ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ಎರಡನೆಯ ಅಲೆಯ ಆತಂಕದ ನಡುವೆಯೇ ಬೆಂಗಳೂರಿನ ಮೂವರಲ್ಲಿ ಬ್ರಿಟನ್ ವೈರಸ್ ದೃಢಪಟ್ಟಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಸುಧಾಕರ್, ದೇಶದಲ್ಲಿ ಆರು ಜನರಿಗೆ ಬ್ರಿಟನ್ ವೈರಸ್ ತಗುಲಿದ್ದು, ಇದರಲ್ಲಿ ಬೆಂಗಳೂರಿನ ಮೂವರಲ್ಲಿ ಸೋಂಕು ದೃಢಪಟ್ಟಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಬ್ರಿಟನ್ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ತಾಯಿ ಹಾಗೂ ಮಗುವಿನಲ್ಲಿ ವೈರಸ್ ದೃಢಪಟ್ಟಿದ್ದು, ಎಲ್ಲರನ್ನೂ ಐಸೋಲೇಶನ್’ನಲ್ಲಿ ಇರಿಸಲಾಗಿದೆ. ಅಲ್ಲದೇ ಬ್ರಿಟನ್’ನಿಂದ ವಾಪಾಸ್ ಬಂದು ನಾಪತ್ತೆಯಾಗಿರುವವರಿಗಾಗಿ ಈಗಾಗಲೇ ಹುಡುಕಾಟ ಆರಂಭಿಸಲಾಗಿದ್ದು, ವಿಮಾನಯಾನ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಮಾಹಿತಿ ಪಡೆಯಲಾಗಿದೆ ಎಂದರು.

ಇನ್ನು, ಹೈದರಾಬಾದ್’ನ ಇಬ್ಬರು ಹಾಗೂ ಪೂನಾದ ಒಬ್ಬರಲ್ಲಿ ಬ್ರಿಟನ್ ವೈರಸ್ ದೃಢಪಟ್ಟಿದ್ದು, ಇಂದು ಸಂಜೆ ಐಸಿಎಂಆರ್ ವತಿಯಿಂದ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















