No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಅಧಿಕ ಜ್ಯೇಷ್ಠ ಅಂಗವಾಗಿ ಮೈಸೂರಿನಲ್ಲಿ ಶ್ರೀ ಸತ್ಯಾತ್ಮ ದಿಗ್ವಿಜಯ | ಗುರುವಾರ ನಗರದಲ್ಲಿ ಬೃಹತ್ ಮೆರವಣಿಗೆ

ಮೇ 17ರಿಂದ ಜೂನ್ 15ರ ವರೆಗೆ 33 ದಿನ ವಿಶೇಷ ಕಾರ್ಯಕ್ರಮ | ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯ

kalpa News by kalpa News
May 14, 2026
in ಮೈಸೂರು
0
ಅಧಿಕ ಜ್ಯೇಷ್ಠ ಅಂಗವಾಗಿ ಮೈಸೂರಿನಲ್ಲಿ ಶ್ರೀ ಸತ್ಯಾತ್ಮ ದಿಗ್ವಿಜಯ | ಗುರುವಾರ ನಗರದಲ್ಲಿ ಬೃಹತ್ ಮೆರವಣಿಗೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಅರಮನೆ ನಗರಿ ಮೈಸೂರಿನಲ್ಲಿ ಶ್ರೀ ಸತ್ಯಾತ್ಮ ದಿಗ್ವಿಜಯ
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ‘ಮೈಸೂರು ದಿಗ್ವಿಜಯ’
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾರಥ್ಯ
ಮೇ 17ರಿಂದ ಜೂನ್ 15ರ ವರೆಗೆ 33 ದಿನಗಳ ಕಾಲವೂ ವೈಭವೋಪೇತ ಕಾರ್ಯಕ್ರಮ
ಮೇ 14 ರಂದು ಶ್ರೀ ಸತ್ಯಾತ್ಮ ತೀರ್ಥರ ಗುರುಗಳ ಪುರ ಪ್ರವೇಶ
ಜೂನ್ 13 ರಂದು ಶ್ರೀನಿವಾಸ ಕಲ್ಯಾಣೋತ್ಸವ
ಪ್ರತಿದಿನ ಸಂಜೆ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾರಥ್ಯದಲ್ಲಿ ಅರಮನೆ ನಗರಿ ಮೈಸೂರಿನಲ್ಲಿ 33 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಸರಣಿ ‘ಮೈಸೂರು ದಿಗ್ವಿಜಯ’ ಆಯೋಜನೆಗೊಂಡಿದೆ.

ಮೇ 17ರಿಂದ ಜೂನ್ 15ರ ವರೆಗೆ ನಗರದ ಅಗ್ರಹಾರದಲ್ಲಿ ಇರುವ ಶ್ರೀ ಧನ್ವಂತರಿ ಕ್ಷೇತ್ರ (ಶ್ರೀ ಸತ್ಯ ಸಂಕಲ್ಪರು ಮತ್ತು ಶ್ರೀ ಸತ್ಯ ಸಂತುಷ್ಟ ತೀರ್ಥರ ಮೂಲ ವೃಂದಾವನ ಸನ್ನಿಧಾನ) ಶ್ರೀ ಉತ್ತರಾದಿ ಮಠದಲ್ಲಿ #UttaradiMatha ಶ್ರೀಗಳಿಂದ ಶ್ರೀ ಮೂಲ ರಾಮ ದೇವರ ಸಂಸ್ಥಾನ ಪೂಜಾದಿಗಳು ನೆರವೇರಲಿವೆ. ಅಧಿಕ ಮಾಸದ ವಿಶೇಷ ಹೋಮ, ಹವನಾದಿಗಳು ಸಂಪನ್ನಗೊಳ್ಳಲಿವೆ. 33 ದಿನಗಳ ಕಾಲವೂ ವೈಭವೋಪೇತ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಉತ್ತರಾದಿ ಮಠದ ಮೈಸೂರು ಶಾಖೆ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ತಿಳಿಸಿದ್ದಾರೆ.

Also Read>> ಯಶವಂತಪುರ-ತಾಳಗುಪ್ಪ ವೀಕ್ಲಿ ಎಕ್ಸ್’ಪ್ರೆಸ್ ಇನ್ಮುಂದೆ ಪರಮ್ನೆಂಟ್ | ರೈಲು ಸಂಖ್ಯೆ ಬದಲು

ಬೃಹತ್ ಮೆರವಣಿಗೆ
ಮೈಸೂರು ದಿಗ್ವಿಜಯ-ಅಧಿಕ ಮಾಸದ ಕಾರ್ಯಕ್ರಮ ಸರಣಿ ಆರಂಭೋತ್ಸವದ ಅಂಗವಾಗಿ ಮೇ 14 ರಂದು ಶ್ರೀ ಸತ್ಯಾತ್ಮ ತೀರ್ಥರ #SatyatmaThirthaSwamiji ಗುರುಗಳ ಪುರ ಪ್ರವೇಶ, ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

14ರಂದು ಸಂಜೆ 4.30ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಿಂದ ಅಗ್ರಹಾರದ ಧನ್ವಂತರಿ ಕ್ಷೇತ್ರ ಉತ್ತರಾದಿ ಮಠದ ವರೆಗೆ ಹಲವು ಕಲಾತಂಡಗಳೊಂದಿಗೆ ಪಲ್ಲಕ್ಕಿ ಸಹಿತ ಮೆರವಣಿಗೆ ನಡೆಯಲಿದೆ. 33 ದಿನಗಳ ಕಾರ್ಯಕ್ರಮಕ್ಕೆ ಶ್ರೀ ಸತ್ಯಾತ್ಮ ತೀರ್ಥರನ್ನು ವೈಭವದಿಂದ ಬರಮಾಡಿಕೊಳ್ಳಲಾಗುವುದು. ಮೆರವಣಿಗೆಯಲ್ಲಿ ನಾದಸ್ವರ, ವೀರಗಾಸೆ ಕುಣಿತ, ಚಂಡೆ ನಗಾರಿ, ಡೊಳ್ಳು, ಬೊಂಬೆ ವೇಷ, ಕಂಸಾಳೆ, ಚೆನ್ನೈನ ಚಿತ್ತಾರದ ಆನೆ ಹಾಗೂ ವಿವಿಧ ಭಜನಾ ಮಂಡಳಿಗಳು ಇರಲಿವೆ.

ನಂತರ ಉಡುಪಿಯ ತಂಡದಿಂದ  ಬಾಣ ಬಿರುಸು ಪ್ರದರ್ಶನವಿದೆ. ಮೆರವಣಿಗೆಯಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ.ಹರೀಶ್‌ಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‌ಕುಮಾರ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಇತರರು ಭಾಗವಹಿಸಲಿದ್ದಾರೆ.

17ರಂದು ಉದ್ಘಾಟನೆ
ಅಧಿಕ ಮಾಸದ ಅಂಗವಾಗಿ ಅಗ್ರಹಾರ ಮುಖ್ಯ ರಸ್ತೆಯಲ್ಲಿರುವ ಶ್ರೀ ರುದ್ರ ದೇವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಮೇ 17ರಂದು ‘ಮೈಸೂರು ದಿಗ್ವಿಜಯ’ ಅಧಿಕ ಮಾಸೋತ್ಸವ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಗರದ ಗಣ್ಯರು, ಪಂಡಿತರು ಭಾಗವಹಿಸಲಿದ್ದಾರೆ. ಮೇ 18 ರಿಂದ ಜೂನ್ 15ರ ವರೆಗೆ ನಿತ್ಯವೂ ಸಂಜೆ 5.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ನಂತರ ಶ್ರೀ ಸತ್ಯಾತ್ಮ ಶ್ರೀಗಳಿಂದ ಅಮೃತೋಪದೇಶವಿದೆ.ಸಂಜೆ ಸಾಂಸ್ಕೃತಿಕ ವೈವಿಧ್ಯ
ಮೇ 18ರಂದು ವಿದ್ವಾನ್ ಪ್ರಸನ್ನ ಗುಡಿ ಅವರಿಂದ ದಾಸವಾಣಿ, 19ರಂದು ವಿದುಷಿ ವಿದ್ಯಾ ತಡಕೋಡ ಅವರಿಂದ ಹರಿಕಥೆ, 20ರಂದು ದಾಸ ಲಹರಿ- ಜುಗಲ್ ಬಂದಿ: ಯುವ ಪ್ರತಿಭೆಗಳಾದ ಕೌಸಲ್ಯಾ ರಘುರಾಮ ಮತ್ತು ಎ.ಆರ್. ಅಪ್ರಮೇಯ ಅವರಿಂದ ಗಾಯನ ನೆರವೇರಲಿದೆ.

21 ರಂದು ಮೈಸೂರಿನ ವಿದುಷಿ ಡಾ. ತುಳಸಿ ರಾಮಚಂದ್ರ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ, 22ರಂದು ವಿದುಷಿ ಸ್ಮಿತಾ ಕಿರಣರಿಂದ ವೇಣುವಾದನ, 23 ರಂದು ಸಂವಾದ ಗೋಷ್ಠಿ ನೆರವೇರಲಿದೆ. ವಿದ್ವಾಂಸರಾದ ಅರುಣಾಚಾರ್ಯ, ಪ್ರವೀಣ ಆಚಾರ್ಯ, ಭೀಮಸೇನಾಚಾರ್ಯ ಕುಲಕರ್ಣಿ ಮತ್ತು ರವಿ ಆಚಾರ್ಯ ಮತ್ತಿಹಳ್ಳಿ ಭಾಗವಹಿಸಲಿದ್ದಾರೆ.

Also Read>> ಹರಿಹರ-ಹೊಸಪೇಟೆ, ಧಾರವಾಡ-ಬೆಂಗಳೂರು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

24 ರಂದು ಖ್ಯಾತ ಕಲಾವಿದ ರಾಹುಲ್ ವೆಲ್ಲಾಳ್ ಅವರಿಂದ ದಾಸವಾಣಿ, 25 ರಂದು ಸತ್ಯಾತ್ಮಾ ಬ್ಯಾಂಡ್‌ನ ಕಲಾವಿದ ಮೋಹನ್‌ನೆಲಗೋಳ, ವಾದಿರಾಜ ಕಾಖಂಡಕಿ  ಅವರಿಂದ ದಾಸವಾಣಿ ಇದೆ. ಮೇ 26ರಂದು ದಾಸ ಲಹರಿ – ಅನಂತ ರಾಜ್ ಮಿಸ್ತ್ರಿ ಮತ್ತು ದಿವ್ಯಾ ಗಿರಿಧರ ಅವರಿಂದ ಗಾಯನವಿದೆ. 27 ರಂದು ರೂಪಶ್ರೀ ಪ್ರಭಂಜನ ಅವರಿಂದ ದಾಸವಾಣಿ, 28 ರಂದು ಸುಮಂತ ವಸಿಷ್ಟರಿಂದ ದಾಸಾಂಜಲಿ, 29ರಂದು ಪಂಡಿತ ಆನಂದ ತೀರ್ಥ ಆಚಾರ್ಯರಿಂದ ವೇಣುಗಾನವಿದೆ.

ರಾಹುಲ್ ವೆಲ್ಲಾಳ್

ವಾರ್ಷಿಕೋತ್ಸವ
30 ರಂದು ಉತ್ತರಾದಿ ಮಠದ ದಾಸ ಸಾಹಿತ್ಯ ಅಧ್ಯಯನ ಸಂಸ್ಥೆ- ಸೌರಭ ವಿದ್ಯಾಲಯದ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ. ಕೊಪ್ಪಳದ ಪಂಡಿತ ಮತ್ತು ವಿದ್ಯಾಲಯದ ನೇತಾರ ಪ್ರಮೋದ ಆಚಾರ್ಯ ಪೂಜಾರ ನೇತೃತ್ವ ವಹಿಸಲಿದ್ದಾರೆ. 31 ರಂದು ಖ್ಯಾತ ಗಾಯಕ ವಿದ್ವಾನ್ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ರಂಜಿಸಲಿದೆ.

ಜೂನ್ 1 ರಂದು ರಜತ ಕುಲಕರ್ಣಿ ಅವರಿಂದ ದಾಸರಂಜನಿ, 2 ರಂದು ನರ್ತಕಿಯರಾದ ಭಾವನಾ ಮತ್ತು ಭೂಮಿಕಾ ಅವರಿಂದ ಭಾರತನಾಟ್ಯ, 3 ರಂದು ವಿದುಷಿ ಲಕ್ಷ್ಮಿ ಬೆಳ್ಮಣ್ಣು ಅವರಿಂದ ದಾಸಾಂಜಲಿ, 4 ರಂದು ಖ್ಯಾತ ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ದಾಸವಾಣಿ ವಿಜೃಂಭಿಸಲಿದೆ.

ವಿದ್ವಾನ್ ರಾಯಚೂರು ಶೇಷಗಿರಿ ದಾಸ

ನಾಟಕ ಪ್ರದರ್ಶನ
5 ರಂದು ‘ವಿಜಯಾಗ್ರಜ ಜಯ ನಾಟಕವು ಮೈಸೂರಿನ ಯುವಾತ್ಮಾ ತಂಡದಿಂದ ಪ್ರದರ್ಶನಗೊಳ್ಳಲಿದೆ. 6 ರಂದು ಖ್ಯಾತ ವಿದ್ವಾನ್ ರಾಯಚೂರು ಶೇಷಗಿರಿ ದಾಸರಿಂದ ದಾಸಾಂಜಲಿ ಮೊಳಗಲಿದೆ.

7 ರಂದು ವಿದ್ವಾನ್ ಶ್ರೀಬಾಲು ಮಾಸ್ತಿ ಅವರಿಂದ ವೀಣಾ ವಾದನ, 8 ರಂದು ಪಂಡಿತ ವ್ಯಾಸ ತೀರ್ಥಾಚಾರ್ಯರಿಂದ ಭರತನಾಟ್ಯ, 9ರಂದು ವಿದುಷಿಯರಾದ ಭಾರತೀ ಸಮೀರ, ಇಂದಿರಾ ವಾದಿರಾಜರಿಂದ ದಾಸ ಲಹರಿ, 10 ರಂದು ಪಂಡಿತ ಕೊರ್ಲಹಳ್ಳಿ ಶ್ರೀನಿವಾಸ ಆಚಾರ್ಯ ಮತ್ತು ಸುಧಾ ತಂಡದಿಂದ ವೀಣಾ ವಾದನ, 11 ರಂದು ಗುಂಡಾಚಾರ್ಯ ಮತ್ತು ಜಯಸಿಂಹರಿಂದ ದಾಸವಾಣಿ ಇದೆ.

ಗಾಯಕಿ ಸಂಗೀತಾ ಕಟ್ಟಿ

ಸಂಗೀತಾ ಕಟ್ಟಿ ಗಾಯನ
ಜೂನ್ 12ರಂದು ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಂದ ದಾಸಾಂಜಲಿ, 13 ರಂದು ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ. 14 ರಂದು ಸುಧಾಂಶು ಕಟ್ಟಿ ಮತ್ತು ಶ್ರೇಷ್ಠ ಕೌಲಗಿ ಅವರಿಂದ ಬಾನ್ಸುರಿ- ಸಂತೂರ್ ವಾದನವಿದೆ. 15 ರ ಸಂಜೆ  ಅಧಿಕ ಮಾಸೋತ್ಸವ ಸಮಾರೋಪ ಸಮಾರಂಭವಿದೆ. ಉತ್ಸವ ಪರ್ಯಂತ ಸೇವ ಸಲ್ಲಿಸಿದವರಿಗೆ ಗೌರವಾರ್ಪಣೆ, ಶ್ರೀ ಸತ್ಯಾತ್ಮ ಶ್ರೀಗಳಿಂದ ಅನುಗ್ರಹ ಸಂದೇಶವಿದೆ.

ಸುವ್ಯವಸ್ಥೆ
ಪರ ಸ್ಥಳಗಳಿಂದ ಬರುವ ಭಕ್ತರಿಗೆ ವಸತಿ ಇತ್ಯಾದಿಗಳ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮಠದ ಕೌಂಟರಿನಲ್ಲಿ ಮಾಹಿತಿ ಪಡೆಯಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Adhika MasaKannada News WebsiteLatest News KannadamysoreSri Satyatma Thirtha SwamijiSrinivasa Kalyana MahotsavaUttaradi Mathaಅಧಿಕ ಜ್ಯೇಷ್ಠ ಮಾಸಅರಮನೆ ನಗರಿಉತ್ತರಾದಿ ಮಠಮಧ್ವಾಚಾರ್ಯರುಮೈಸೂರುಮೈಸೂರು ದಿಗ್ವಿಜಯಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಶ್ರೀನಿವಾಸ ಕಲ್ಯಾಣೋತ್ಸವ
Share199Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಯಶವಂತಪುರ-ತಾಳಗುಪ್ಪ ವೀಕ್ಲಿ ಎಕ್ಸ್’ಪ್ರೆಸ್ ಇನ್ಮುಂದೆ ಪರಮ್ನೆಂಟ್ | ರೈಲು ಸಂಖ್ಯೆ ಬದಲು

Next Post

ಮೇ.16: ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನ

kalpa News

kalpa News

Next Post
ಶಿವಮೊಗ್ಗ | ಫೆ.21ರಂದು ಉದ್ಯೋಗ ಮೇಳ

ಮೇ.16: ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL