ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಬೆಳಗಾವಿ |
ನೈಋತ್ಯ ರೈಲ್ವೆಯು ಬೆಳಗಾವಿ – ಬೆಂಗಳೂರು #Bengaluru ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಒದಗಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ಪ್ರಕಟಿಸಿದ್ದು, ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
06221 ಸಂಖ್ಯೆಯ ಬೆಳಗಾವಿ #Belagavi – ಬೆಂಗಳೂರು ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 5ರ ಭಾನುವಾರ ರಾತ್ರಿ 8 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 8:30 ಕ್ಕೆ ಬೆಂಗಳೂರಿಗೆ ತಲುಪುತ್ತದೆ.ಹಿಂದಿರುಗುವ ದಿಕ್ಕಿನಲ್ಲಿ, 06222 ಸಂಖ್ಯೆಯ ಬೆಂಗಳೂರು – ಬೆಳಗಾವಿ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 6ರ ಸೋಮವಾರ ಸಂಚರಿಸುತ್ತದೆ. ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8:30 ಕ್ಕೆ ಬೆಳಗಾವಿಗೆ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ವಿಶೇಷ ರೈಲುಗಳು ಲೋಂಡಾ, ಅಲ್ನಾವರ, ಧಾರವಾಡ, ಎಸ್’ಎಸ್’ಎಸ್ ಹುಬ್ಬಳ್ಳಿ, ಎಸ್’ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರದಲ್ಲಿ ನಿಲುಗಡೆ ನೀಡಲಿವೆ.
ಎಷ್ಟು ಬೋಗಿ ಇರಲಿದೆ?
ಈ ರೈಲು 22 ಬೋಗಿಗಳನ್ನು ಹೊಂದಿದ್ದು, 20 ಸ್ಲೀಪರ್ ಕ್ಲಾಸ್ ಕೋಚ್’ಗಳು, 02 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಮತ್ತು ಅಂಗವಿಕಲ ಸ್ನೇಹಿ ಕಂಪಾರ್ಟ್ಮೆೆಂಟ್ ಅನ್ನು ಒಳಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post