ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶ್ರೀ ವಿಜಯ ಕಲಾನಿಕೇತನ ಅರ್ಪಿಸುವ ಸಹೃದಯ 2020 ಮಾಲಿಕೆ ಉಪನ್ಯಾಸ, ಪ್ರಾತ್ಯಕ್ಷಿಕಾ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮ ಮೇ 30ರ ಶನಿವಾರ ಸಂಜೆ 5 ಗಂಟೆಗೆ ಫೇಸ್‌ಬುಕ್ ಲೈವ್ ಮೂಲಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ.ಕೆ.ಎಸ್. ಚೈತ್ರ ಅವರಿಂದ ಜಾವಳಿ ಪ್ರಭಾವಳಿ ಹಾಗೂ ವಿದುಷಿ ಸುಮಂಗಲಾ ರತ್ನಾಕರ್ ಅವರಿಂದ ಭರತನಾಟ್ಯ ಮಾರ್ಗಕ್ಕಾಗಿ ನೃತ್ಯಬಂಧಗಳನ್ನು ರಚಿಸುವಲ್ಲಿ ಸವಾಲುಗಳು ಎಂಬ ವಿಷಯದ ಬಗೆಗೆ ಉಪನ್ಯಾಸ ಪ್ರಾತ್ಯಕ್ಷಿಕೆ ನಡೆಯಲಿದೆ.
ಮಾಲಿಕೆಯ ಮುನ್ನುಡಿಯನ್ನು ಡಾ. ಕೆ.ಎಸ್.ಪವಿತ್ರ ಅವರು ನುಡಿಯಲಿದ್ದು, ಶ್ರೀವಿಜಯದ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
https://facebook.com/shrivijayakalanikethana.registered ಲಿಂಕ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಫೇಸ್‌ಬುಕ್ ಲೈವ್‌ನಲ್ಲಿ ವೀಕ್ಷಿಸಬಹುದು.
Get in Touch With Us info@kalpa.news Whatsapp: 9481252093















