ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಇದೀಗ ಎಲ್ಲಾ ತುಳುವರ ಕುತೂಹಲ ಇರುವುದು ತುಳು ಸಾಹಿತ್ಯ ಅಕಾಡೆಮಿಯ ಸಾರಥ್ಯ ವಹಿಸುವವರು ಯಾರು. ಆಕಾಂಕ್ಷಿಗಳು ಬಹಳ ಜನರಿದ್ದಾರೆ. ಆದರೆ ಹೆಚ್ಚಿನ ಜನರ ಅಭಿಪ್ರಾಯ. ಸುಧಾಕರ ಬನ್ನಂಜೆ Sudhakar Bannanje ಅವರು ಈ ಸ್ಥಾನಕ್ಕೆ ಸಮರ್ಥ ವ್ಯಕ್ತಿ.
ಯಾರಿದು ಸುಧಾಕರ ಬನ್ನಂಜೆ?
ಇವರು ನಾಟಕಕಾರ, ಸಾಹಿತಿ, ಯಕ್ಷಗಾನ ಕಲಾವಿದ, ಪತ್ರಕರ್ತ, ಸಮಾಜ ಸೇವಕ, ಧಾರಾವಾಹಿ , ಚಲನಚಿತ್ರ ನಟ ನಿರ್ಮಾಪಕ ನಿರ್ದೇಶಕ. ತುಳು ಭಾಷೆಯ ಬಗ್ಗೆ ಅನುಭವ ಕಾಳಜಿ. ರಾಮಾಯಣ ಮಹಾಭಾರತ, ಪುರಾಣಗಳ ಬಗ್ಗೆ ಅಧ್ಯಯನ ಮಾಡಿದ ಅಪ್ರತಿಮ ಮೇಧಾವಿ.ದೊಡ್ಡ ವಾಗ್ಮಿ. ಕಾಂಗ್ರೆಸ್ ಪಕ್ಷದಲ್ಲಿ ಬಹಳ ವರ್ಷ ಪದಾಧಿಕಾರಿಯಾಗಿಯೂ ದುಡಿದವರು. ಇವರ ನೇತೃತ್ವದಲ್ಲಿ ಅಕಾಡೆಮಿ ತುಳು ವೈಭವ ಸಾರುವುದರಲ್ಲಿ ಸಂಶಯ ಇಲ್ಲ.

Also read: ಸೀರೆ ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವು
ಗಾಂಧಿ, ನಾರಾಯಣ ಗುರು ಏಸು ಕ್ರಿಸ್ತ, ಪೈಗಂಬರ, ಬಸವಣ್ಣ, ಇಂದಿರಾಗಾಂಧಿ ಎಲ್ಲರ ಬಗ್ಗೆಯೂ ಓದಿ ತಿಳಿದ ಅನುಭವ. ಆದರೆ ಇವರು ಉಡುಪಿಗೆ ಸೀಮಿತವಾಗಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಜಧಾನಿ ಮಂಗಳೂರಿನಲ್ಲಿ ಇವರು ಬೆಳಗ ಬೇಕು ಎಂದು ಭಾವಿಸಿ ಇವರನ್ನು ಕರೆತಂದು ರಿಚರ್ಡ್ ಕ್ಯಾಸ್ಟಲಿನೋ ಅವರಿಗೆ ಪರಿಚಯ ಮಾಡಿಸಿದೆ. ತುಳು ರಂಗಭೂಮಿಯಲ್ಲಿ ರಿಚರ್ಡ್ ಅವರು ಆಗ ದೊಡ್ಡ ಹೆಸರು.

ಅಲ್ಲದೇ, ಬನ್ನಂಜೆ ಮುಂಗಾರು ಪತ್ರಿಕೆ ಸೇರಿದರು. ಮತ್ತಷ್ಟು ಹೆಸರು ಮಾಡಿದರು. ನಂತರ ಕನ್ನಡ ತುಳು ಸಿನಿಮಾ. ಬೆಳೆಯುತ್ತಾ ಹೋದರು. ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡುವ ವ್ಯಕ್ತಿ ಯಾದರು,ತುರ್ಡ ಬದಿ, ಹೊಸ ಕೋಟಿ ಚೆನ್ನಯ ಹೀಗೆ ಹಲವಾರು ತುಳು ಚಿತ್ರಗಳಿಗೆ ಸಂಭಾಷಣೆ ಹಾಡು ಬರೆದರು. ಬ್ರಹ್ಮಶ್ರೀ ನಾರಾಯಣ ಗುರು ಚಿತ್ರಕ್ಕೆ ಇವರು ಬರೆದ ಸಂಭಾಷಣೆ ಅದ್ವೀತಿಯ. ದೇರ್ವೆ ತುಳು ಸಿನಿಮಾ ಮರೆಯಲಾಗದ್ದು. ಈಗ ಇವರ ಗಂಟ್ ಕಲ್ವೆರ್ ಬಿಡುಗಡೆಗೆ ಸಿದ್ದವಾಗಿದೆ. ನನ್ನ ಕಣ್ಣ ಎದುರಿನ ಹುಡುಗ ಇಷ್ಟು ಎತ್ತರಕ್ಕೆ ಬೆಳೆದ ಪರಿ ನಿಜವಾಗಿ ಸೋಜಿಗ. ಇವರ ಪರಿಶ್ರಮ, ಸೋತರೂ ಎದೆಗುಂದದೆ ಇರೋದು ಮುಖ್ಯ ಕಾರಣ. ಇವರು ಅಜಾತಶತ್ರು. ಗೆದ್ದಾಗಲೂ ಅಹಂಕಾರ ತಲೆಗೆ ಏರಿರಲಿಲ್ಲ. ಈಗಲೂ ನನ್ನ ಬಗ್ಗೆ ಅದೇ ಗೌರವ, ಭಕ್ತಿ. ಕಷ್ಟದ ದಿನಗಳ ಮರೆಯದ ಮಾನವೀಯತೆ ತುಂಬಿದ ಜಾತ್ಯತೀತ ಗುಣ. ಇಂದು ಇವರು ತುಳು ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷ ಪದವಿಗೆ ಆಕಾಂಕ್ಷಿ. ತುಂಬಾ ಸಂತೋಷವಾಗುತ್ತದೆ.
ಸರಕಾರ ಇವರನ್ನು ಆ ಪದವಿಗೆ ನೇಮಿಸಲಿ. ಸಮಸ್ತ ತುಳು ಬಂಧುಗಳು ಈ ಬಗ್ಗೆ ಒತ್ತಾಯ ಮಾಡಲಿ ಎಂದು ಬಯಸುತ್ತೇನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post