ಕಲ್ಪ ಮೀಡಿಯಾ ಹೌಸ್ | ತೈಪೆ, ತೈವಾನ್ |
ತೈವಾನ್ ದ್ವೀಪದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ #Earthquake in Taiwan ಸಂಭವಿಸಿದ್ದು, ಘಟನೆಯಲ್ಲಿ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
#WATCH | An earthquake with a magnitude of 7.2 hit Taipei, the capital of Taiwan.
Visuals from Beibin Street, Hualien City, Hualien County, eastern Taiwan.
(Source: Focus Taiwan) pic.twitter.com/G8CaqLIgXf
— ANI (@ANI) April 3, 2024
ತೈವಾನ್‌ನ ಭೂಕಂಪ ಮಾನಿಟರಿಂಗ್ ಏಜೆನ್ಸಿ ರಿಕ್ಟರ್ ಮಾಪಕದಲ್ಲಿ 7.2ರ ತೀವ್ರತೆ ದಾಖಲಾಗಿದ್ದು, ಭೂಕಂಪದಿಂದ ಬೃಹತ್ ಕಟ್ಟಡಗಳು ವಾಲುತ್ತಿರುವುದು ಹಾಗೂ ಹಲವು ಕಟ್ಟಡಗಳು ನೆಲಸಮವಾಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

Also read: ಗೊಂದಲದಲ್ಲಿರುವವರಿಗೆ ನಾಳೆ ಬೆಳಿಗ್ಗೆ ಎಲ್ಲಾ ಗೊತ್ತಾಗುತ್ತದೆ: ಮಾಜಿ ಡಿಸಿಎಂ ಈಶ್ವರಪ್ಪ
ಭೂಕಂಪ ಸಂಭವಿಸಿದ 15 ನಿಮಿಷಗಳ ನಂತರ ಯೋನಾಗುನಿ ದ್ವೀಪದ ಕರಾವಳಿಯಲ್ಲಿ 30 ಸೆಂಟಿಮೀಟರ್ (ಸುಮಾರು 1 ಅಡಿ) ಸುನಾಮಿ ಅಲೆ ಪತ್ತೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಮಿಯಾಕೊ ಮತ್ತು ಯೆಯಾಮಾ ದ್ವೀಪಗಳ ತೀರಕ್ಕೂ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು JAMA ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post