ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಎರ್ನಾಕುಲಂ ಜಂಕ್ಷನ್’ನಿಂದ ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರಗಳು ಹೀಗಿವೆ.
1. 06147 ಸಂಖ್ಯೆಯ ಎರ್ನಾಕುಲಂ ಜಂಕ್ಷನ್ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 28 ಮತ್ತು ಅಕ್ಟೋಬರ್ 5ರಂದು ಅಂದರೆ ಎರಡು ಟ್ರಿಪ್ ಭಾನುವಾರಗಳಂದು ಸಂಜೆ 4:20 ಗಂಟೆಗೆ ಎರ್ನಾಕುಲಂ ಜಂಕ್ಷನ್’ನಿಂದ ಸಂಚರಿಸುತ್ತದೆ. ರೈಲು ಮರುದಿನ (ಸೋಮವಾರ) ಬೆಳಿಗ್ಗೆ 8:15 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ.
2. 06148 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್ – ಎರ್ನಾಕುಲಂ ಜಂಕ್ಷನ್ ಎಕ್ಸ್’ಪ್ರೆಸ್ ವಿಶೇಷ ರೈಲು, ಸೆ.29 ಹಾಗೂ ಅ.6ರಂದು ಅಂದರೆ ಎರಡು ಟ್ರಿಪ್ ಸಂಚರಿಸಲಿದೆ.
ಸೋಮವಾರಗಳಂದು ರಾತ್ರಿ 22:10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್’ನಿಂದ ಹೊರಡುತ್ತದೆ. ರೈಲು ಮೂರನೇ ದಿನ (ಮಂಗಳವಾರ) ಬೆಳಿಗ್ಗೆ 10:00 ಗಂಟೆಗೆ ಎರ್ನಾಕುಲಂ ಜಂಕ್ಷನ್ ತಲುಪುತ್ತದೆ.
ಈ ರೈಲು ಎರಡೂ ದಿಕ್ಕುಗಳಲ್ಲಿ ಅಲುವಾ, ತ್ರಿಶೂರ್, ಪಾಲಕ್ಕಾಡ್ ಜಂಕ್ಷನ್, ಪೋದನೂರು ಜಂಕ್ಷನ್, ತಿರುಪ್ಪೂರು, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಬಂಗಾರಪೇಟೆ, ವೈಟ್’ಫೀಲ್ಡ್, ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.
ಈ ರೈಲು 22 ಬೋಗಿಗಳೊಂದಿಗೆ ಚಲಿಸಲಿದ್ದು, ಇದರಲ್ಲಿ ಎರಡು ಎಸಿ ಪ್ರಥಮ ದರ್ಜೆ, ಮೂರು ಎಸಿ 2-ಟೈರ್, ಏಳು ಎಸಿ 3-ಟೈರ್ ಎಕಾನಮಿ, ನಾಲ್ಕು ಸ್ಲೀಪರ್ ಕ್ಲಾಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಜನರೇಟರ್ ಹೊಂದಿರುವ ಎರಡು ಲಗೇಜ್-ಕಮ್-ಬ್ರೇಕ್ ವ್ಯಾಗನ್’ಗಳು ಸೇರಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post