ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಾಗಲಕೋಟೆ: ಮುಧೋಳ್ ನಗರದಲ್ಲಿ 2015 ಸೆಪ್ಟೆಂಬರ್ 23ರಂದು ನಡೆದ ಗಣೇಶ ಉತ್ಸವದಲ್ಲಿ ಸಂಭವಿಸಿದ್ದ ಘಟನೆಯಲ್ಲಿ 110 ಜನರ ವಿರುದ್ಧ ದಾಖಲಾಗಿದ್ದ ಮೊಕದ್ದಮೆ ಗಳನ್ನು ಹಿಂಪಡೆದಿದ್ದಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರನ್ನು ಇಂದು ಮುಧೋಳ್’ನ ಜನತಾ ರಾಜಾ ಗಜಾನನ ಉತ್ಸವ ಸಮಿತಿ ಹಾಗೂ ಹಿಂದೂಪರ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಡಿಸಿಎಂ, ಅದೊಂದು ದುರ್ಘಟನೆಯಾಗಿದ್ದು, ಸಮಾಜದಲ್ಲಿ ಸಾಮರಸ್ಯದಿಂದರಬೇಕು. ಅಂದಿನ ಘಟನೆಯಲ್ಲಿ ಕಠಿಣ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು ಎಂದರು.
ಈ ಪ್ರಕರಣದಲ್ಲಿ 110 ಹಿಂದೂ-ಮುಸ್ಲಿಂ ಜನರ ಮೇಲೆ ದಾಖಲಾಗಿದ್ದ ಎಲ್ಲಾ ಮೊಕದ್ದಮೆಗಳನ್ನು ನಿರಂತರ ಪರಿಶ್ರಮದಿಂದ ಕಳೆದ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲಾಗಿದೆ. ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದ್ದು, ಎಲ್ಲರ ಬೆಂಬಲ ಸದಾ ಇರಬೇಕು ಎಂದು ಅವರು ತಿಳಿಸಿದರು.
ಸಂದರ್ಭದಲ್ಲಿ ಗುರುರಾಜ್ ಕಟ್ಟಿ, ಬಂಡೂಘಾಟಿಗೆ, ಆರ.ಟಿ. ಪಾಟೀಲ್, ಪ್ರಕಾಶ್ ವಸ್ತ್ರದ, ಶ್ರೀಶೈಲಗೌಡ ಪಾಟೀಲ್, ಕುಮಾರ್ ಹುಲಕುಂದ್, ಶಿವಾನಂದ ಬಡಿಗೇರ್, ಸಂಘಟನೆಗಳ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093














