ಶ್ರೀನಗರ: ಕಣಿವೆ ರಾಜ್ಯದ ಬಂಡಿಪೋರ್ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಮಾರು 6 ಭಯೋತ್ಪಾದಕರ ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ಸೇನಾ ನೆಲೆಗೆ ಸೇರಿದ 13 ರಾಷ್ಟ್ರೀಯ ರೈಫಲ್ಸ್ ಹಾಗೂ ಹಾಜಿನ್ ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಸುಮಾರು ಎಂಟು ಸುತ್ತು ಗುಂಡಿನ ದಾಳಿ ನಡೆಸಿರುವ ಭಯೋತ್ಪಾದಕರು ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್ ಗಳನ್ನು ಸೇನೆ ಹಾಗೂ ಪೊಲೀಸ್ ನೆಲೆಗಳ ಮೇಲೆ ಗುರಿಯಾಗಿಸಿದ್ದಾರೆ.
ಉಗ್ರರ ದಾಳಿ ಭಾರತೀಯ ಸೇನೆ ಪ್ರತ್ಯುತ್ತರ ಕಾರ್ಯಾಚರಣೆಯನ್ನು ಆರಂಭಿಸಿದೆ.
Discussion about this post