ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಪಿಹೆಚ್‌ಡಿ (ಪ್ರೊಗ್ರೆಸ್, ಹಾರ್ಮನಿ, ಡೆವಲಪಮೆಂಟ್) ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ 118 ನೇ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ Amith Shah ಅವರು ತಮ್ಮ ಭಾಷಣದಲ್ಲಿ ದೇಶದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣ ಮತ್ತು ಕಳೆದ 9 ವರ್ಷದ ಸಾಧನೆಗಳನ್ನು ಮೆಲುಕು ಹಾಕಿದರು. ಈ ಭಾಷಣದಲ್ಲಿ, ಪಿಎಚ್‌ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ, ಯುವಕರು ಮತ್ತು ಮಹಿಳೆಯರಿಗೆ ಮೋದಿ ಸರ್ಕಾರದ ನೀತಿಗಳ ಪ್ರಯೋಜನಗಳನ್ನು ಹೆಚ್ಚು ತಲುಪಿಸುವ ಕೆಲಸ ಮಾಡಬೇಕು ಎಂದು ಶಾ ಹೇಳಿದರು.
ಪ್ರಧಾನಿ ಮೋದಿಯವರ PM Modi ದೂರದೃಷ್ಟಿ ಮತ್ತು ಕಳೆದ 9 ವರ್ಷಗಳಲ್ಲಿ ಕೈಗೊಂಡ ನೀತಿ ನಿರ್ಧಾರಗಳು ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲಿಯು ಪರಿವರ್ತನೆ ತಂದಿದೆ ಎಂದು ಅಮಿತ್ ಶಾ ಶ್ಲಾಘಿಸಿದರು. ‘ರೈಸಿಂಗ್ ಇಂಡಿಯಾ: ಇದು ಸಮಯ, ಇದು ಸರಿಯಾದ ಸಮಯ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತಾ ಜಿ 20, G-20 ಚಂದ್ರಯಾನ -3 ಮಿಷನ್, Chandrayaana-3 ಆದಿತ್ಯ ಎಲ್ -1 ಮಿಷನ್ Aditya L-1 ಮತ್ತು ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದಂತಹ ವಿಷಯಗಳನ್ನು ಪ್ರಸ್ತಾಪಿಸಿ ಇವು ದೇಶವನ್ನು ಹೊಸ ಶಕ್ತಿಯಿಂದ ತುಂಬಿವೆ ಎಂದರು. ಭಾರತದಲ್ಲಿ ಪ್ರಜಾಪ್ರಭುತ್ವ ಈಗ ಭದ್ರವಾಗಿ ಬೇರೂರಿದೆ ಎಂದು ಪ್ರತಿಪಾದಿಸಿದರು.

Also read: ಹೊಳೆಹೊನ್ನೂರಿನಲ್ಲಿ ಸತ್ಯಾತ್ಮತೀರ್ಥರ ಚಾರ್ತುಮಾಸ್ಯ ಸಂಪನ್ನ: ಭಕ್ತರ ಭಾವನಾತ್ಮಕ ಬೀಳ್ಕೊಡುಗೆ
2013-14 ರಲ್ಲಿ, ಭಾರತವು 4 ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳು ಮತ್ತು 350 ಸ್ಟಾರ್ಟ್‌ಅಪ್‌ಗಳನ್ನು ಹೊಂದಿತ್ತು, ಆದರೆ ಇಂದು ಭಾರತ 115 ಯುನಿಕಾರ್ನ್‌ಗಳು ಮತ್ತು 1,00,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಅಪಹಾಸ್ಯಕ್ಕೀಡಾಗಿದ್ದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಈಗ ದೇಶದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ. ಪಿಎಲ್ಐ ಯೋಜನೆಯು 14 ಕ್ಷೇತ್ರಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಕನಸನ್ನು ನನಸಾಗಿಸಿದೆ. ಇಂದು ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಚಟುವಟಿಕಾ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post