ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ತಾಯಿ ಕನ್ನಡಾಂಬೆ ಮಡಲಲ್ಲಿ ಜನಿಸಿದ ನಾವೇ ಭಾಗ್ಯವಂತರು ಈ ದೇಶದ ಇತಿಹಾಸ ಪುಟಗಳನ್ನ ನೋಡುತ್ತಾ ಹೋದರೆ ಕನ್ನಡ ನಾಡಿನ ಕೊಡುಗೆ ಅಪಾರವಾಗಿದೆ ಶಿಲ್ಪಕಲೆಗಳ ನಾಡಲ್ಲಿ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ನ, ಒನಕೆ ಒಬೌವ, ಕೃಷ್ಣದೇವರಾಜ, ಶಿವಪ್ಪನಾಯಕ, ಇನ್ನು ಅನೇಕ ರಾಜರು ಈ ಕನ್ನಡ ನಾಡಲ್ಲಿ ನಾಡು ನುಡಿ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ, ಇದು ಕವಿಗಳನಾಡು ಮಾತೃ ಭಾಷೆ ಕನ್ನಡಕ್ಕೆ ನೋಟಿನಲ್ಲಿ 3ನೇ ಸ್ಥಾನ ಇದೆ ಎಂದರೆ ಪ್ರಪಂಚದ ಅದ್ಬುತಗಳ ಸಾಲಿನಲ್ಲಿ ಕನ್ನಡನಾಡು ನುಡಿ ಹಿರಿಮೆ ಊಹಿಸಲು ಸಾಧ್ಯವೇ! ನಮ್ಮ ಕನ್ನಡಿಗರು ಪ್ರೇಮ ಭಾವ ಆಧರಣಿಯ ಸೃಜನ ಶೀಲರು, ಕನ್ನಡಭಾಷೆ ಎಷ್ಟು ಸುಂದರ ಅರ್ಥಪೂರ್ಣ ವಾಕ್ಯ ರಚಿಸಬಲ್ಲ ಭಾಷೆ ಇದನ್ನು ಕೊಟ್ಟ ಕರುನಾಡ ಪುಣ್ಯವಂತ ನಮ್ಮ ಪೂರ್ವಜರಿಗೆ ಕೋಟಿ ಕೋಟಿ ನಮನಗಳು.
ಕಾರ್ಮೋಡದ ಕಣ್ಣಂಚಲಿ
ಬಾನಂಗಳದ ಸಂಚಿನ ಮಿಂಚೊಂದುಗುಟ್ಟಾರು ಬಿಟ್ಟಾತು, ಓ ತಾಯಿ ನಿನ್ನಂತರಾಳದಲ್ಲಿ ಉರಿಯುತಿದೆ ಕನ್ನಡದ ಜ್ವಾಲಾಮುಖಿ ಈ ಜಗದ ತಾಯಿ ಒಂದೇ ನೀನು ನಿನಗೆ ಎಂದು ಶರಣು ನಾನು.
ಲೇಖನ: ವಸಂತಕುಮಾರ ಭದ್ರಾವತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post