ಕಾರವಾರ: ಒಂದೆಡೆ ಇಡಿಯ ರಾಜ್ಯ ಸಿದ್ದಗಂಗಾ ಶ್ರೀಗಳ ಅಗಲಿಕೆಯ ನೋವಿನಲ್ಲಿದ್ದರೆ ಇನ್ನೊಂದೆಡೆ ಕಾರವಾರದ ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿ 9 ಮಂದಿ ಸಾವಿಗೀಡಾದ ಘಟನೆ ನಡೆದಿದೆ.
ವರ್ಷಕ್ಕೆ ಒಮ್ಮೆ ನಡೆಯುವ ಕುರ್ಮಗಡ ಜಾತ್ರೆ ಪ್ರಯುಕ್ತ ಕಾರವಾರದ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ನರಸಿಂಹ ದೇವರ ಜಾತ್ರೆಗೆ ಪ್ರಯಾಣ ಬೆಳೆಸಲು ದೋಣಿ ಸಹಾಯ ಪಡೆಯುತ್ತಾರೆ. ಇಂದು ಭಕ್ತರನ್ನು ತುಂಬಿಕೊಂಡು ದೋಣಿ ಸಾಗುತ್ತಿದ್ದಾಗ ದೋಣಿ ಮುಗುಚಿದೆ ಎನ್ನಲಾಗಿದ್ದು, 22 ಮಂದಿ ದೋಣಿಯಲ್ಲಿದ್ದರು.
ಈಗಾಗಲೇ 9 ಮೃತದೇಹವನ್ನು ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಕರಾವಳಿ ರಕ್ಷಣಾ ಪಡೆ ಹಾಗೂ ಮೀನುಗಾರರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

















