ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ತಮಿಳಿನ ಖ್ಯಾತ ನಟ ಹಾಗೂ ನಿರ್ಮಾಪಕ ವಿಶಾಲ್ #ActorVishal ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಚೆನ್ನೈನ ಪ್ರತಿಷ್ಠಿತ ಅಪೋಲೋ ಆಸ್ಪತ್ರೆಗೆ ವಿಶಾಲ್ ಅವರನ್ನು ದಾಖಲಿಸಲಾಗಿದ್ದು, ತಜ್ಞರ ತಂಡ ಚಿಕಿತ್ಸೆ ನೀಡುತ್ತಿದೆ.
Also Read>> ಹೊಸನಗರ | 60 ಅಡಿ ಪ್ರಪಾತಕ್ಕೆ ಉರುಳಿದ ಬಸ್ | ಘಟನೆ ಹೇಗಾಯ್ತು? ಪ್ರಯಾಣಿಕರು ಹೇಗಿದ್ದಾರೆ?
ಇತ್ತೀಚೆಗೆ ತಮ್ಮ ಮದಗಜರಾಜ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶಾಲ್ ಅವರು ಮೈಕ್ ಹಿಡಿದ ವೇಳೆ ಕೈಗಳು ನಡುಗಿದ್ದು, ಮಾತುಗಳು ಸಹ ತೊದಲು ಉಂಟಾಗಿತ್ತು. ಅಲ್ಲದೇ ತೀವ್ರ ಅಸ್ವಸ್ಥವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ವಿಶಾಲ್ ಅವರಿಗೆ ಏನೋ ಆಗಿದೆ ಎಂಬುದನ್ನು ಸಾಬೀತು ಪಡಿಸಿತ್ತು. ಅಲ್ಲದೆ ವಿಶಾಲ್ ಅವರ ಅಭಿಮಾನಿಗಳೂ ಕೂಡ ಅವರ ಆರೋಗ್ಯದ ಕುರಿತು ಆತಂಕಕ್ಕೀಡಾಗಿದ್ದರು.
ಇನ್ನು ನಟ ವಿಶಾಲ್ ಅವರು ಅತಿಯಾದ ಜ್ವರ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅವರನ್ನು ಇದೀಗ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ವಿಶಾಲ್’ಗೆ ವೈರಲ್ ಜ್ವರ ಇರುವ ಕುರಿತು ಸ್ಪಷ್ಟನೆ ನೀಡಿದ್ದು ಇದೇ ಕಾರಣಕ್ಕೆ ಅವರು ತೀವ್ರ ನಿಶ್ಯಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ಕೂಡ ನಟ ವಿಶಾಲ್ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ವಿಶಾಲ್ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಕೆಲವು ದಿನಗಳವರೆಗೆ ಸಂಪೂರ್ಣ ಬೆಡ್ ರೆಸ್ಟ್ ಅಗತ್ಯವಿದೆ ಎಂದು ದೃಢಪಡಿಸಿದ್ದಾರೆ. ಇದಲ್ಲದೆ ವಿಶಾಲ್ ಕೆಲವು ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ವರದಿ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post