ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಿನಿ ಒಲಿಂಪಿಕ್ಸ್ ಬಾಕ್ಸಿಂಗ್’ನಲ್ಲಿ ಜಿಲ್ಲಾ ಬಾಕ್ಸಿಂಗ್ ಸಂಸ್ಥೆಯ ಪರವಾಗಿ ಭಾಗವಹಿಸಿದ್ದ ಲಿಖಿತ್ ಕುಮಾರ್ ತೃತೀಯ ಬಹುಮಾನ ಪಡೆಯುವ ಮೂಲಕ ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ವಿನೋದ್ ಅವರು, ಕರ್ನಾಟಕ ಮಿನಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಶಿವಮೊಗ್ಗ ಜಿಲ್ಲಾ ಬಾಕ್ಸಿಂಗ್ ಸಂಸ್ಥೆಯ ಪರವಾಗಿ ಭಾಗವಹಿಸಿದ ಜೈನ್ ಪಬ್ಲಿಕ್ ಶಾಲೆಯ ಲಿಖಿತ್ ಕುಮಾರ್ 52-55 ತೂಕದ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲಾ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಿನಿ ಒಲಿಂಪಿಕ್ಸ್ ಬಾಕ್ಸಿಂಗ್ ವಿಭಾಗದಲ್ಲಿ ಬಹುಮಾನ ಪಡೆದ ಮೊದಲ ಕ್ರೀಡಾಪಟುವಾಗಿದ್ದು, ಈ ಕ್ರೀಡಾಪಟುವಿಗೆ ಹಾಗೂ ಅವರ ಪೋಷಕರಿಗೆ ಹಾಗೂ ಜೈನ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಗೆ ಜಿಲ್ಲಾ ಬಾಕ್ಸಿಂಗ್ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
Get in Touch With Us info@kalpa.news Whatsapp: 9481252093
Discussion about this post