ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ಅಂಧ ವಿದ್ಯಾರ್ಥಿಯೊಬ್ಬ ಅದ್ವಿತೀಯ ಸಾಧನೆ ಮಾಡಿದ್ದು, ಇಡಿಯ ಮಲೆನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ದ್ವಿತೀಯ ಪಿಯುಸಿ (ಆರ್ಟ್ಸ್)ನಲ್ಲಿ ಡಿವಿಎಸ್ ಕಾಲೇಜಿನ ಅಂಧ ವಿದ್ಯಾರ್ಥಿ ಅಭಿರಾಮ್ ಭಾಗವತ್ ಶೇ.96.6ರಷ್ಟು ಅಂಕ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾನೆ. ಸಾಮಾನ್ಯ ವಿದ್ಯಾರ್ಥಿಗಳಿಗಿರುವಷ್ಟೇ ಅವಕಾಶ ಮತ್ತು ಪರೀಕ್ಷೆ ಇರುವ ದ್ವಿತೀಯ ಪಿಯುಸಿಯಲ್ಲಿ ಈ ವಿಶೇಷ ಚೇತನನ ಸಾಧನೆ ವಿಶೇಷವಾಗಿದೆ.
ಅದ್ಭುತ ಸಾಧನೆ ಮಾಡಿದ ಅಭಿರಾಮ್ ಭಾಗವತ್’ಗೆ ಡಿವಿಎಸ್ ವಿದ್ಯಾ ಸಂಸ್ಥೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.
Get In Touch With Us info@kalpa.news Whatsapp: 9481252093
Discussion about this post