ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಾಮಾಜಿಕ ಕಳಕಳಿಯೊಂದಿಗೆ ಯುವಕನೋರ್ವ ಉತ್ತಮ ಮಹತ್ವಾಕಾಂಕ್ಷೆಯೊಂದಿಗೆ ಸೈಕಲ್ ಸವಾರಿ ಹೊರಟಿರುವುದು ಅಚ್ಚರಿಯ ವಿಶೇಷವಾಗಿದೆ.
ಹೌದು… ಒಡಿಸ್ಸಾದ ತಪುಧಾನ್ ಹಾಗೂ ದ್ರೌಪದಿ ಅವರ ಪುತ್ರ ನಂದಿ ಎಂಬ 26ರ ಹರೆಯದ ಯುವಕ. ಬಿಎ ಪದವೀಧರನಾದ ಈತ ತನ್ನ ಸೈಕಲ್‌ಗೆ ತ್ರಿವರ್ಣ ಧ್ವಜ ಕಟ್ಟಿಕೊಂಡು ಪರಿಸರ ಉಳಿಸಿ ಎಂಬ ಅಭಿಯಾನ ಮಾಡುತಿದ್ದು, ಈಗಾಗಲೇ ಭಾರತದ 27 ರಾಜ್ಯಗಳ ಪಯಣ ಮುಗಿಸಿದ್ದಾನೆ. ಬೆಂಗಳೂರಿನ ಬನಶಂಕರಿಯಲ್ಲಿ ಆಕಸ್ಮಿಕವಾಗಿ ಸಿಕ್ಕ ಈ ಯುವಕನೊಂದಿಗೆ ಮಾತನಾಡಿದಾಗ, ತಾನು ಒಂದುವರೆ ವರ್ಷದಿಂದ ನಿರಂತರವಾಗಿ ಸೈಕಲ್ ಸವಾರಿ ಮಾಡಿಕೊಂಡೆ ದೇಶದೆಲ್ಲೆಡೆ ಪ್ರಯಾಣ ಮಾಡುತ್ತಿದ್ದು, ಈಗಾಗಲೇ 27 ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ತನ್ನ ಮುಂದಿನ ಪಯಣ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಬಳಿಕ ಒಡಿಸ್ಸಾಕ್ಕೆ ತೆರಳಿ ತನ್ನ ಪ್ರಯಾಣ ಅಂತಿಮಗೊಳಿಸಲಿದ್ದೇನೆ ಎಂದು ತಿಳಿಸಿದರು.

ಚಿತ್ರ, ಮಾಹಿತಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post