ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾರಣಾಸಿ: ಇದು ಇಡಿಯ ಭಾರತೀಯ ರೈಲ್ವೆ ಇತಿಹಾಸದಲ್ಲಿ ಅತಿ ವಿಶಿಷ್ಠ ಹಾಗೂ ವಿಭಿನ್ನ ಹೆಜ್ಜೆ. ಅದೇನೆಂದರೆ, ಇಲಾಖೆಯ ಒಂದು ರೈಲಿನಲ್ಲಿ ಒಂದು ಸೀಟನ್ನು ಈಶ್ವರ ದೇವರಿಗಾಗಿ ಮೀಸಲಿರಿಸಲಾಗಿದೆ.
ಹೌದು… ಉತ್ತರ ಪ್ರದೇಶದ ವಾರಣಾಸಿ ಹಾಗೂ ಮಧ್ಯಪ್ರದೇಶ ಸೇರಿದಂತೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್’ಪ್ರೆಸ್ ರೈಲಿನ ಬಿ5 ಕೋಚ್’ನ 64ನೆಯ ನಂಬರಿನ ಸೀಟನ್ನು ಈಶ್ವರ ದೇವರಿಗಾಗಿ ಮೀಸಲು ಇರಿಸಲಾಗಿದೆ. ಈ ಸೀಟಿನಲ್ಲಿ ಈಶ್ವರನ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ.
ಈ ರೈಲು ಇಂದೋರ್ ಸಮೀಪದ ಓಂಕಾರೇಶ್ವರ್, ಉಜ್ಜೈನ್ ಮಹಾಕಾಲೇಶ್ವರ್ ಮತ್ತು ವಾರಾಣಸಿಯ ಕಾಶಿ ವಿಶ್ವನಾಥನ ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸಲಿದ್ದು, ಈ ರೈಲಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
Get in Touch With Us info@kalpa.news Whatsapp: 9481252093















