ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (SWR) ಹಲವು ರೈಲುಗಳ ನಿಲುಗಡೆ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಇದರ ಭಾಗವಾಗಿ ಅಕ್ಟೋಬರ್ 15, 2026ರಿಂದ ಒಟ್ಟಪಾಲಂ ನಿಲ್ದಾಣದಲ್ಲಿ ಕೆಎಸ್ಆರ್ ಬೆಂಗಳೂರು–ಎರ್ನಾಕುಲಂ–ಕೆಎಸ್ಆರ್ ಬೆಂಗಳೂರು ದೈನಂದಿನ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿಗೆ (Express Train) ಪ್ರಾಯೋಗಿಕ ನಿಲುಗಡೆ ಕಲ್ಪಿಸಲಾಗಿದೆ.
ಒಟ್ಟಪಾಲಂನಲ್ಲಿ ಇಂಟರ್ಸಿಟಿ ಎಕ್ಸ್ಪ್ರೆಸ್ಗೆ ನಿಲುಗಡೆ
ರೈಲು ಸಂಖ್ಯೆ 16377/16378 ಕೆಎಸ್ಆರ್ ಬೆಂಗಳೂರು–ಎರ್ನಾಕುಲಂ–ಕೆಎಸ್ಆರ್ ಬೆಂಗಳೂರು ದೈನಂದಿನ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲುಗಳಿಗೆ ಒಟ್ಟಪಾಲಂ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ.
ಅದರಂತೆ, ರೈಲು ಸಂಖ್ಯೆ 16377 ಕೆಎಸ್ಆರ್ ಬೆಂಗಳೂರು–ಎರ್ನಾಕುಲಂ ಇಂಟರ್ಸಿಟಿ ಎಕ್ಸ್ಪ್ರೆಸ್ ಒಟ್ಟಪಾಲಂ ನಿಲ್ದಾಣಕ್ಕೆ ಮಧ್ಯಾಹ್ನ 2:30ಕ್ಕೆ ಆಗಮಿಸಿ, 2:31ಕ್ಕೆ ನಿರ್ಗಮಿಸಲಿದೆ.
ಇದೇ ರೀತಿ, ರೈಲು ಸಂಖ್ಯೆ 16378 ಎರ್ನಾಕುಲಂ–ಕೆಎಸ್ಆರ್ ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ಒಟ್ಟಪಾಲಂ ನಿಲ್ದಾಣಕ್ಕೆ ಬೆಳಗ್ಗೆ 10:59ಕ್ಕೆ ಆಗಮಿಸಿ, 11:00ಕ್ಕೆ ನಿರ್ಗಮಿಸಲಿದೆ.
ಈ ನಿಲುಗಡೆಯಿಂದ ಒಟ್ಟಪಾಲಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಸಂಚರಿಸಲು ಹೆಚ್ಚಿನ ಅನುಕೂಲವಾಗಲಿದೆ.
SWR : ಯಶವಂತಪುರದಲ್ಲಿ ಪಂಚಗಂಗಾ ಎಕ್ಸ್ಪ್ರೆಸ್ ವೇಳಾಪಟ್ಟಿ ಬದಲಾವಣೆ
ಇದರೊಂದಿಗೆ ಯಶವಂತಪುರ ನಿಲ್ದಾಣದಲ್ಲಿ ಸಂಚರಿಸುವ ರೈಲು ಸಂಖ್ಯೆ 16596 ಕಾರವಾರ–ಕೆಎಸ್ಆರ್ ಬೆಂಗಳೂರು ಪಂಚಗಂಗಾ ದೈನಂದಿನ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲೂ ಪರಿಷ್ಕರಣೆ ಮಾಡಲಾಗಿದೆ.
ತಮ್ಮ ಮೂಲ ನಿಲ್ದಾಣದಿಂದ ಅಕ್ಟೋಬರ್ 20, 2026ರಿಂದ ಆರಂಭವಾಗುವ ಪ್ರಯಾಣದಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ರೈಲು ಸಂಖ್ಯೆ 16596 ಯಶವಂತಪುರ ನಿಲ್ದಾಣಕ್ಕೆ ಈ ಹಿಂದೆ 06:23ಕ್ಕೆ ಆಗಮಿಸಿ 06:25ಕ್ಕೆ ನಿರ್ಗಮಿಸುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಇನ್ನು ಮುಂದೆ 06:48ಕ್ಕೆ ಆಗಮಿಸಿ 06:50ಕ್ಕೆ ನಿರ್ಗಮಿಸಲಿದೆ.
ಗೋಲಗುಂಬಜ್ ಎಕ್ಸ್ಪ್ರೆಸ್ ಸಮಯದಲ್ಲೂ ಬದಲಾವಣೆ
ರೈಲು ಸಂಖ್ಯೆ 16536 ಪಂಢರಪುರ–ಮೈಸೂರು ಗೋಲಗುಂಬಜ್ ದೈನಂದಿನ ಎಕ್ಸ್ಪ್ರೆಸ್ ರೈಲಿನ ಯಶವಂತಪುರ ನಿಲ್ದಾಣದ ವೇಳಾಪಟ್ಟಿಯನ್ನೂ ಪರಿಷ್ಕರಿಸಲಾಗಿದೆ.
ಹೊಸ ವೇಳಾಪಟ್ಟಿಯಂತೆ ಈ ರೈಲು ಯಶವಂತಪುರಕ್ಕೆ 07:13ಕ್ಕೆ ಆಗಮಿಸಿ 07:15ಕ್ಕೆ ನಿರ್ಗಮಿಸಲಿದೆ. ಈ ಹಿಂದೆ ರೈಲು 06:48ಕ್ಕೆ ಆಗಮಿಸಿ 06:50ಕ್ಕೆ ನಿರ್ಗಮಿಸುತ್ತಿತ್ತು.
Also Read>> ವೆಂಕಟೇಶ ಎಸ್. ಸಂಪ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ; ಅ.25ರಂದು ಗೋವಾದಲ್ಲಿ ಪ್ರದಾನ
ಪಂಚಗಂಗಾ ಹಾಗೂ ಗೋಲಗುಂಬಜ್ ಎಕ್ಸ್ಪ್ರೆಸ್ ರೈಲುಗಳ ಪರಿಷ್ಕೃತ ವೇಳಾಪಟ್ಟಿ ಅಕ್ಟೋಬರ್ 20, 2026ರಿಂದ ಜಾರಿಗೆ ಬರಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಪರಿಷ್ಕೃತ ರೈಲು ವೇಳಾಪಟ್ಟಿಯನ್ನು ಗಮನಿಸುವಂತೆ ರೈಲ್ವೆ ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











