ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
“ಅಜೆಂಡಾ ಆಜ್ ತಕ್” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಮತ್ತು ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, “ಮೋದಿಯವರು ತಮಗಾಗಿ ಏನನ್ನೂ ಮಾಡಿಲ್ಲ, ಹಾಗೇ ತಮ್ಮ ಪಕ್ಷಕ್ಕಾಗಿಯೂ ಏನನ್ನೂ ಮಾಡಿಲ್ಲ, ಅವರು ಏನಾದರೂ ಮಾಡಿದ್ದರೆ ಅದು ಈ ದೇಶದ ಜನರಿಗಾಗಿ” ಎಂದು ಚರ್ಚೆಯ ಸಮಯದಲ್ಲಿ ಸ್ಪಷ್ಟಪಡಿಸಿದರು”.
ಭಾರತದ ರಾಜಕೀಯ ಚರಿತ್ರೆಯಲ್ಲಿ ಮೋದಿಯಂತಹ ದೂರದೃಷ್ಟಿಯ ಪ್ರಧಾನಿ ಮತ್ತು ಅಮಿತ್ ಶಾ ಅವರಂತಹ ಕಠಿಣ ಪರಿಶ್ರಮದ ನಾಯಕರು ಹಿಂದೆಂದೂ ಕಂಡು ಬಂದಿಲ್ಲ. ಇವರಿಬ್ಬರು ರಾಜಕೀಯದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸ್ಥಾಪಿಸಲು ಅಭೂತಪೂರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಮೋದಿಯವರ ನಾಯಕತ್ವದಲ್ಲಿ ಅಮಿತ್ ಶಾ ಅವರು ಒಡೆದು ಆಳುವ ರಾಜಕಾರಣ, ತುಷ್ಟೀಕರಣ ಮತ್ತು ಸ್ವಜನಪಕ್ಷಪಾತವನ್ನು ಕೊನೆಗೊಳಿಸಿ ದೇಶದ ರಾಜಕೀಯವನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ದಿದ್ದಾರೆ ಎನ್ನುವುದಕ್ಕೆ ಭಾರತದ ಜನತೆಯೇ ಸಾಕ್ಷಿ. ಕಳೆದ ಒಂಬತ್ತು ವರ್ಷಗಳಲ್ಲಿ ದಲಿತರು, ಹಿಂದುಳಿದವರು ಮತ್ತು ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ಸೇರಿಸುವ ಮೂಲಕ ಅವರಿಗೆ ಸಮ್ಮಾನವನ್ನು ನೀಡುವ ಭಗೀರಥ ಪ್ರಯತ್ನವನ್ನು ಯಾರಿಂದಲೂ ಮರೆ ಮಾಚುವಂತಿಲ್ಲ.

Also read: Modi Ji whatever has done, he did it for the people of the country: Amit Shah
ವೋಟ್ ಬ್ಯಾಂಕನ್ನು ಅವಲಂಬಿಸದೆ, ಮೋದಿ ಮತ್ತು ಶಾ ಜೋಡಿಯು ದೇಶದಲ್ಲಿ ಪರಿವರ್ತನೆ ಮತ್ತು ಅಬಿವೃದ್ಧಿಯನ್ನು ತರುವ ಕೆಲಸ ಮಾಡಿದೆ. ಭಾರತೀಯ ರಾಜಕೀಯ ರಂಗದಲ್ಲಿ ರಾಷ್ಟ್ರವನ್ನು ಸರ್ವಸ್ವಕ್ಕಿಂತ ಹೆಚ್ಚು ಎಂದು ಭಾವಿಸುವ ಮೋದಿ ಮತ್ತು ಶಾ ಅವರು ಭಾರತೀಯ ಜನತಾ ಪಕ್ಷವನ್ನು ಮೊದಲಿನಿಂದಲೂ ಉತ್ತುಂಗಕ್ಕೆ ಕರೆದೊಯ್ಯುತ್ತಿದ್ದಾರೆ.

ಭಾರತೀಯ ಜನತಾ ಪಕ್ಷದ ಗೆಲುವಿನ ಮ್ಯಾಜಿಕ್ ಕೇವಲ ಮೋದಿ ಹೆಸರಿನಿಂದ ಮಾತ್ರವಲ್ಲದೆ, ರಾಜಕೀಯದ ಚಾಣಕ್ಯ ಎಂದು ಕರೆಯಲ್ಪಡುವ ಅಮಿತ್ ಶಾ ಅವರ ಚುನಾವಣಾ ತಂತ್ರಗಳಲ್ಲಿಯೂ ಅಡಗಿದೆ ಎಂದು ಯಾವುದೇ ಸಂಕೋಚವಿಲ್ಲದೇ ಒಪ್ಪಿಕೊಳ್ಳಬಹುದು.










Discussion about this post