ಶಿವಮೊಗ್ಗ: ಅಭಿನಯ, ನೃತ್ಯ ಸೇರಿದಂತೆ ಹಲವು ಕಲಾ ವಿಭಾಗದಲ್ಲಿ ತನ್ನ ವೈಶಿಷ್ಠ್ಯತೆಯ ಮೂಲಕವೇ ಖ್ಯಾತಿಗಳಿಸಿರುವ ಮಲೆನಾಡಿನ ಕಲಾತರಂಗ ತಂಡ ಪ್ರತಿಬಾರಿಯಂತೆ ಈ ಬಾರಿಯೂ ಸಹ ವಿಭಿನ್ನ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.
ಎಪ್ರಿಲ್ 10ರಿಂದ ಮೇ 8ರವರೆಗೂ ಮಕ್ಕಳ ಬೇಸಿಗೆ ರಂಗ ಶಿಬಿರಗಳು ನಡೆಯಲಿದ್ದು, ಮಕ್ಕಳಿಗೆ ಮಜಾ ಮೋಜಿನೊಂದಿಗೆ ಅಪರೂಪದ ಕಲೆಗಳನ್ನು ಕಲಿಸಲು ಸಿದ್ದತೆ ಮಾಡಿಕೊಂಡಿದೆ.
ಅಭಿನಯ, ನೃತ್ಯ, ಚಿತ್ರಕಲೆ, ಕರಕುಶಲ ಕಲೆ, ಮುಖವಾಡ ತಯಾರಿಕೆ, ಮಣ್ಣಿನ ಮಾದರಿ, ಕಾಯಿರ್ ಆರ್ಟ್, ರಂಗ ಗೀತೆಗಳು, ನೃತ್ಯ, ಒಂದು ದಿನದ ಪ್ರವಾಸ, ಫೈರ್ ಕ್ಯಾಂಪ್ ಇತ್ಯಾದಿ ಮೋಜಿನ ತರಗತಿಗಳೊಂದಿಗೆ ಇನ್ನೂ ವಿಸ್ಮಯಕಾರಿ ಕಲಿಕಾ ಪಯಣಯವನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ.
ಶಿಬಿರದ ವಿಶೇಷತೆಗಳು:
- ಅನುಭವಿ ಮತ್ತು ನುರಿತ ಕಲಾವಿದರಿಂದ ತರಗತಿಗಳು
- ನೀನಾಸಮ್ ಪದವೀಧರರಿಂದ ನಾಟಕ ತರಬೇತಿ
- ಸಿನೆಮಾ, ರಿಯಾಲಿಟಿ ಶೋ ತಾರೆಗಳಿಂದ ವಿಶೇಷ ತರಗತಿಗಳು
- ಅನುಭವಿ ಯುವಕ- ಯುವತಿಯರ ತಂಡ
- ಇನ್ನೂ ಅನೇಕ ಆಕರ್ಷಣೆಗಳು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ
ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಅಗತ್ಯವಾಗಿದ್ದು, ಆಸಕ್ತರು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಿ
ಶ್ರೀಹರ್ಷ ನೀನಾಸಮ್-9538313322
ನಾಗರಾಜ್ -9538312000
ವಿಶಾಲ್ ನೀನಾಸಮ್ -9686098073
ಕಚೇರಿ – 8277601801







Discussion about this post