ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾವೇರಿ: ನವದೆಹಲಿಯ ತಬ್ಲಿಘಿ ಜಮಾತ್’ಗೆ ಹೋಗಿ ಬಂದಿದ್ದ ಬಿಜಾಪುರದ ಇಬ್ಬರು ಆಡೂರು ಗ್ರಾಮದ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿಬಂದ ಪರಿಣಾಮ 21 ಮಂದಿಯನ್ನು ಕ್ವಾರಂಟೈನ್’ಗೆ ರವಾನಿಸಲಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರ ಗ್ರಾಮದ 21 ಮಂದಿಯನ್ನು ಕ್ವಾರಂಟೈನ್’ಗೆ ಕಳುಹಿಸಲಾಗಿದ್ದು, ಗ್ರಾಮದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಬಿಜಾಪುರದ 306 ಮತ್ತು 308 ಕೊರೋನಾ ಪೇಷಂಟ್ ಮಹಮ್ಮದ್ ಇಸಾಕ್ ಇಂಡಿಕಾನ್ (306)ಮತ್ತು ಇಸ್ಮಾಯಿಲ್ ಇಂಡಿಕಾರ (308) ಎಂಬುವರು ಡೆಲ್ಲಿಯ ತಬ್ಲಿಘಿ ಜಮಾತ್ ಗೆ ಹೋಗಿ ಬಂದವರಾಗಿರುತ್ತಾರೆ.
ಆಡೂರ ಪೋಲಿಸ್ ಠಾಣಾ ಪಿಎಸ್’ಐ ಆಂಜನೇಯ ಅವರು 21 ಜನರನ್ನು ಇದೀಗ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.
Get in Touch With Us info@kalpa.news Whatsapp: 9481252093
















