ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಜನತೆಗೆ ನೀಡಿದ ಭರವಸೆಯ ಮೇರೆಗೆ ಸುಸಜ್ಜಿತವಾದ ರಸ್ತೆ ನಿರ್ಮಾಣಕ್ಕಾಗಿ ವಿಶೇಷ ಅನುದಾನದಡಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಲ್ಲಿ ಗುತ್ತಿಗೆದಾರರು ಬದ್ಧರಾಗಬೇಕಿದೆ ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಸೂಚಿಸಿದರು.
ತಾಲೂಕಿನ ತೊಂಡೇಬಾವಿಯಲ್ಲಿ ಡಾಂಬರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಅವರು ಮಾತನಾಡಿದರು.
ತೊಂಡೇಬಾವಿ ಗ್ರಾಮದಿಂದ ಹುಸೆನ್ ಪುರದವರೆಗಿನ ಸುಮಾರು 1.25 ಕಿಮೀ ರಸ್ತೆಯು ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ನಾಗರಿಕರ ಒತ್ತಾಯದ ಮೇರೆಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 1.45 ಕೋಟಿ ರೂ.ಗಳ ವೆಚ್ಚದಲ್ಲಿ 5.5 ಮೀಟರ್ ಅಗಲದ ಡಾಂಬರು ರಸ್ತೆ ನಿರ್ಮಿಸಲಾಗುವುದು. ಇದರಿಂದ ಜನತೆ ನೆಮ್ಮದಿಯಿಂದ ಸಂಚರಿಸಲು ಸಾಧ್ಯವಾಗುತ್ತದೆ ಎಂದರು.
ಮುಖಂಡ ಬಿ.ಪಿ. ಅಶ್ವತ್ಥ ನಾರಾಯಣಗೌಡ ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಅವಶ್ಯಕವಿರುವ ಕುಡಿಯುವ ನೀರು, ಚರಂನ ಮತ್ತು ಸುಸಜ್ಜಿತವಾದ ರಸ್ತೆಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ಹಿತ ಬಯಸಬೇಕಾಗಿದೆ. ಈ ಕಾರ್ಯವನ್ನು ಶಾಸಕರು ಬದ್ಧತೆಯಿಂದ ಜನರ ವಿಶ್ವಾಸ ಮತ್ತು ನಂಬಿಕೆಗೆ ಅರ್ಹರಾಗಿ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿನ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶ್ರಮಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಎಇಇ ಚಂದ್ರಶೇಖರ್, ಪಿಡಬ್ಲ್ಯೂಡಿ ಇಂಜಿನಿಯರ್ ನಾರಾಯಣಪ್ಪ, ಮುಖಂಡರಾದ ಗಿರೀಶ್, ಕೆ.ಎನ್. ಶಿವಾರೆಡ್ಡಿ, ನಾಗಾರ್ಜುನ, ಗಂಗಣ್ಣಾಚಾರಿ, ಶಂಕರರೆಡ್ಡಿ, ಪ್ರಭು, ಮುಷೀರ್, ಮಲ್ಲಿಕಾರ್ಜುನಪ್ಪ, ಆರ್.ಎನ್. ವೆಂಕಟೇಶರೆಡ್ಡಿ, ನಾಗರಾಜು, ಬಿ.ಆರ್. ಮಹದೇವ್, ಲಿಂಗಪ್ಪ, ರಫೀಕ್, ಶ್ರೀನಿವಾಸರೆಡ್ಡಿ, ಕೊಂಡಾರೆಡ್ಡಿ, ಶ್ರೀಕುಮಾರ್, ಯತೀಶ್, ಗುತ್ತಿಗೆದಾರ ಚನ್ನಕೇಶವ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post