No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

kalpa News by kalpa News
February 4, 2026
in Special Articles
0
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ವಿಶೇಷ ಲೇಖನ |

ಭಾರತದ ನೇಮಕಾತಿ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ, ಆದರೆ ಸೂಕ್ತ ಪ್ರತಿಭೆಗಳನ್ನು ಹುಡುಕುವುದು ಕಷ್ಟಕರವಾಗುತ್ತಿದೆ. ಲಿಂಕ್ಡ್‌ ಇನ್‌ ನ #LinkedIn ಹೊಸ ಸಂಶೋಧನೆಯು, ನೇಮಕಾತಿ ಚಟುವಟಿಕೆಯು ಕೋವಿಡ್ #Covid ಪೂರ್ವ ಮಟ್ಟಕ್ಕಿಂತ 40% ರಷ್ಟು ಹೆಚ್ಚಿದ್ದರೂ ಸಹ, 74% ನೇಮಕಾತಿದಾರರು ಈಗ ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಎಂದು ತೋರಿಸುತ್ತದೆ.

ನೇಮಕಾತಿದಾರರು ಅರ್ಜಿಗಳ ಪ್ರಮಾಣ ಮತ್ತು ಗುಣಮಟ್ಟದ ನಡುವೆ ಅಸಮತೋಲನವನ್ನು ಎದುರಿಸುತ್ತಿರುವುದೇ ಇದಕ್ಕೆ ಕಾರಣ. ನೇಮಕಾತಿ ಹೆಚ್ಚು ಕಷ್ಟಕರವಾಗಿದೆ ಎಂದು ಹೇಳುವವರ ಪೈಕಿ, ಅರ್ಧಕ್ಕಿಂತ ಹೆಚ್ಚು ಮಂದಿ ಎಐನಿಂದ #AI ಸಿದ್ಧಪಡಿಸಲಾದ ಅರ್ಜಿಗಳ ಹೆಚ್ಚಳವನ್ನು (53%) ತೋರಿಸಿದರೆ, ಹಲವರು ಬೇಡಿಕೆ ಇರುವ ಕೌಶಲ್ಯಗಳ ಕೊರತೆಯನ್ನು (47%) ಉಲ್ಲೇಖಿಸಿದ್ದಾರೆ. ಸುಮಾರು ಅರ್ಧದಷ್ಟು ಮಂದಿ ನಿಜವಾದ ಅರ್ಜಿಗಳನ್ನು ಕಳಪೆ ಗುಣಮಟ್ಟದ ಅಥವಾ ದಾರಿ ತಪ್ಪಿಸುವ ಅರ್ಜಿಗಳಿಂದ ಬೇರ್ಪಡಿಸುವುದು ಈ ಪ್ರಕ್ರಿಯೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತಿದೆ (48%) ಎಂದು ಹೇಳಿದ್ದಾರೆ.
ಇದರ ಫಲಿತಾಂಶವಾಗಿ ಕಾರ್ಮಿಕ ಮಾರುಕಟ್ಟೆಯು ಹೆಚ್ಚು ಉದ್ಯೋಕಾಂಕ್ಷಿಗಳಿಂದ ಮತ್ತು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಭಾರತದಲ್ಲಿ ಪ್ರತೀ ಮುಕ್ತ ಉದ್ಯೋಗಾವಕಾಶಕ್ಕೆ ಬರುವ ಅರ್ಜಿಗಳ ಸಂಖ್ಯೆಯು 2022 ಕ್ಕೆ ಹೋಲಿಸಿದರೆ ಎರಡರಷ್ಟು ಹೆಚ್ಚಾಗಿದೆ ಎಂದು ಲಿಂಕ್ಡ್‌ ಇನ್ ಮಾಹಿತಿ ತೋರಿಸುತ್ತದೆ. ಜೊತೆಗೆ, 72% ವೃತ್ತಿಪರರು ತಾವು 2026 ರಲ್ಲಿ ಸಕ್ರಿಯವಾಗಿ ಕೆಲಸ ಹುಡುಕುತ್ತಿರುವುದಾಗಿ ಹೇಳಿಕೊಂಡರೆ, 85% ಮಂದಿ ಈ ಪ್ರಕ್ರಿಯೆಯನ್ನು ಎದುರಿಸಲು ತಾವು ಸಿದ್ಧರಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ನೇಮಕಾತಿದಾರರು ಸರಿಯಾದ ಕೌಶಲ್ಯಗಳನ್ನು ಗುರುತಿಸಲು, ವೇಗವಾಗಿ ನೇಮಿಸಿಕೊಳ್ಳಲು ಮತ್ತು ಅಭ್ಯರ್ಥಿಯ ಉದ್ಯೋಗ ಪಯಣವನ್ನು ಹೆಚ್ಚು ತೃಪ್ತಿಕರವಾಗಿಸಲು ಎಐ ಅನ್ನು ಬಳಸುತ್ತಿದ್ದಾರೆ.
ಈ ಒತ್ತಡಗಳ ನಡುವೆ, ನೇಮಕಾತಿದಾರರು ಎಐ ಅನ್ನು ಪರಿಹಾರದ ಒಂದು ಭಾಗವಾಗಿ ನೋಡುತ್ತಿದ್ದಾರೆ. ಈಗಾಗಲೇ ಇದನ್ನು ಬಳಸುತ್ತಿರುವವರಲ್ಲಿ 71% ಭಾರತೀಯರು, ಈ ಹಿಂದೆ ತಾವು ಗಮನಿಸದೇ ಇದ್ದ ಕೌಶಲ್ಯ ಹೊಂದಿರುವ ಸೂಕ್ತ ಅಭ್ಯರ್ಥಿಗಳನ್ನು ಪತ್ತೆಹಚ್ಚಲು ಎಐ ತಮಗೆ ಸಹಾಯ ಮಾಡಿದೆ ಎಂದು ಹೇಳುತ್ತಾರೆ ಮತ್ತು 80% ಮಂದಿ ಅಭ್ಯರ್ಥಿಯ ಕೌಶಲ್ಯಗಳ ಬಗ್ಗೆ ಒಳನೋಟ ಪಡೆಯುವುದನ್ನು ಎಐ ಸುಲಭಗೊಳಿಸಿದೆ ಎಂದು ತಿಳಿಸಿದ್ದಾರೆ. ಮುಕ್ಕಾಲು ಭಾಗಕ್ಕಿಂತ ಹೆಚ್ಚು (76%) ಮಂದಿ ಎಐ ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತಿದೆ ಎಂದು ನಂಬಿದ್ದಾರೆ.
ಮುಂದಿನ ದಿನಗಳಲ್ಲಿ ಎಐ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಭಾರತದ 10 ನೇಮಕಾತಿದಾರರಲ್ಲಿ ಸುಮಾರು 8 ಮಂದಿ ತಮ್ಮ ನೇಮಕಾತಿ ಗುರಿಗಳನ್ನು ತಲುಪಲು, ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಉನ್ನತ ಪ್ರತಿಭೆಗಳನ್ನು ಹುಡುಕಲು ಎಐ ಬಳಕೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ. ಬಹುಪಾಲು ಮಂದಿ 2026ರಲ್ಲಿ ಸಂದರ್ಶನಕ್ಕೂ ಮುನ್ನ ಮಾಡುವ ಪ್ರಾಥಮಿಕ ತಪಾಸಣೆಗಾಗಿ ಎಐ ಬಳಕೆಯನ್ನು ಹೆಚ್ಚಿಸಲು ಯೋಜಿಸಿದ್ದಾರೆ. ಇದು ನೇಮಕಾತಿದಾರ ಮತ್ತು ಅಭ್ಯರ್ಥಿಯ ನಡುವೆ ಹೆಚ್ಚು ಮೌಲ್ಯಯುತವಾದ ಸಂಭಾಷಣೆಗಳಿಗೆ (83%), ವೇಗದ ನೇಮಕಾತಿಗೆ (83%) ಮತ್ತು ಅಭ್ಯರ್ಥಿಯ ಬಗ್ಗೆ ಉತ್ತಮ ಒಳನೋಟಗಳಿಗೆ (82%) ದಾರಿ ಮಾಡಿಕೊಡುತ್ತದೆ ಎಂದು ಅವರು ನಂಬಿದ್ದಾರೆ.

ಈ ಕುರಿತು ಮಾತನಾಡುವ ಲಿಂಕ್ಡ್‌ ಇನ್ ಟ್ಯಾಲೆಂಟ್ ಸೊಲ್ಯೂಷನ್ಸ್‌ ನ ಅಪಾಕ್ (ಎಪಿಎಸಿ) ಉಪಾಧ್ಯಕ್ಷರಾದ ರುಚೀ ಆನಂದ್ ಅವರು , “ನೇಮಕಾತಿ ಪ್ರಕ್ರಿಯೆಯಲ್ಲಿ ಕೇವಲ ಪದವಿಗಳು ಮತ್ತು ಹಿಂದಿನ ಹುದ್ದೆಗಳಿಗಿಂತ ಹೆಚ್ಚಾಗಿ, ಬೇಡಿಕೆಯ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ನೀಡುತಿರುವ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಎಐ ಇಲ್ಲದೆ ಈ ಬದಲಾವಣೆಯನ್ನು ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸುವುದು ಕಷ್ಟ. ಜವಾಬ್ದಾರಿಯುತವಾಗಿ ಬಳಸಿದಾಗ ಎಐ ನೇಮಕಾತಿದಾರರಿಗೆ ಸರಿಯಾದ ಕೌಶಲ್ಯಗಳನ್ನು ಮೊದಲೇ ಪತ್ತೆಹಚ್ಚಲು, ತಪಾಸಣೆ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸ್ಥಿರವಾದ ಹಾಗೂ ನ್ಯಾಯೋಚಿತ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲು ಸಹಾಯ ಮಾಡುತ್ತದೆ. ಲಿಂಕ್ಡ್‌ ಇನ್‌ ನಲ್ಲಿ ನಮ್ಮ ಆದ್ಯತೆಯೆಂದರೆ ‘ಹೈರಿಂಗ್ ಅಸಿಸ್ಟೆಂಟ್’ ನಂತಹ ಎಐ ಪರಿಕರಗಳನ್ನು ನಿರ್ಮಿಸುವುದು. ಇವು ನೇಮಕಾತಿ ನಿರ್ಧಾರ ತೆಗೆದುಕೊಳ್ಳಲು ಬೆಂಬಲ ನೀಡುವ ಅಂಶವಾಗಿ ಕೆಲಸ ಮಾಡುತ್ತವೆ, ಇದರಿಂದಾಗಿ ನೇಮಕಾತಿದಾರರು ಗುಣಮಟ್ಟ ಅಥವಾ ಅಭ್ಯರ್ಥಿಯ ಅನುಭವದಲ್ಲಿ ರಾಜಿ ಮಾಡಿಕೊಳ್ಳದೆ ಸರಿಯಾದ ಪ್ರತಿಭೆಯನ್ನು ಹೆಚ್ಚು ವೇಗವಾಗಿ ಮತ್ತು ಆತ್ಮವಿಶ್ವಾಸದಿಂದ ಹುಡುಕಬಹುದು” ಎಂದು ಹೇಳಿದರು.
ನೇಮಕಾತಿದಾರ ಮತ್ತು ಉದ್ಯೋಗಾಕಾಂಕ್ಷಿಯ ಸಂಬಂಧದಲ್ಲಿ ಪಾರದರ್ಶಕತೆಯೇ ಪ್ರಮುಖವಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಎಐ ಹೆಚ್ಚು ಬಳಕೆಯಾಗುತ್ತಿರುವಂತೆ, ಅಭ್ಯರ್ಥಿಗಳ ನಿರೀಕ್ಷೆಗಳೂ ಸಹ ಹೆಚ್ಚುತ್ತಿವೆ. ನೇಮಕಾತಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ವೃತ್ತಿಪರರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ, ಇದು ಪಾರದರ್ಶಕತೆ ಇರಬೇಕು ಎಂಬ ಬೇಡಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಭಾರತದ ಅರ್ಧದಷ್ಟು ನೇಮಕಾತಿದಾರರು (50%) ಈಗ ತಮ್ಮ ಪ್ರಕ್ರಿಯೆಗಳಲ್ಲಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ, ಅದರಲ್ಲೂ ವಿಶೇಷವಾಗಿ ಅಭ್ಯರ್ಥಿಗಳ ಸ್ಕ್ರೀನಿಂಗ್ ಮತ್ತು ಶಾರ್ಟ್‌ ಲಿಸ್ಟ್ ಮಾಡುವಾಗ ಎಐ ಅನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ವಿವರಿಸಬೇಕಾದ ಒತ್ತಡದಲ್ಲಿದ್ದಾರೆ ಎಂದು ಹೇಳುತ್ತಾರೆ.

ನೇಮಕಾತಿದಾರರು ವೇಗವಾಗಿ ಮತ್ತು ಕ್ಷಿಪ್ರವಾಗಿ ನೇಮಕ ಮಾಡಿಕೊಳ್ಳಲು ಲಿಂಕ್ಡ್‌ ಇನ್ ಹೇಗೆ ಸಹಾಯ ಮಾಡುತ್ತಿದೆ
ಭಾರತದ ನೇಮಕಾತಿದಾರರ ಪ್ರಮುಖ ಸವಾಲುಗಳಾದ ವೇಗ ಮತ್ತು ಗುಣಮಟ್ಟವನ್ನು ಪರಿಹರಿಸಲು, ಪ್ರತಿಭೆಗಳ ಕುರಿತಾದ ಸಂಭಾಷಣೆಗಳನ್ನು ಮುಂದಕ್ಕೆ ಕೊಂಡೊಯ್ಯಲು ವಿನ್ಯಾಸಗೊಳಿಸಲಾದ ಎಐ-ಚಾಲಿತ ನೇಮಕಾತಿ ಪರಿಕರಗಳನ್ನು ಸಿದ್ಧಪಡಿಸುವುದನ್ನು ಲಿಂಕ್ಡ್‌ಇನ್ ಮುಂದುವರಿಸಿದೆ, ಆ ವೈಶಿಷ್ಟ್ಯಗಳ ವಿವರ ಇಲ್ಲಿದೆ:

ವೇತನ ಮತ್ತು ನೋಟಿಸ್ ಪಿರಿಯಡ್ ಫಿಲ್ಟರ್‌ ಗಳು

ಈ ಫಿಲ್ಟರ್ ಗಳು ಸದಸ್ಯರು ತಮ್ಮ ನಿರೀಕ್ಷಿತ ಸಂಬಳ ಮತ್ತು ನೋಟಿಸ್ ಪಿರಿಯಡ್ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತವೆ. ಈ ಮಾಹಿತಿಯು ಕೇವಲ ನೇಮಕಾತಿದಾರರಿಗೆ ಮಾತ್ರ ಕಾಣಿಸುತ್ತದೆ, ಇದರಿಂದ ನೇಮಕಾತಿ ಪ್ರಕ್ರಿಯೆಯ ಆರಂಭಿಕ ಹಂತದಲ್ಲೇ ಉಂಟಾಗುವ ಅಡೆತಡೆಗಳು ಮತ್ತು ಅನಗತ್ಯ ಚರ್ಚೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಹೈರಿಂಗ್ ಅಸಿಸ್ಟೆಂಟ್

ನೇಮಕಾತಿದಾರರಿಗಾಗಿ ರೂಪಿಸಲಾದ ಲಿಂಕ್ಡ್‌ ಇನ್‌ ನ ಈ ಎಐ ಏಜೆಂಟ್, ಎಎಂಡಿ, ಓರ್ ಕಾನ್, ಚ್ಯೂವಿ, ಎಕ್ಸ್ ಪೀಡಿಯಾ ಗ್ರೂಪ್, ಫ್ಯಾಬ್ಲೆಟಿಕ್ಸ್, ಜೇಕಬ್ಸ್, ಸೀಮನ್ಸ್ ಮತ್ತು ವಿಪ್ರೋನಂತಹ ಕಂಪನಿಗಳಿಗೆ ಅರ್ಹ ಪ್ರತಿಭೆಗಳನ್ನು ವೇಗವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತಿದೆ. ಇದನ್ನು ಆರಂಭಿಕವಾಗಿ ಬಳಸಿದವರು 62% ರಷ್ಟು ಕಡಿಮೆ ಪ್ರೊಫೈಲ್‌ ಗಳನ್ನು ಪರಿಶೀಲಿಸುವ ಮೂಲಕ, ಪ್ರತಿ ಹುದ್ದೆಗೆ ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯವನ್ನು ಉಳಿಸುತ್ತಿದ್ದಾರೆ ಮತ್ತು ಇನ್ ಮೇಲ್ ಸ್ವೀಕೃತಿ ದರದಲ್ಲಿ 69% ರಷ್ಟು ಸುಧಾರಣೆ ಆಗಿದೆ. ಹೈರಿಂಗ್ ಅಸಿಸ್ಟೆಂಟ್ ಪ್ರಸ್ತುತ ಜಾಗತಿಕವಾಗಿ ಇಂಗ್ಲಿಷ್‌ನಲ್ಲಿ ಲಭ್ಯವಿದೆ.

ಲಿಂಕ್ಡ್‌ ಇನ್ ಹೈರಿಂಗ್ ಪ್ರೊ

ಇದು ಸಣ್ಣ ಉದ್ಯಮಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಗುರುತಿಸಲು, ಶಾರ್ಟ್‌ಲಿಸ್ಟ್ ಮಾಡಲು ಮತ್ತು ಅವರನ್ನು ವೇಗವಾಗಿ ಸಂಪರ್ಕಿಸಲು ಸಹಾಯ ಮಾಡುವ ಎಐ ಏಜೆಂಟ್ ಆಗಿದೆ. ಆರಂಭಿಕ ಬಳಕೆಯ ಅಂಕಿಅಂಶಗಳ ಪ್ರಕಾರ, ಈ ಉತ್ಪನ್ನವನ್ನು ಬಳಸುವ ಸುಮಾರು 60% ನೇಮಕಾತಿದಾರರು ಮೊದಲ ವಾರದಲ್ಲೇ ಸಂದರ್ಶನಕ್ಕೆ ಬೇಕಾದ ವ್ಯಕ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ. ಸಮಯ ಉಳಿತಾಯದ ಬಗ್ಗೆ ವರದಿ ಮಾಡಿದವರು ಪ್ರತಿ ವಾರ ಸರಾಸರಿ 6 ಗಂಟೆಗಳಿಗೂ ಹೆಚ್ಚು ಸಮಯ ಉಳಿಯುತ್ತಿದೆ ಎಂದು ತಿಳಿಸಿದ್ದಾರೆ. ಇದರ ಹೊಸ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • ಪ್ರಾಥಮಿಕ ತಪಾಸಣೆಗಾಗಿ ಎಐ-ಚಾಲಿತ ಸಂದರ್ಶನ ಬೆಂಬಲ
  • ನವೀಕರಿಸಿದ ಸಂಭಾಷಣಾ ಮಾದರಿಯ ಇಂಟರ್ಫೇಸ್: ಇದು ನೇಮಕಾತಿ ಅಗತ್ಯಗಳನ್ನು ವಿವರಿಸಲು ಮತ್ತು ಅಭ್ಯರ್ಥಿಗಳ ಹುಡುಕಾಟದ ಫಲಿತಾಂಶಗಳನ್ನು ಉತ್ತಮಗೊಳಿಸಲು ಪ್ರತಿಕ್ರಿಯೆ ನೀಡುವುದನ್ನು ಸುಲಭಗೊಳಿಸುತ್ತದೆ.
  • ಎಐ ಸಹಾಯದ ವೈಯಕ್ತಿಕಗೊಳಿಸಿದ ಇನ್‌ ಮೇಲ್‌ಗಳು: ಅರ್ಹ ಅಭ್ಯರ್ಥಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಇದು ನೆರವಾಗುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: AICovidKannada NewsKannada News LiveKannada News OnlineKannada News WebsiteKannada WebsiteLatest News KannadaLinkedInNews in KannadaNews KannadaSpecial Articleಎಐಕೋವಿಡ್ಲಿಂಕ್ಡ್‌ ಇನ್‌ವಿಶೇಷ ಲೇಖನ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ತುಕರಾಮ ಬಾಯಾರು ಬರೆದ ಅಲ್ಟಿಮೆಟ್ ರೀಲ್ಸ್ ಗೆ ಭಾರೀ ಪ್ರಶಂಸೆ

Next Post

ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

kalpa News

kalpa News

Next Post
ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL