುತ್ತಿರುವ ಕೆಲಸ ಅಪರಾಧವೆಂಬ ಭಾವನೆ ಅವನಲ್ಲಿ ಮೂಡಿತು. ಹೆಂಡತಿ ಮಕ್ಕಳೂ ಅವನ ಪಾಪದ ಕೆಲಸವನ್ನು ಒಪ್ಪಲಿಲ್ಲ. ಆಗ ನಾರದರು `ರಾಮ’ ನಾಮ ಜಪಿಸುವಂತೆ ಅವನಿಗೆ ಹೇಳಿದರು. ಆ ದರೋಡೆಕೋರನಿಗೆ ರಾಮ ಎನ್ನಲು ಬಾಯಿ ತಿರುಗಲಿಲ್ಲವಂತೆ. ಆಗ ಎದುರಿಗೆ ಇದ್ದ ಮರ ಒಂದನ್ನು ತೋರಿಸಿ ಅದು ಏನು ಎಂದರಂತೆ. ಆಗ ಅವನು ಅದು `ಮರ’ ಎಂದು ಸುಲಭವಾಗಿ ಉಚ್ಚರಿಸಿದನಂತೆ. ಅದನ್ನೇ ಹೇಳುತ್ತಾ ಹೋಗು ಅದು `ರಾಮ ಎಂದಾಗುತ್ತದೆ ಮರ ಒಂದನ್ನು ತೋರಿಸಿ ಅದುಏನು ಎಂದರಂತೆ. ಆಗ ಅವನು ಅದು `ಮರ’ ಸುಲಭವಾಗಿ ಉಚ್ಚರಿಸಿದನಂತೆ. ಅದನ್ನೇ ಹೇಳುತ್ತಾ ಹೋಗು ಅದು `ರಾಮ’ ಎಂದಾಗುತ್ತದೆ ಎಂದರಂತೆ. ಅವರ ಮಾತಿನಲ್ಲಿ ಭಕ್ತಿ ಶ್ರದ್ಧೆಗಳನ್ನಿರಿಸಿ `ರಾಮ, ರಾಮ’ ಎಂದು ಜಪಿಸುತ್ತಾ ಕುಳಿತಾಗ ಕಾಲ ಉರುಳಿ ಅವನ ಸುತ್ತ ಹುತ್ತ ಬೆಳದರೂ ಅವನು ಬಾಹ್ಯ ಪರಿಜ್ಞಾನವಿಲ್ಲದೆ ರಾಮಜಪದಲ್ಲಿ ಮುಳುಗಿಹೋದನಂತೆ.

ಮತ್ತೊಮ್ಮೆ ಆ ಮಾರ್ಗದಲ್ಲಿ ಬಂದ ನಾರದರಿಗೆ ರತ್ನಾಕರನ ಸುತ್ತ ಹುತ್ತ ಬೆಳೆದಿರುವುದು ಕಂಡುಬಂದು ಅವರು ಅದನ್ನು ತೆರವುಗೊಳಿಸಿದರಂತೆ. ಅಷ್ಟು ಕಾಲ ರಾಮ ಜಪ ಮಾಡಿದ್ದರಿಂದ ರತ್ನಾಕರ ಭಗವಂತನ ಕೃಪೆಗೆ ಪಾತ್ರನಾಗಿ ಜ್ಞಾನಿಯಾಗಿ ಹೊರಹೊಮ್ಮಿದ. ಭಗವಂತನೇ ರತ್ನಾಕರನನ್ನು ಬ್ರಹ್ಮರ್ಷಿ ಎಂದು ಕರೆದು ವಲ್ಮೀಕದಿಂದ ಹೊರ ಹೊಮ್ಮಿದ ಆ ಮಹಾಕವಿಗೆ ವಾಲ್ಮೀಕಿ ಎಂದು ಹೆಸರಿಟ್ಟನಂತೆ.

ವಾಲ್ಮೀಕಿ ಋಷಿಯಾಗಿ ಒಂದು ಆಶ್ರಮ ನಿರ್ಮಿಸಿ ಅಲ್ಲಿಯೇ ವಾಸಿಸಲಾರಂಭಿಸಿದರು. ಮತ್ತೊಮ್ಮೆ ಅಲ್ಲಿಗೆ ಬಂದ ನಾರದರು ಅವರಿಗೆ ಶ್ರೀರಾಮಚಂದನ ಕಥೆ ಹೇಳಿದರಂತೆ.

ಶ್ರೀರಾಮನ ಕಥೆಯನ್ನೇ ಮೆಲುಕು ಹಾಕುತ್ತಲಿದ್ದಾಗ ವಾಲ್ಮೀಕಿ ಋಷಿಗಳಿಗೆ ಬ್ರಹ್ಮನ ದರ್ಶನವಾಗಿ ಶ್ಲೋಕಗಳ ಮೂಲಕ ರಾಮಕಥೆಯನ್ನು ರಚಿಸಲು ಆದೇಶಿಸಿದನಂತೆ. ಆ ಆದೇಶವನ್ನು ಪಾಲಿಸಲುಪಕ್ರಮಿಸಿದ ವಾಲ್ಮೀಕಿಗಳಿಗೆ ಬಂದ ಅಡ್ಡಿ ಆತಂಕಗಳು ಅನೇಕ. ಶಿಷ್ಟ ಶಕ್ತಿಗಳನ್ನು ನಾಶಪಡಿಸುವ ದುರುದ್ದೇಶದ ದುಷ್ಟ ಶಕ್ತಿಗಳಾದ ಭೂತ, ಪಿಶಾಚಿ, ಬ್ರಹ್ಮ ರಾಕ್ಷಸರು ಬಂದು ವಾಲ್ಮಿಕಿಗಳನ್ನು ಸುತ್ತುವರಿದು ಅವರಿಗೆ ಕಾವ್ಯ ರಚನೆಯ ತಪೋಭಂಗ ಮಾಡಲು ಘೀಂಕರಿಸುತ್ತಾ, ಹೂಂಕರಿಸುತ್ತಾ ಕುಣಿಯಲಾರಂಭಿಸಿದವಂತೆ. ಬ್ರಹ್ಮ ರಾಕ್ಷಸರು ಅವರ ಬೆನ್ನ ಮೇಲೆ ಮೊನಚಾದ ಉಗುರುಗಳಿಂದ ಪರಚಲಾರಂಭಿಸಿದರಂತೆ. ಆದರೆ ಯಾವುದನ್ನೂ ಲೆಕ್ಕಿಸದೆ ರಾಮಯಣ ಮಹಾಕಾವ್ಯ ಬರೆದು ಮುಗಿಸಿ ವಾಲ್ಮೀಕಿ ಮಹರ್ಷಿಗಳು ಆಚಂದ್ರಾರ್ಕ ಬರೆದು ಮುಗಿಸಿ ವಾಲ್ಮೀಕಿ ಮಹರ್ಷಿಗಳು ಅಚಂದ್ರಾರ್ಕ ಕೀರ್ತಿ ಭಾಜನರಾದರು. ಇದೆಲ್ಲಕ್ಕೂ ಮೂಲ ಪ್ರೇರಣೆ, ಮಾರ್ಗದರ್ಶನ ನಾರದರೇ ಅಲ್ಲವೇ.

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾಂಬರೀಶ ಶುಕ ಶಾನಕ ಭೀಷ್ಮದಾಲ್ಬ್ಯಾನ್ |
ಋಕ್ಮಾಂಗದಾರ್ಜುನ ವಸಿಷ್ಠ ವಿಭಿಷಣಾದೀನ್
ಪುಣ್ಯಾನ್ ಇಮಾನ್ ಪರಮ ಭಾಗವತಾನ್ ಸ್ಮರಾಮಿ ||

ಇದು ಪಾರಂಪರಿಕವಾಗಿ ಹೇಳುತ್ತಾ ಬಂದಿರುವ ಪ್ರಾತಃಸ್ಮರಣೆಯ ಒಂದು ಶ್ಲೋಕ. ಪರಮ ಭಾಗವತರ ಸಾಲಿನಲ್ಲಿ ಎರಡನೆಯ ಹೆಸರೇ ನಾರದರದು. ಅನೇಕ ಪೌರಾಣಿಕ ಘಟನೆಗಳಿಗೆ ಕಾರಣೀಭೂತರಾದ ನಾರದ ಮಹರ್ಷಿಗಳು ಭಾರತೀಯರ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮಹಾಮಹಿಮರು.

ನಾರದ ಮುನಿಗಳ ಪ್ರಸ್ತುತತೆ
ನಾರದ ಭಕ್ತಿಸೂತ್ರ 75-77 ಶ್ಲೋಕಗಳಲ್ಲಿ ವಿಸ್ತೃತ ಚರ್ಚೆಯ ನಿರುಪಯುಕ್ತತೆಯನ್ನು ಹೇಳಲಾಗಿದೆ. ಇದು ಭಕ್ತಿಯೋಗದ ಅನುಷ್ಠಾನಕ್ಕೆ ಮಾತ್ರ ಅನ್ವಯವಾಗದೇ ಮಾಧ್ಯಮ ರಂಗಕ್ಕೂ ಅನ್ವಯವಾಗುವಂತಿದೆ . ಕೊನೆಗೊಳ್ಳದ ಮತ್ತು ಉಪಯೋಗರಹಿತ ಟಿ.ವಿ. ಚರ್ಚೆಗಳ ಇಂದಿನ ದಿನಗಳಲ್ಲಿ ಈ ಅಭಿಪ್ರಾಯ ಬಲಗೊಳ್ಳುತ್ತಿದೆ. ನಾರದ ಮುನಿಗಳ ಪ್ರಸ್ತುತತೆ ಸ್ವರಾಜ್ಯ ಸುರಾಜಜ್ಯ, ಪತ್ರಿಕೋದ್ಯಮ, ಸಂವಹನ, ಸಂಪರ್ಕ ಇವುಗಳ ಸಂಬಂಧೀ ಚರ್ಚೆಯಲ್ಲಿ ಮಹತ್ವದ್ದಾಗಿದೆ. ವಸಾಹತು ಮನಃಸ್ಥಿತಿಯಿಂದ ಹೊರಬರಲು, ಅವ್ಯವಸ್ಥೆಯ ರಾಜ್ಯ ವ್ಯವಸ್ಥೆಯನ್ನು ಸರಿಪಡಿಸಲು ಅವನತಿಗಿಳಿದಿರುವ ಪತ್ರಿಕಾ ಧರ್ಮವನ್ನು ಪುನಃ ಸ್ಥಾಪಿಸಲು ನಾರದ ಮುನಿಗಳು ಇಂದು ಎಂದಿಗಿಂತಲೂ ಪ್ರಸ್ತುತವಾಗಿದ್ದಾರೆ.

(ವಿವಿಧ ಮೂಲಗಳಿಂದ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Dr Gururaj PoshettihalliKannada NewsKannada News LiveKannada News OnlineKannada News WebsiteKannada WebsiteLatest News KannadaNaradaNews in KannadaNews KannadaRamayanaನಾರದರಾಮಾಯಣ
Previous Post

ದೊರೆಸ್ವಾಮಿ ನಿಧನಕ್ಕೆ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ  ಜೀರಿಗೆ ಲೋಕೇಶ್ ಕಂಬನಿ

Next Post

ನಾಯಿಗೆ ಬಲೂನ್ ಕಟ್ಟಿ ಹಾರಿಸಿದ ಯೂಟ್ಯೂಬರ್ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಾಯಿಗೆ ಬಲೂನ್ ಕಟ್ಟಿ ಹಾರಿಸಿದ ಯೂಟ್ಯೂಬರ್ ಬಂಧನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!