ಕಲ್ಪ ಮೀಡಿಯಾ ಹೌಸ್ | ಪಟಿಯಾಲಾ |
ತನ್ನ ಜನ್ಮದಿನದ ಸಂಭ್ರಮಕ್ಕಾಗಿ ಆನ್ಲೈನ್’ನಲ್ಲಿ ಆರ್ಡರ್ #OnlineOrder ಮಾಡಿ ತರಿಸಿದ್ದ ಕೇಕ್ #Cake ತಿಂದು 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಪಂಜಾಬ್’ನಲ್ಲಿ ನಡೆದಿದೆ.
ಇಲ್ಲಿನ ಪಟಿಯಾಲಾದಲ್ಲಿ ಘಟನೆ ನಡೆದಿದ್ದು, ಕೇಕ್ ತಿಂದ ಬಾಲಕಿ ಸಾವನ್ನಪ್ಪಿದ್ದು, ಆಕೆ ಕುಟುಂಬದ ನಾಲ್ವರು ಅಸ್ವಸ್ಥಗೊಂಡಿದ್ದಾರೆ.
ಘಟನೆ ಹಿನ್ನೆಲೆ
ಪಟಿಯಾಲಾದ ಅಮನ್ ನಗರದ ನಿವಾಸಿ ಕಾಜಲ್ ಎನ್ನುವವರು ತಮ್ಮ 10 ವರ್ಷದ ಪುತ್ರಿ ಮಾನ್ವಿಯ ಜನ್ಮದಿನಕ್ಕಾಗಿ #Birthday ಆನ್ಲೈನ್’ನಲ್ಲಿ ಕೇಕ್ ಆರ್ಡರ್ ಮಾಡಿದ್ದರು.
ಮಾರ್ಚ್ 24ರಂದು ಸಂಜೆ 6 ಗಂಟೆಗೆ ಆರ್ಡರ್ ಮಾಡಿದ್ದ ಕೇಕ್ ಸಂಜೆ 6.30ಕ್ಕೆ ಮನೆಗೆ ಬಂದಿದೆ. ರಾತ್ರಿ 7.15ರ ವೇಳೆಗೆ ಕೇಕ್ ಕತ್ತರಿಸಲಾಯಿತು. ಕೇಕ್ ತಿಂದ ಮಾನ್ವಿ ಹಾಗೂ ಕುಟುಂಬಸ್ಥರಿಗೆ ಆರೋಗ್ಯ ಹದಗೆಟ್ಟಿದ್ದು, ವಾಂತಿಯೂ ಸಹ ಆಗಿದೆ.
ಮಾನ್ವಿ ಹುಡುಗಿ ರಾತ್ರಿ ಮಲಗಿದ್ದಳು. ಬೆಳಗ್ಗೆ ಎದ್ದು ನೋಡಿದಾಗ ಬಾಲಕಿಯ ದೇಹ ತಣ್ಣಗೆ ಬಿದ್ದಿರುವುದು ಕಂಡು ಬಂದಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಕೇಕ್ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ಕುಟುಂಬದವರು ನ್ಯಾಯಕ್ಕಾಗಿ ಸಿಎಂಗೆ ಮನವಿ ಮಾಡಿದ್ದಾರೆ.
ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೇಕ್ ತುಂಡನ್ನು ವಶಪಡಿಸಿಕೊಂಡು ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 273 ಮತ್ತು 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post