ಕಲ್ಪ ಮೀಡಿಯಾ ಹೌಸ್ | ಸುಳ್ಯ |
ಇಲ್ಲಿನ ಚೇರು ಎಂಬಲ್ಲಿ ಹಳ್ಳವೊಂದರಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡು, ಆನಂತರ ಕಾಡಿಗೆ ತೆರಳಿದ್ದ ಒಂಟಿ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುಬ್ರಹ್ಮಣ್ಯದ ಕೆಂಜಾಳ ಪರಿಸರದಲ್ಲಿ ಸಂಚಾರ ಮಾಡುತ್ತಿದ್ದ ಕಾಡನೆ, ಚೇರು ಎಂಬಲ್ಲಿನ ಹಳ್ಳವೊಂದರಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿಶ್ಯಕ್ತಗೊಂಡಿದ್ದ ಆನೆ ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ನಿಂತಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಪಶುವೈದ್ಯಾಧಿಕಾರಿಗಳನ್ನು ಕರೆಯಿಸಿದ್ದು, ಆನೆಯನ್ನು ಪರೀಕ್ಷಿಸಿದ ವೈದ್ಯರು, ಅದಕ್ಕೆ ಸುಮಾರು 50 ವರ್ಷ ವಯಸ್ಸಾಗಿದ್ದು, ಬಾಯಿಯಲ್ಲಿ ಗಾಯವಾಗಿದೆ. ಈ ಕಾರಣದಿಂದಾಗಿ ಮೇಲೆಕ್ಕೆ ಹತ್ತಲು ಕಷ್ಟವಾಗಿದೆ ಎಂದಿದ್ದರು.
Also read: ಪತಿಯನ್ನು ಲಾಡ್ಜ್ ನಲ್ಲೇ ಲಾಕ್ ಮಾಡಿ ಪತ್ನಿ ಎಸ್ಕೇಪ್; ಶಿವಮೊಗ್ಗದಲ್ಲೊಂದು ವಿಲಕ್ಷಣ ಘಟನೆ
ಆನೆ ಬಹಳಷ್ಟು ನಿಶ್ಯಕ್ತಗೊಂಡಿದ್ದ ಕಾರಣ ಅರವಳಿಕೆ ನೀಡಿ, ಚಿಕಿತ್ಸೆ ನೀಡಿದರೆ ಅದಕ್ಕೆ ತೊಂದರೆಯಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು.
ಆದರೆ, ಆನೆ ಸಂಜೆ ವೇಳೆಗೆ ಮೇಲೆ ಬಂದು ಕಾಡಿನೊಳಕ್ಕೆ ತೆರಳಿತ್ತು. ಆದರೆ, ಇಂದು ಮುಂಜಾನೆ ಬಗ್ಪುಣಿಯಲ್ಲಿ ಅದರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post