ನವದೆಹಲಿ: ಸಿಲಿಂಡರ್ ಬಳಕೆ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರ, ಗೃಹಬಳಕೆ ಸಿಲಿಂಡರ್ ಮೇಲೆ 5.91 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಮೇಲೆ 120.50 ರೂ. ದರವನ್ನು ಇಳಿಕೆ ಮಾಡಿದೆ.
ಈ ಕುರಿತಂತೆ ಇಂದು ಘೋಷಣೆ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರ್ 494.99(ರಾಷ್ಟ್ರ
ರಾಜಧಾನಿ ನವದೆಹಲಿಯಲ್ಲಿ) ರೂಪಾಯಿಗಳಾಗಿದ್ದು, ಹಿಂದಿನ ದರ 500.90 ರೂ.ಗಳಾಗಿತ್ತು ಎಂದು ಹೇಳಿಕೆ ನೀಡಿದೆ.
ಹೀಗೆ ನೇರವಾಗಿ ದರ ಕಡಿತ ಮಾಡುತ್ತಿರುವುದು ಇದು ಒಂದು ತಿಂಗಳ ಅವಧಿಯಲ್ಲಿ ಎರಡನೆಯ ಬಾರಿಯಾಗಿದೆ. ಎಲ್‌ಪಿಜಿ ದರವನ್ನು ಡಿ.1ರಂದು 6.52 ರೂ.ಗಳಷ್ಟನ್ನು ಕಡಿತ ಮಾಡಲಾಗಿತ್ತು.
Discussion about this post