ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಮ್ಮ ಮುಂದಿನ ಚಿತ್ರ ದಳಪತಿ-64 ಚಿತ್ರೀಕರಣಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರು ಜೈಲಿನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಜಯ್ ಅವರ ದಳಪತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಿ, ವಿಜಯ್ ಹಾಗೂ ತಂಡ ಈಗ ಶಿವಮೊಗ್ಗದ ಕಡೆ ಹೊರಟಿದೆ.
ಚಿತ್ರೀಕರಣಕ್ಕಾಗಿ ಜಿಲ್ಲಾಡಳಿತದಿಂದ ಚಿತ್ರತಂಡ ಅನುಮತಿ ಪಡೆದುಕೊಂಡಿದ್ದು, ಡಿಸೆಂಬರ್ 1ರಿಂದ ಜನವರಿ 18ರ ವರೆಗೆ ಚಿತ್ರೀಕರಣ ನಡೆಯಲಿದೆ. ವಿಜಯ್ ಜೊತೆ ವಿಜಯ್ ಸೇತುಪತಿ ಕೂಡ ಪಾಲ್ಗೊಳ್ಳಲಿದ್ದಾರೆ.
ಚಿತ್ರೀಕರಣಕ್ಕೆ ಶಿವಮೊಗ್ಗ ಜೈಲೇ ಆಯ್ಕೆ ಯಾಕೆ?
ಶಿವಮೊಗ್ಗದ ಮಲವಗೊಪ್ಪದ ಬಳಿಯಲ್ಲಿರುವ ಬೃಹತ್ ಜೈಲು ರಾಜ್ಯ ಮಾತ್ರವಲ್ಲ ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿಶಿಷ್ಠವಾದುದಾಗಿದೆ. ಕೊರಿಯನ್ ಮಾದರಿಯಲ್ಲಿ ಈ ಜೈಲನ್ನು ನಿರ್ಮಾಣ ಮಾಡಲಾಗಿದ್ದು, ನಮ್ಮ ರಾಜ್ಯದ ಮಟ್ಟಿಗೆ ವಿಶೇಷ ಕಾರಾಗೃಹವಾಗಿದೆ.
ಈಗಾಗಲೇ ಇಲ್ಲಿ ಕೆಲವು ಚಿತ್ರಗಳ ಶೂಟಿಂಗ್ ನಡೆದಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಈ ಜೈಲನ್ನು ಬಳಸಿಕೊಂಡು ಸಾಹಸ ದೃಶ್ಯಗಳನ್ನು ಇಲ್ಲಿಯೇ ಚಿತ್ರೀಕರಿಸಿಕೊಳ್ಳಲಾಗಿತ್ತು.
Get in Touch With Us info@kalpa.news Whatsapp: 9481252093
Discussion about this post