ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಪದ್ಮವಿಭೂಷಣ, ಕರ್ನಾಟಕ ರತ್ನ ಪುರಸ್ಕೃತ ಪೂಜನೀಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರತಿಷ್ಠಿತ ಏಷ್ಯಾದ ಶ್ರೇಷ್ಠ ನಾಯಕ ಪ್ರಶಸ್ತಿಗೆ ಬಾಜನರಾಗಿದ್ದಾರೆ.
Its a matter of great pride for us as our Hon’ble Chancellor Shri D Veerendra Heggadeji has been recognized by AsiaOne Magazine as Asia’s Greatest Leaders 2020-21 – Pride of Asia. https://t.co/hopdGXfFf5
— SHRI DHARMASTHALA MANJUNATHESHWARA UNIVERSITY (@SDMUniversity) June 2, 2021
2020-21ನೆಯ ಸಾಲಿನ ಯುಆರ್’ಎಸ್ ಏಷ್ಯಾ ಒನ್ ಸಂಸ್ಥೆಯ 6ನೆಯ ಆವೃತ್ತಿಯ ಪ್ರತಿಷ್ಠಿತ ಏಷ್ಯಾದ ಶ್ರೇಷ್ಠ ನಾಯಕ ಎಂಬ ಪ್ರಶಸ್ತಿ ಹೆಗ್ಗಡೆ ಅವರಿಗೆ ಸಂದಿರುವುದು ಇಡಿಯ ಕರ್ನಾಟಕದ ಹೆಮ್ಮೆಯನ್ನು ಮತ್ತಷ್ಟು ವೃದ್ಧಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಕೋಟ್ಯಂತರ ಭಕ್ತರ ಪಾಲಿಗೆ ಪ್ರತ್ಯಕ್ಷ ದೇವರಂತೆ ಕಂಗೊಳಿಸುತ್ತಿರುವ ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಲಕ್ಷಾಂತರ ಮಂದಿಯ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದು, ಹಲವಾರು ಸಾಮಾಜಿಕ ಯೋಜನೆಗಳ ಮೂಲಕ ವಿಶ್ವವಿಖ್ಯಾತಿ ಗಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post