ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಾಲಪ್ಪ ಸರ್ಕಲ್’ನಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಸ್ವಾಬ್ ಟೆಸ್ಟ್’ನಲ್ಲಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಾಖೆಯನ್ನು ಎರಡು ದಿನ ಮುಚ್ಚಲಾಗಿದೆ.
ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಇಂದು ಸ್ವಾಬ್ ಟೆಸ್ಟ್’ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೋವಿಡ್19 ಪರೀಕ್ಷೆಗೆ ಅವರನ್ನು ಒಳಪಡಿಸಲಾಗಿದೆ.

ಇಂದು ಬ್ಯಾಂಕನ್ನು ಸಂಫೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮಂಗಳವರ ಹಾಗೂ ಬುಧವಾರ ಬ್ಯಾಂಕ್ ಶಾಖೆ ಬಂದ್ ಆಗಿರಲಿದ್ದು, ಗುರುವಾರದಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಬ್ಯಾಂಕ್’ನ ಎಲ್ಲ ಸಿಬ್ಬಂದಿಗಳು ಎರಡು ದಿನ ಹೋಂ ಕ್ವಾರಂಟೈನ್’ಲಿ ಇರಲಿದ್ದಾರೆ ಎಂದು ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
Get In Touch With Us info@kalpa.news Whatsapp: 9481252093

















