ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾಧ್ವಯತಿ ಪರಂಪರೆಯಲ್ಲಿ ಅಗ್ರ ಗಣ್ಯರಾದ ಶ್ರೀಮಧ್ವಾಚಾರ್ಯರಿಂದ ಸನ್ಯಾಸಾಶ್ರಮ ಸ್ವೀಕರಿಸಿದ ಶ್ರೀಪದ್ಮನಾಭ ತೀರ್ಥರ ಆರಾಧನಾ ದಿನ. ಅವರ ಆರಾಧನೆಯ ಸಂದರ್ಭದಲ್ಲಿ ಅವರ ಬಗ್ಗೆ ಭಕ್ತಿಯ ಚಿಂತನೆ.
ಪೂರ್ಣಪ್ರಜ್ಞಕ್ರೃತಂಭಾಷ್ಯಮಾದೌ ತದ್ಭಾವಪೂರ್ವಕಂ/
ಯೋ ವ್ಯಾಕರೋ ನಮಸ್ತ್ಸಸ್ಮೈ ಪದ್ಮನಾಭಾಖ್ಯ ಯೋಗಿನೇ//
ಶ್ರೀ ಪದ್ಮನಾಭ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀಶೋಭನ ಭಟ್ಟರು. ಇವರ ಸ್ಥಳ ಗೋದಾವರಿ ತೀರ. ಒರಂಗಲ್ಲು ಸಂಸ್ಥಾನದ ಆಸ್ಥಾನ ಪಂಡಿತರಾಗಿದ್ದ ಇವರು, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹರಿಹರ-ಬುಕ್ಕರೂ ಕೂಡ ಇವರಲ್ಲಿ ಗೌರವವನ್ನು ಇಟ್ಟುಕೊಂಡಿದ್ದರು.
ಅತೀವ ಮೇಧಾವಿಗಳು ಮತ್ತು ವರ್ಚಸ್ವಿಗಳಾಗಿದ್ದ ಶ್ರೀಗಳು ಮಧ್ವಾಚಾರ್ಯರೊಡನೆ ದ್ವೈತಾದ್ವೈತದ ವಾದದಲ್ಲಿ, ಇವರು ಮಧ್ವಾಚಾರ್ಯರಿಗೆ ತಲೆಬಾಗಿ ಅವರ ಶಿಷ್ಯರಾದರು.
ಇವರು ಆಚಾರ್ಯರೊಡನೆ ಹಲವು ಕಾಲ ಇದ್ದು 1317ರಲ್ಲಿ ಸನ್ಯಾಸತ್ವ ಸ್ವೀಕರಿಸಿ, ಪದ್ಮನಾಭ ತೀರ್ಥರೆಂದು ನಾಮಕರಣ ಪಡೆದರು.
ಇವರು ದ್ವೈತ ಸಿದ್ಧಾಂತದ ಪ್ರಚಾರದ ಜೊತೆಗೆ ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ. ಇವರು ಆಚಾರ್ಯರ ಭಾಷ್ಯಕ್ಕೆ ಸತ್ತರ್ಕರ ರತ್ನಾವಳಿ ಎಂಬ ವ್ಯಾಖ್ಯಾನವನ್ನು, ಅನುವ್ಯಾಖ್ಯಾನಕ್ಕೆ ಸಂನ್ಯಾಸಿಯ ರತ್ನಾವಳಿ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಅಲ್ಲದೇ ಆನಂದಮಾಲಾ, ವಾಯುಲೀಲ ವಿಸ್ತೀರ್ಣದ 8 ಸದ್ಗುಣಗಳನ್ನು ರಚಿಸಿದ್ದಾರೆ. ಮಾಯವಾದ ಖಂಡನ, ಉಪಾಧಿಖಂಡನಕ್ಕೂ ವ್ಯಾಖ್ಯಾನವನ್ನು ಬರೆದಿದ್ದಾರೆ.
ಹೀಗೆ ಶ್ರೀಪದ್ಮನಾಭತೀರ್ಥರು ಸುಮಾರು 7 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನು ಆಚಾರ್ಯರ ನಂತರ ಆಳಿ, ಶ್ರೀ ಬ್ರಹ್ಮಕರಾರ್ಚಿತ ಮೂರ್ತಿ ಶ್ರೀಮೂಲರಾಮದೇವರನ್ನು ಅರ್ಚಿಸಿ, ಮಹಾಸಂಸ್ಥಾನವನ್ನು ಶ್ರೀಮದಾಚಾರ್ಯರ ಆದೇಶದಂತೆ ಅವರಿಂದಲೇ ಸನ್ಯಾಸ ಪಡೆದ ಶ್ರೀನರಹರಿ ತೀರ್ಥರಿಗೆ ಒಪ್ಪಿಸಿ, 1324ರಲ್ಲಿ ನವವೃಂದಾವನದಲ್ಲಿ (ಆನೆಗೊಂದಿಯಲ್ಲಿ) ವೃಂದಾವನಸ್ಥರಾದರು.
ಇವರ ಆರಾಧನೆಯು ಕಾರ್ತಿಕ ಮಾಸದ ಬಹುಳ ಚತುರ್ದಶಿಯಂದು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಮಧ್ವಮತದ ಪ್ರಚಾರ ಮತ್ತು ಉದ್ಧಾರಕ್ಕಾಗಿ ಶ್ರಮಿಸಿದ ಇಂತಹ ಮಹಾನುಭಾವರಾದ ಶ್ರೀಪದ್ಮನಾಭ ತೀರ್ಥರ ಆರಾಧನೆಯು ಪರ್ವ ದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
Get in Touch With Us info@kalpa.news Whatsapp: 9481252093
Discussion about this post