ಕಲ್ಪ ಮೀಡಿಯಾ ಹೌಸ್ | ತಮಿಳುನಾಡು |
ದಕ್ಷಿಣ ತಮಿಳುನಾಡಿನ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, Heavy rain in Tamilnadu ರಾಜ್ಯದ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳಲ್ಲಿ ಭತ್ತದ ಗದ್ದೆಗಳು, ರಸ್ತೆಗಳು ಮತ್ತು ಸೇತುವೆಗಳು ನೀರಿನಲ್ಲಿ ಜಲಾವೃತವಾಗಿವೆ.
ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆಯಾಗುತ್ತಿರುವ ಪರಿಣಾಮ ಅನೇಕ ವಸತಿ ಪ್ರದೇಶಗಳಿಗೂ ನೀರು ನುಗ್ಗಿದ್ದು, ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರವಾಹದಿಂದಾಗಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೇವೆಗಳನ್ನು ಕೋರಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ತಿಳಿಸಿದರು.
ರಕ್ಷಣಾ ಮತ್ತು ಪರಿಹಾರ ಉಪಕ್ರಮಗಳಿಗಾಗಿ 84 ದೋಣಿಗಳನ್ನು ನಿಯೋಜಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರ ಇಂದು ಸಾರ್ವಜನಿಕ ರಜೆ ಘೋಷಿಸಿದೆ. ತೂತುಕುಡಿ ಮತ್ತು ಹತ್ತಿರದ ಪಟ್ಟಣಗಳಾದ ಶ್ರೀವೈಕುಂಡಂ ಮತ್ತು ಕಾಯಲ್‌ಪಟ್ಟಿಣಂನಂತಹ ಪ್ರದೇಶಗಳಿಗೆ ಹೆಚ್ಚುವರಿ ದೋಣಿಗಳನ್ನು ಸಜ್ಜುಗೊಳಿಸಲಾಗಿದ್ದು, ಸುಮಾರು 7,500 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 84 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. 62 ಲಕ್ಷ ಜನರಿಗೆ ಎಸ್ ಎಂಎಸ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಲಾಗಿದೆ.
Also read: ರಸಪ್ರಶ್ನೆ ಕಾರ್ಯಕ್ರಮಗಳು ಭಾಷೆಯ ಸಮಗ್ರ ತಿಳಿವಳಿಕೆಗೆ ಸಹಕಾರಿ: ಪ್ರೊ. ಸುಂದರರಾಜ್ ಅಭಿಪ್ರಾಯ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















