No Result
View All Result
Bengaluru Gets a World-Class Electronics Co-Innovation Hub as Henkel Launches Advanced Application Center
English Articles

Bengaluru Gets a World-Class Electronics Co-Innovation Hub as Henkel Launches Advanced Application Center

by ಕಲ್ಪ ನ್ಯೂಸ್
March 17, 2026
0

Kalpa Media House  |  Bengaluru | Henkel today announced the launch of its Customer Application Center in Bengaluru, reinforcing its...

Read moreDetails
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
  • Advertise With Us
  • Grievances
  • About Us
  • Contact Us
Wednesday, March 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೌಲ್ಯಯುತ ಸಮಾಜದ ಕಣ್ಮಣಿ, ಪುತ್ತೂರ್ದ ಮುತ್ತು ‘ಪ್ರಖ್ಯಾತ್ ಪೈ ಪುತ್ತೂರು’

ಸಾವಿರಾರು ಮಂದಿಗೆ ದಾರಿದೀಪವಾದ ತುಳುನಾಡಿನ ಈ ವ್ಯಕ್ತಿ ಬಗ್ಗೆ ನೀವು ತಿಳಿಯಲೇಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 21, 2025
in Special Articles
0
ಮೌಲ್ಯಯುತ ಸಮಾಜದ ಕಣ್ಮಣಿ, ಪುತ್ತೂರ್ದ ಮುತ್ತು ‘ಪ್ರಖ್ಯಾತ್ ಪೈ ಪುತ್ತೂರು’
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ  |

ಪ್ರತಿಯೊಬ್ಬರ ಜೀವನವು ಒಂದು ಕಥೆ, ಆದರೆ ಕೆಲವರ ಬದುಕು ಇತರರಿಗೆ ಪ್ರೇರಣೆಯಾಗಿ ಬೆಳಗುವ ದೀಪವಾಗುತ್ತದೆ. ಅಂತಹ ದೀಪದಂತೆ ಹೊಳೆಯುತ್ತಿರುವವರು ಪ್ರಖ್ಯಾತ್ ಪೈ ಪುತ್ತೂರು.

ಬದುಕಿನ ಆರಂಭವು ಕಷ್ಟದಿಂದ ತುಂಬಿದರೂ, ಅವರು ಕೈಗೊಂಡ ಪ್ರತಿಯೊಂದು ಹೆಜ್ಜೆಯೂ ನಾಡು, ನುಡಿ, ಸಮಾಜದ ಪರವಾದುದು. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಎಣಿಸಲಾಗುವುದಿಲ್ಲ. ಆದರೆ, ಸಾವಿರಾರು ಸಾಧಕರ ನಡುವೆ ವಿಭಿನ್ನತೆ ತೋರುವ ಕೆಲವೇ ಹೆಸರುಗಳಲ್ಲಿ ಒಂದು ಪ್ರಖ್ಯಾತ ಪೈ ಪುತ್ತೂರು. ಕನ್ನಡವನ್ನು ಹೃದಯದಿಂದ ಪ್ರೀತಿಸುವ, ನಾಡು-ನುಡಿ-ಸಂಸ್ಕೃತಿಯನ್ನು ಕಾಪಾಡಿ ಬೆಳೆಸುವ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ವ್ಯಕ್ತಿ ಇವರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರದಲ್ಲಿ ಪ್ರತಾಪ್ ಕುಮಾರ್ ಪೈ ಪುತ್ತೂರು ಹಾಗೂ ಕಸ್ತೂರಿ ಪೈ ದಂಪತಿಗಳ ಹಿರಿಯ ಪುತ್ರನಾಗಿ ಜನಿಸಿದ ಪ್ರಖ್ಯಾತ್ ಅವರು ತಮ್ಮ ಬಾಲ್ಯದ ದಿನಗಳನ್ನು ಸರಳ ಕುಟುಂಬದಲ್ಲಿ ಕಳೆದವರು. ಇವರಿಗೆ ತಂಗಿ ಸುಸ್ಮಿತಾ ಪೈ ಪುತ್ತೂರು ಇದ್ದಾರೆ. ಬಾಲ್ಯದಿಂದಲೇ ಶ್ರಮ, ಹೋರಾಟ ಮತ್ತು ಸಂಕಷ್ಟದ ಬದುಕನ್ನು ಕಂಡು ಬೆಳೆದ ಇವರ ಜೀವನ ಪಯಣವು ನೂರಾರು ಯುವಕರಿಗೆ ಪ್ರೇರಣೆಯಾಗಿದೆ.
ಮಂಜಲ್ ಪಡ್ಪು ವಿವೇಕಾನಂದ ವಿದ್ಯಾಸಂಸ್ಥೆಯಿಂದ ಆರಂಭವಾದ ಇವರ ಶಿಕ್ಷಣ ಪಯಣವು ಪುತ್ತೂರಿನ ಸೈಂಟ್ ವಿಕ್ಟರ್ಸ್, ಕೊಂಬೆಟ್ಟು ಶಾಲೆ, ಹಾಸನದ ಆದಿಚುಂಚನಗಿರಿ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಆರ್.ಸಿ. ರಸ್ತೆಯ ಸರ್ಕಾರಿ ಪಿಯು ಕಾಲೇಜುಗಳವರೆಗೆ ಸಾಗಿತು. ಸಂಕಷ್ಟದ ಸಮಯದಲ್ಲಿ ತಂದೆಯೊಟ್ಟಿಗೆ ಸೇರಿ ತಳ್ಳುಗಾಡಿಯಲ್ಲಿ ಜ್ಯೂಸ್ ಹಾಗೂ ಮಜ್ಜಿಗೆ ಮಾರಾಟ ಮಾಡಿದ ಅನುಭವ ಇವರಿಗೆ ಬದುಕಿನ ನಿಜವಾದ ಅರ್ಥ ಕಲಿಸಿತು. ಇದೇ ಸಂಕಷ್ಟಗಳು ಇವರನ್ನು ಗಟ್ಟಿಯಾಗಿ ಬೆಳೆಸಿದವು.

ನಂತರ ಉದ್ಯೋಗದ ಹುಡುಕಾಟಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಬಂದ ಪ್ರಖ್ಯಾತ್, ಮೀನಾಕ್ಷಿ ಮಾಲ್’ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಉದ್ಯೋಗಕ್ಕಾಗಿ ಹೋರಾಡುತ್ತಿರುವ ಯುವಕರನ್ನು ಕಂಡು ಉದ್ಯೋಗ ಮಾಹಿತಿ ನಮ್ಮವರಿಗಾಗಿ ಎಂಬ ವಾಟ್ಸಾಪ್ ಗುಂಪನ್ನು ಹುಟ್ಟು ಹಾಕಿದರು. ಸಾವಿರಾರು ಮಂದಿಗೆ ಉಚಿತವಾಗಿ ಉದ್ಯೋಗ ಮಾಹಿತಿಯನ್ನು ತಲುಪಿಸಿದ ಈ ಸೇವೆ ಇಂದು ಸಹ ನಿಂತಿಲ್ಲ.ಶಾಲೆ ಬಿಟ್ಟ ಮಕ್ಕಳನ್ನು ಮರುಶಾಲೆಗೆ ಸೇರಿಸಿ, ಶೈಕ್ಷಣಿಕ ಸಾಮಗ್ರಿಗಳನ್ನು ತಲುಪಿಸಿ 42 ಮಕ್ಕಳ ಭವಿಷ್ಯ ಕಟ್ಟಿಕೊಟ್ಟ ಮಾನವೀಯತೆಯ ದಾರಿ ಇವರ ಸೇವೆಯ ಇನ್ನೊಂದು ಮುಖ.

ಇವರ ಸಾಮಾಜಿಕ ಸೇವೆಯ ಮಹತ್ವಪೂರ್ಣ ಅಧ್ಯಾಯ ಕೊರೋನಾ ಕಾಲಘಟ್ಟ. ಆ ಅವಧಿಯಲ್ಲಿ ಉಸಿರು ಮತ್ತು ಕೊರೋನಾ ಕನ್ನಡ ಸಹಾಯವಾಣಿಯಲ್ಲಿ ಸ್ನೇಹಿತರೊಡನೆ ಜೀವಪಣವಾಗಿ ದುಡಿದು ಅನೇಕ ಜೀವಗಳನ್ನು ಉಳಿಸಿದರು. ರೈತರ ಸಂಕಷ್ಟವನ್ನು ನೋಡಿ ಅನ್ನದಾತ ಜೀವದಾತ ಕನ್ನಡನಾಡು ಎಂಬ ಫೇಸ್ಬುಕ್ ಪೇಜ್ ಮೂಲಕ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿದರು. ಈ ನಿಸ್ವಾರ್ಥ ಸೇವೆಯನ್ನು ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕನ್ ಹೆರಾಲ್ಡ್ ಪತ್ರಿಕೆಗಳು ಪ್ರಸ್ತುತಪಡಿಸಿದವು.
2017ರಲ್ಲಿ ಕನ್ನಡ ಮನಸುಗಳ ಪ್ರತಿಷ್ಠಾನದಲ್ಲಿ ಸ್ವಯಂಸೇವಕನಾಗಿ, ನಂತರ 2022ರಲ್ಲಿ ಸ್ನೇಹಿತರೊಂದಿಗೆ ಗಂಧದಗುಡಿ ಬಳಗ, ಕರ್ನಾಟಕ ಎಂಬ ಸಂಘಟನೆಯನ್ನು ಕಟ್ಟಿಕೊಂಡು ದಾನಿಗಳ ನೆರವಿನಿಂದ 27ಕ್ಕೂ ಹೆಚ್ಚು ಯಶಸ್ವಿ ಸಾಮಾಜಿಕ ಅಭಿಯಾನಗಳನ್ನು ನಡೆಸಿದರು. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಬಣ್ಣ ಬಳಿದು, ಶೌಚಾಲಯಗಳನ್ನು ನಿರ್ಮಿಸಿ, ಪುಸ್ತಕಗಳನ್ನು ತಲುಪಿಸಿ, ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಕಾಲೇಜು ಶುಲ್ಕದ ನೆರವು ತಲುಪಿಸಿದರು. ಹಾಸನದಿಂದ ಮೈಸೂರಿನವರೆಗೆ, ಚಿಕ್ಕಮಗಳೂರು, ಬೀದರ್, ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯವರೆಗೆ ಇವರ ಸೇವೆಯ ಸ್ಪರ್ಶ ಹರಡಿದೆ.

ಇವರ ಸೇವೆಯನ್ನು ಗುರುತಿಸಿ ಹಲವು ಸಂಸ್ಥೆಗಳು ಕನ್ನಡ ಕುಲಪುರೋಹಿತ ಪ್ರಶಸ್ತಿ, ಕನ್ನಡ ರಾಷ್ಟ್ರ ಭೂಷಣ ಪ್ರಶಸ್ತಿ, ಕನ್ನಡ ಸೇವಾ ರತ್ನ, ಪ್ರಗತಿಪರ ಅನ್ನದಾತ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.

ಇಂದು, ತಮ್ಮ ತಂಗಿ ಮತ್ತು ತಾಯಿಯವರ ಪ್ರೋತ್ಸಾಹದಿಂದ ಖಾಸಗಿ ಉದ್ಯೋಗಕ್ಕೆ ವಿದಾಯ ಹೇಳಿ ಬೆಂಗಳೂರಿನ ವಿದ್ಯುನ್ಮಾನ ನಗರದಲ್ಲಿ ದಿ ಸ್ಟೇಷನರಿ ಸ್ಟೋರೀಸ್ ಎಂಬ ಪುಸ್ತಕ ಮತ್ತು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಾ, ಸಮಾನಾಂತರವಾಗಿ ಸಮಾಜಮುಖಿ ಸೇವೆಯನ್ನು ತೊರೆಯದೆ ಸಾಗುತ್ತಿದ್ದಾರೆ.ಸರಳ ಹಾದಿಯಲ್ಲಿ ಪ್ರಾರಂಭವಾದ ಬದುಕು, ಕಷ್ಟದ ನಡುವೆ ಬೆಳೆದ ಕನಸು, ನಾಡು-ನುಡಿ-ಸಮಾಜದ ಸೇವೆಯೊಂದಿಗೆ ಬೆಳೆದ ಹಾದಿ – ಇವೆಲ್ಲವೂ ಪ್ರಖ್ಯಾತ್ ಪೈ ಪುತ್ತೂರು ರವರ ಜೀವನವನ್ನು ಇತರರಿಗೆ ಪ್ರೇರಣೆಯನ್ನಾಗಿಸಿದೆ.

ಕನ್ನಡವೇ ನಾಡಿನ ಕಣ್ಣೆದುರು ಹೊಳೆಯುವ ಕಣ್ಮಣಿ, ಅದನ್ನು ಕಾಪಾಡಿ ಬೆಳೆಸುವುದು ಪ್ರತಿಯೊಬ್ಬರ ಹೊಣೆ – ಎಂಬ ನಂಬಿಕೆಯಿಂದ ಸಮಾಜಸೇವೆ, ಕನ್ನಡಸೇವೆ ಹಾಗೂ ಮಾನವಸೇವೆ ಒಂದೇ ದಾರಿಯೆಂದು ತೋರಿದ ಪ್ರಖ್ಯಾತ್ ಪೈ ಪುತ್ತೂರು ರವರಿಗಿಂದು ಹಾರೈಸುವುದೇ -ಅವರ ಜೀವನ ದಾರಿ ಅನೇಕ ಮಂದಿಗೆ ದೀಪವಾಗಲಿ, ಅವರ ಹಾದಿ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ.

ಬದುಕು ತನ್ನದಾಗಿರಲಿ, ಆದರೆ ಅದರ ಮೌಲ್ಯ ಸಮಾಜಕ್ಕಾಗಿ ಹೊಳೆಯಲಿ. ಕನ್ನಡವೆಂಬ ಕಣ್ಮಣಿಯನ್ನು ಕಾಪಾಡಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ಅದೇ ನಿಜವಾದ ಮಾನವೀಯತೆ. ಇದೇ ನಂಬಿಕೆಯಿಂದ ಸಾಗುತ್ತಿರುವ ಪ್ರಖ್ಯಾತ್ ಪೈ ಪುತ್ತೂರು ಅವರ ಹಾದಿ ಸಾವಿರಾರು ಜನರಿಗೆ ದಾರಿ ತೋರುವ ದೀಪ. ಅವರ ಬದುಕು ಹೇಳುವುದು ಒಂದೇ -ನಿನ್ನ ಹೆಜ್ಜೆ ನಿನ್ನದಾಗಿರಲಿ, ಆದರೆ ಅದರ ಗುರುತು ನಾಡು-ನುಡಿ-ಸಮಾಜದ ಹೃದಯದಲ್ಲಿ ಉಳಿಯಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: CoastalDakshina KannadaKaravaliPrakhyath RaiPutturPutturda MuttuTuluNaduದಕ್ಷಿಣ ಕನ್ನಡಪುತ್ತೂರುಪುತ್ತೂರ್ದ ಮುತ್ತುಪ್ರಖ್ಯಾತ್ ಪೈ ಪುತ್ತೂರುವಿವೇಕಾನಂದ ವಿದ್ಯಾಸಂಸ್ಥೆ
Share204Tweet123Send
Previous Post

ಮುಂಜಾನೆ ಸುವಿಚಾರ | ಕಷ್ಟಗಳಲ್ಲಿ ಜೊತೆಗೆ ಒಬ್ಬರು ಇದ್ದಾರೆ ಎನ್ನುವುದೇ ಒಂದು ಬಲ

Next Post

ಮಲೆನಾಡು ಸುಸ್ಥಿರ ಅಭಿವೃದ್ಧಿಗೆ ಅಜೆಂಡಾ ಜಾರಿ ಮಾಡಲು ವೃಕ್ಷಲಕ್ಷ ಆಂದೋಲನ ಒತ್ತಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಲೆನಾಡು ಸುಸ್ಥಿರ ಅಭಿವೃದ್ಧಿಗೆ ಅಜೆಂಡಾ ಜಾರಿ ಮಾಡಲು ವೃಕ್ಷಲಕ್ಷ ಆಂದೋಲನ ಒತ್ತಾಯ

ಮಲೆನಾಡು ಸುಸ್ಥಿರ ಅಭಿವೃದ್ಧಿಗೆ ಅಜೆಂಡಾ ಜಾರಿ ಮಾಡಲು ವೃಕ್ಷಲಕ್ಷ ಆಂದೋಲನ ಒತ್ತಾಯ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

March 17, 2026
ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

March 17, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಹಾಯವಾಣಿ | ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

March 17, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL