ಕಲ್ಪ ಮೀಡಿಯಾ ಹೌಸ್
ನಮಗೆಲ್ಲಾ ಒಡಹುಟ್ಟಿದವರು ಅಂದರೆ ಅದೆಷ್ಟೋ ಪ್ರೀತಿ. ಕೋಟಿ ಕೊಟ್ಟರು ಇಂತಹ ಪ್ರೀತಿ ಸಿಗಲ್ಲ ಅನ್ಸುತ್ತೆ. ನಿಜ ಹೇಳಬೇಕು ಅಂದರೆ ಇದೊಂದು ವ್ಯಕ್ತಪಡಿಸಲಾಗದ ಹರ್ಷ ಎಂದೇ ಹೇಳಬಹುದು.
ಆಗಸ್ಟ್ 1 ಸೋದರಿಯರ ದಿನ. ಹೌದು. ಈ ವಿಶೇಷ ದಿನದೊಂದು ನನ್ನ ಅಕ್ಕನಿಗೆ ನನ್ನೊಳಗೆ ಇರುವ ಕೆಲವು ಸಂಗತಿಗಳನ್ನು ಹೇಳಬಯಸುವೆ.
ಅಕ್ಕ ಎಂದರೆ ಎರಡನೆಯ ತಾಯಿ ಅಂದ್ರು ಕೂಡ ಕಡಿಮೆನೇ. ತಾಯಿ ಹೇಗೆ ತನ್ನ ಮಗುವಿಗೆ ಹೇಗೆ ಪ್ರೀತಿ-ವಾತ್ಸಲ್ಯ, ಮಮತೆ ತೋರಿಸ್ತಾಳೆ ಅಷ್ಟೇ ಪ್ರೀತಿ ಅಕ್ಕನದು ಕೂಡ. ಅದಕ್ಕೆ ತಾಯಿಯ ಸಮಾನಾರ್ಥಕ ಪದ ಅಕ್ಕ ನಾನು ಪುಣ್ಯವಂತೆ ಅನ್ಸುತ್ತೆ ಯಾಕೆಂದರೆ ತಾಯಿಯಷ್ಟೇ ಪ್ರೀತಿ ತೋರಿಸೋ ಅಕ್ಕ ಇದ್ದಾಳೆ.
ನಾನು ನಿನ್ನ ಏಂಜಲ್ ಅಂತ ಯಾಕೆ ಹೇಳ್ತೀನಿ ಅಂದ್ರೆ ಯು ಆರ್ ಮೈ ವರ್ಲ್ಡ್ ಕೆಲವೊಮ್ಮೆ ನಾನು ತುಂಬಾ ಅದೃಷ್ಟ ಶಾಲಿ ಅನ್ಸುತ್ತೆ. ಆ ದೇವರು ಎಲ್ಲರ ಪ್ರೀತಿನೂ ನಿನ್ನೊಳಗೆ ನನಗೆ ಕೊಟ್ಟಿದ್ದಾನೆ. ಅದಕ್ಕೆ ಆ ದೇವರಿಗೆ ಎಷ್ಟೇ ಥ್ಯಾಂಕ್ಯೂ ಹೇಳಿದ್ರು ಕಮ್ಮಿ ಅನ್ಸುತ್ತೆ.
ಬಾಲ್ಯದಲ್ಲಿ ನಾನು ನಿನ್ನ ಜೊತೆಗೆ ಸಮಯ ಕಳೆಯಲಿಲ್ಲ. ಆದ್ರೆ ನಾವಿಬ್ರೂ ಜೊತೆ ಇರುವಾಗ ನನ್ನ ಜೀವನದ ಅತ್ಯಂತ ಅದ್ಭುತ ಸಮಯವನ್ನು ನಿನ್ನ ಜೊತೆ ಕಳೆದಿದ್ದೇನೆ. ಅಂತಹ ಹೆಚ್ಚಿನ ಸಮಯ ಕಳೆಯುವ ಅವಕಾಶ ಇನ್ನಷ್ಟು ನನಗೆ ಸಿಗಲಿ ಅನ್ನುವುದೊಂದೇ ನನ್ನ ಆಸೆ.
ಕೆಲವೊಮ್ಮೆ ನಿನಗೆ ನಾನು ತುಂಬಾ ನೋವು ಕೊಟ್ಟಿದ್ದೇನೆ. ಅದೆಷ್ಟೋ ಬಾರಿ ಜಗಳವಾಡಿದ್ದೇನೆ, ಹೊಡೆದಿದ್ದೇನೆ, ಬೈದಿದ್ದೇನೆ ನನ್ನದೇ ತಪ್ಪಿದ್ದರೂ ವಾದಿಸಿದ್ದೇನೆ ಆದರೆ ನೀನು ಯಾವತ್ತೂ ನನ್ನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ ಮತ್ತೆ ಅಷ್ಟೇ ಪ್ರೀತಿ ತೋರಿಸಿದಿಯಾ.

ಅಕ್ಕ ನಂಗೆ ನೀನು ಮೈ ವರ್ಲ್ಡ್ ಅನ್ಸುತ್ತೆ ಯಾಕ್ ಗೊತ್ತಾ…? ಈ ಜಗತ್ತಿನಲ್ಲಿ ಒಬ್ಬ ಸಹೋದರಿಗಿಂತ ಉತ್ತಮ ಸ್ನೇಹಿತರು ಯಾರೂ ಇರುವುದಿಲ್ಲ ಅಲ್ವಾ.
ಯು ಆರ್ ಮೈ ಬೆಸ್ಟ್ ಫ್ರೆಂಡ್ ಅಲ್ಸೋ ಕಣೆ ಅಕ್ಕ. ಅದೇನೇ ವಿಷಯವಿದ್ದರೂ ಮುಚ್ಚಿಡದೇ ನಿನ್ನೊಡನೆ ಹಂಚಿಕೊಂಡಿದ್ದೇನೆ. ನೀನು ಯಾವಾಗಲೂ ನನ್ನ ರಕ್ಷಣೆ ಮಾಡ್ತೀಯಾ, ಉತ್ತಮ ಸಲಹೆಗಳನ್ನು ಕೊಡ್ತೀಯಾ ಅಷ್ಟೇ ಅಲ್ಲದೆ ನಿರಂತರವಾಗಿ ಬೆಂಬಲ ಕೊಡ್ತೀಯಾ ಎಂದಿಗೂ ನನ್ನನ್ನು ಬಿಟ್ಟು ಕೊಡುವುದಿಲ್ಲ. ಇನ್ನು ತುಂಬಾ ತುಂಬಾ ಕಣೆ ಅಕ್ಕ ಒಟ್ಟಿನಲ್ಲಿ ನಿನ್ನನ್ನು ಪಡೆದಿರುವ ನಾನೇ ಧನ್ಯಳು.
Your are like my angel with a love that always glows…you are one of greatest my heart will ever know… ನನ್ನ ಜೀವನದ ಪೂರ್ತಿ ನಿನ್ ಪ್ರೀತಿ ಹೀಗೆ ಇರಲಿ ಅಕ್ಕ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post