ಬೆಂಗಳೂರು: ಈ ಬಾರಿಯ ಎಸ್’ಎಸ್’ಎಲ್’ಸಿ ಫಲಿತಾಂಶ ವಿಶಿಷ್ಟ ಹಾಗೂ ವಿಭಿನ್ನ ವಿಚಾರಗಳಿಗೆ ಸಾಕ್ಷಿಯಾಗಿದ್ದು, ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಪಡೆದಿದ್ದು, 11 ವಿದ್ಯಾರ್ಥಿಗಳು 624 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
ಇಂದು ಫಲಿತಾಂಶ ಪ್ರಕಟವಾಗಿದ್ದು, ಆನೇಕಲ್’ನ ಸೆಂಟ್ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ಕೊಲಬಾ ವಿಠೋಬಾ ಶಾನ್‌ಬಾಗ್ ಕಲ್ಬಕ್ಕರ್ ಹೈಸ್ಕೂಲ್’ನ ನಾಗಾಂಜಲಿ ನಾಯಕ್ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇನ್ನು, ಬೆಂಗಳೂರು ಉತ್ತರದ ಸೆಂಟ್ ಜಾನ್ ಇಂಗ್ಲಿಷ್ ಹೈಸ್ಕೂಲ್’ನ ಯು.ಎಸ್. ಭಾವನಾ, ಬೆಂಗಳೂರು ಉತ್ತರದ ಸೌಂದರ್ಯ ಹೈಸ್ಕೂಲ್’ನ ಆರ್. ಭಾವನಾ, ಬೆಂಗಳೂರು ಉತ್ತರದ ಲಿಟಲ್ ಲಿಲ್ಲಿ ಇಂಗ್ಲಿಷ್ ಹೈಸ್ಕೂಲ್’ನ ಸಾಯಿರಾಂ, ಬೆಂಗಳೂರು ದಕ್ಷಿಣದ ಸಮಾಜ ಸೇವಾ ಮಂಡಳಿ ಹೈಸ್ಕೂಲ್’ನ ಎಚ್.ವಿ. ಶಾಂಭವಿ, ತುಮಕೂರಿನ ಶ್ರೀ ಸಿದ್ಧಗಂಗಾ ಇಂಗ್ಲಿಷ್ ಮೀಡಿಯಂ ಸ್ಕೂಲ್’ನ ಸಿ. ಹರ್ಷಿತ್, ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್’ನ ಸಿಂಚನಾ ಲಕ್ಷ್ಮೀ, ಸುಳ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್’ನ ಕೆ.ಆರ್. ಕೃಪಾ, ಬಂಟ್ವಾಳದ ಶ್ರೀವೆಂಕಟರಮಣ ಸ್ವಾಮಿ ಇಂಗ್ಲಿಷ್ ಹೈಸ್ಕೂಲ್’ನ ಅನುಪಮಾ ಕಾಮತ್, ಬಂಟ್ವಾಳದ ವಿಠ್ಠಲ್ ಜೇಸೀಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್’ನ ಚಿನ್ಮಯ್, ಹಾಸನದ ವಿಜಯ ಹೈಸ್ಕೂಲ್’ನ ಪ್ರಗತಿ ಎಂ. ಗೌಡ ಹಾಗೂ ಬಿ. ಅಭಿನ್ ಅವರುಗಳು 624 ಅಂಕಗಳನ್ನು ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಶೇ.79 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.68 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಬರೆದ ಒಟ್ಟು 8.41 ಲಕ್ಷ ವಿದ್ಯಾರ್ಥಿಗಳಲ್ಲಿ 6,08,336 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2,99,587 ಬಾಲಕರು, 3,08,749 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆದಿದ್ದ ಎಸ್’ಎಸ್’ಎಲ್’ಸಿ ಪರೀಕ್ಷೆಗೆ 8,41,666 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು.
Discussion about this post