ಜೈಪುರ: ಕಳೆದ ಒಂದು ವಾರದಲ್ಲಿ ಐದು ಭಾರಿ ಭಾರತ ಗಡಿಯೊಳಗೆ ಡ್ರೋಣನ್ನು ನುಗ್ಗಿಸಲು ಯತ್ನಿಸಿದ್ದ ಪಾಕಿಸ್ಥಾನ, ನಿನ್ನೆ ರಾತ್ರಿ ಮತ್ತೆ ನುಗ್ಗಿಸಲು ಯತ್ನಿಸಿದ್ದ ಡ್ರೋಣನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ.
ರಾಜಾಸ್ತಾನದ ಗಡಿಯಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ಥಾನದ ಡ್ರೋಣ್ ಭಾರತೀಯ ಗಡಿಯೊಳಗೆ ನುಗ್ಗಿಸಲು ಯತ್ನಿಸಿತ್ತು. ಆದರೆ, ಪಹರೆಯಲ್ಲಿದ್ದ ಭದ್ರತಾ ಪಡೆಗಳು ಸಮಯ ಪ್ರಜ್ಞೆಯ ಪರಿಣಾಮ ಅದನ್ನು ಅಟ್ಟಾಡಿಸಿ, ಹೊಡೆದು ಹಾಕುವಲ್ಲಿ ಯಶಸ್ವಿಯಾಗಿದೆ.
ಭಾರತವನ್ನು ಪ್ರವೇಶಿಸಲು ಯತ್ನಿಸಿರುವ 5ನೆಯ ಡ್ರೋಣ್ ಇದಾಗಿದ್ದು, ಗಂಗಾನಗರ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಪ್ರದೇಶವನ್ನು ನಿನ್ನೆ ಸಂಜೆ 7.30ರ ವೇಳೆಗೆ ಪ್ರವೇಶಿಸಲು ಯತ್ನಿಸಿದೆ. ಅನುಮಾನಾಸ್ಪದ ಡ್ರೋಣ್ ಕಂಡ ನಂತರ ಸಿಬ್ಬಂದಿ ಫೈರಿಂಗ್ ನಡೆಸಿ ಅದನ್ನು ಹೊಡೆದುರುಳಿಸಿದ್ದಾರೆ.

















