ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೀಪಾವಳಿ ಹಬ್ಬದ #DeepavaliFestival ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿನಿಂದ ಕೊಲ್ಲಂ #Kollam ಮತ್ತು ತೂತ್ತುಕ್ಕುಡಿ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚರಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, ಬೆಂಗಳೂರಿನಿಂದ ಎರಡೂ ನಗರಗಳಿಗೆ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಓಡಿಸಲಾಗುತ್ತಿದೆ ಎಂದು ತಿಳಿಸಿದೆ.
ಬೆಂಗಳೂರು-ಕೊಲ್ಲಂ ರೈಲು:
06561 ಸಂಖ್ಯೆಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ #Bengaluru ಬೆಂಗಳೂರು – ಕೊಲ್ಲಂ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 16ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 6:20 ಕ್ಕೆ ಕೊಲ್ಲಂ ತಲುಪಲಿದೆ.
06562 ಸಂಖ್ಯೆಯ ಕೊಲ್ಲಂ – ಬೆಂಗಳೂರು ಕಂಟೋನ್ಮೆೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್17ರ ಶುಕ್ರವಾರ ಬೆಳಿಗ್ಗೆ 10:45 ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಬೆಳಿಗ್ಗೆ 3:30 ಕ್ಕೆ ಬೆಂಗಳೂರು ಕಂಟೋನ್ಮೆೆಂಟ್ ನಿಲ್ದಾಣ ತಲುಪಲಿದೆ.
06567 ಸಂಖ್ಯೆಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕೊಲ್ಲಂ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 21ರ ಮಂಗಳವಾರ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 12.55 ಗಂಟೆಗೆ ಕೊಲ್ಲಂ ನಿಲ್ದಾಣವನ್ನು ತಲುಪಲಿದೆ.
06568 ಸಂಖ್ಯೆಯ ಕೊಲ್ಲಂ – ಬೆಂಗಳೂರು ಕಂಟೋನ್ಮೆೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 22ರ ಬುಧವಾರ ಸಂಜೆ 5 ಗಂಟೆಗೆ ಕೊಲ್ಲಂ ನಿಂದ ಹೊರಟು ಮರುದಿನ ಬೆಳಿಗ್ಗೆ 9.45 ಗಂಟೆಗೆ ಬೆಂಗಳೂರು ಕಂಟೋನ್ಮೆೆಂಟ್ ನಿಲ್ದಾಣ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರ್, ಪಾಲಕ್ಕಾಡ್, ತ್ರಿಸೂರ್, ಆಳುವಾ, ಎರ್ನಾಕುಲಂಟೌನ್, ಕೊಟ್ಟಾಯಂ, ಚಂಗನಸ್ಸೇರಿ, ತಿರುವಳ್ಳಾ, ಚೆಂಗನ್ನೂರ್, ಮಾವೇಲಿಕರ ಮತ್ತು ಕಾಯಂಕುಲಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಯಾವೆಲ್ಲಾ ಕೋಚ್’ಗಳು ಇರಲಿವೆ?
ಈ ರೈಲುಗಳು 02 ಎಸಿ2 ಟೈರ್ ಕೋಚ್’ಗಳು, 03 ಎಸಿ 3-ಟೈರ್ ಕೋಚ್ ಗಳು, 11 ದ್ವಿತೀಯ ದರ್ಜೆ ಸ್ಲೀಪರ್ ಕೋಚ್’ಗಳು, 04 ದ್ವಿತೀಯ ದರ್ಜೆ ಕೋಚ್’ಗಳು ಮತ್ತು 02 ಎಸ್’ಎಲ್’ಆರ್’ಡಿ ಕೋಚ್’ಗಳನ್ನು ಒಳಗೊಂಡಿರುತ್ತದೆ.ಬೆಂಗಳೂರು-ತೂತ್ತುಕ್ಕುಡಿ ವಿಶೇಷ ರೈಲು
06297 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ತೂತ್ತುಕ್ಕುಡಿ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 17 ಮತ್ತು ಅಕ್ಟೋಬರ್ 21ರಂದು ರಾತ್ರಿ 10 ಗಂಟೆಗೆ ಕೆಎಸ್’ಆರ್ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 11 ಗಂಟೆಗೆ ತೂತ್ತುಕ್ಕುಡಿಯನ್ನು ತಲುಪುತ್ತದೆ.
06298 ಸಂಖ್ಯೆಯ ತೂತ್ತುಕ್ಕುಡಿ – ಬೆಂಗಳೂರು ಕಂಟೋನ್ಮೆೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 18 ಮತ್ತು ಅಕ್ಟೋಬರ್ 22 ರಂದು ಮಧ್ಯಾಹ್ನ2 ಗಂಟೆಗೆ ತೂತ್ತುಕ್ಕುಡಿಯಿಂದ ಹೊರಟು ಮರುದಿನಬೆಳಿಗ್ಗೆ 4:15 ಗಂಟೆಗೆ ಬೆಂಗಳೂರು ಕಂಟೋನ್ಮೆೆಂಟ್ ತಲುಪುತ್ತದೆ.
ಎಲ್ಲೆಲ್ಲಿ ನಿಲುಗಡೆ?
ಮಾರ್ಗದಲ್ಲಿ ಈ ರೈಲು, ಬೆಂಗಳೂರು ಕಂಟೋನ್ಮೆೆಂಟ್, ಹೊಸೂರು, ಧರ್ಮಪುರಿ, ಓಮಲೂರ್, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಕೊಡೈಕೆನಾಲ್ ರೋಡ್, ಶೋಲವಂದನ್, ಮದುರೈ, ತಿರುಪ್ಪರಂಕುಂಡ್ರಂ, ತಿರುಮಂಗಲಂ, ವಿರುದುನಗರ್, ಸಾತ್ತೂರ್, ಕೋವಿಲ್ಪಟ್ಟಿ ಮತ್ತು ತೂತ್ತಿಮೇಲೂರ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post