ಬೆಂಗಳೂರು: ಶತಾಯುಷಿ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಸಹಕಾರಿಯಾಗುವಂತೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ನಾಳೆ ಯಶವಂತಪುರದಿಂದ ಸಿದ್ಧಗಂಗಾ ಮಠಕ್ಕೆ ವಿಶೇಷ ರೈಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.
ಇಂತಿದೆ ವೇಳಾಪಟ್ಟಿ:
6.00, 9.50, 14.00 ಹಾಗೂ 19.00 ಗಂಟೆಗೆ ಯಶವಂತಪುರ ಬಿಡುವ ವಿಶೇಷ ರೈಲು ಕ್ರಮವಾಗಿ 7.30, 11.30, 15.50 ಹಾಗೂ 20.30 ಗಂಟೆಗೆ ತುಮಕೂರು ತಲುಪಲಿದೆ. ಹಾಗೆಯೇ, 7.45, 11.30, 16.45 ಹಾಗೂ 21.00 ಗಂಟೆಗೆ ತುಮಕೂರು ಬಿಡುವ ರೈಲು ಕ್ರಮವಾಗಿ 9.15, 13.30, 18.30 ಹಾಗೂ 22.30 ಗಂಟೆಗೆ ಯಶವಂತಪುರ ತಲುಪಲಿದೆ.
Discussion about this post