ಕಲ್ಪ ಮೀಡಿಯಾ ಹೌಸ್ | ತರೀಕೆರೆ |
ಚಲಿಸುತ್ತಿದ್ದ ಮೈಸೂರು – ತಾಳಗುಪ್ಪ ರೈಲಿನ #Mysore-Talaguppa Train ಚಕ್ರದ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಕ್ರಾಸ್ ಬಳಿ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿನ ಕೆಳಭಾಗದ ಚಕ್ರದ ಬಳಿ ಬೆಂಕಿ ಕಾಣಿಸಿಕೊಂಡಿದೆ.
ಇದರಿಂದ ಎಚ್ಚೆತ್ತ ಚಾಲಕ ತಕ್ಷಣವೇ ರೈಲು ನಿಲ್ಲಿಸಿ, ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ವಾಕ್ಯುಮ್ ಹಾಗೂ ನೀರು ಹಾಕಿ ಮಂಡಿಸಲಾಯಿತು. ಚಾಲಕರೊಂದಿಗೆ ಪ್ರಯಾಣಿಕರು ಬೆಂಕಿ ನಂದಿಸಿದ್ದಾರೆ.
ಘಟನೆ ನಂತರ ಕೆಲವು ಕಾಲ ಬಿಟ್ಟು ರೈಲು ಮೈಸೂರಿನತ್ತ ಹೊರಟಿತು. ಸಣ್ಣದಾಗಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ತಕ್ಷಣವೇ ಎಚ್ಚೆತ್ತು ನಂದಿಸಿದ್ಧರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಲಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post