ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವಿಕಾಸ ಪ್ರೌಢಶಾಲೆ ಎಸ್ ಎಸ್‌ಎಲ್‌ಸಿ ಫಲಿತಾಂಶದಲ್ಲಿ SSLC Result ಶೇ.100 ಸಾಧನೆ ಮಾಡಿದೆ. 13 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ, 76 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 51 ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಶಾಲೆಯ ಚಿತ್ಸುಖಿ ನಾಡಿಗ್ 621 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ಸಿದ್ಧಾರ್ಥ ಕಶ್ಯಪ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಶೇ.96.08 ಫಲಿತಾಂಶ ಪಡೆದುಕೊಂಡಿದ್ದಾರೆ.
ಸಂಸ್ಕೃತದಲ್ಲಿ 122, ಕನ್ನಡ ಮತ್ತು ಗಣಿತದಲ್ಲಿ ತಲಾ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಒಟ್ಟು 605 ಅಂಕ ಗಳಿಸಿದ್ದಾರೆ. ಸಿದ್ದಾರ್ಥ ಪೇಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕಿ ಡಾ.ಮೈತ್ರೇಯಿ ಹಾಗೂ ರಾಯಲ್ ಕಾಫಿಯ ಆದಿತ್ಯ ಪ್ರಸಾದ್ ಅವರ ಪುತ್ರ.
ಶಿವಮೊಗ್ಗದ ವಿಕಾಸ ಪ್ರೌಢಶಾಲೆ ವಿದ್ಯಾರ್ಥಿನಿ ಎ.ಎಸ್. ಸಿರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.90 ಅಂಕಗಳಿಸಿ ತೇರ್ಗಡೆಯಾಗಿದ್ದಾಳೆ. ಇವಳು ಶಿಕ್ಷಕಿ ನೇತ್ರಾ ನಾಗರಾಜ ಅವರ ಪುತ್ರಿಯಾಗಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















