ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ. ರಾಘವೇಂದ್ರ ಅವರ ಶ್ರಮದಿಂದಾಗಿ ಹೊಸ ರೂಪ ಪಡೆಯುತ್ತಿರುವ ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ದೇಶದ ಮೊಟ್ಟ ಮೊದಲ ಕಾಟಿ ಸಫಾರಿ ಆರಂಭವಾಗಲಿದೆ.
Also Read: ಭಾರೀ ಮಳೆ: ಶಿವಮೊಗ್ಗ ಸೇರಿ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಸುಮಾರು 25 ಹೆಕ್ಟೇರ್ ಪ್ರದೇಶದಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ ಕಾಟಿ ಸಫಾರಿಯನ್ನು ಸಿದ್ದಪಡಿಸಲಾಗುತ್ತಿದ್ದು, ಈಗಾಗಲೇ ಫೆನ್ಸಿಂಗ್ ಹಾಕಲಾಗಿದೆ. ಇದಕ್ಕಾಗಿ ಮೈಸೂರಿನಿಂದ ಮುಂದಿನವಾರ 8 ಕಾಡುಕೋಣ ಹಾಗೂ 13 ಕಾಡೆಮ್ಮೆಗಳನ್ನು ಸಿಂಹಧಾಮಕ್ಕೆ ತರಿಸಲಾಗುತ್ತಿದೆ. ಇದು ಮುಕ್ತಯವಾದ ನಂತರ ಸಫಾರಿ ವಾಹನದಿಂದ ಕಾಟಿಗಳನ್ನು ಹತ್ತಿರದಿಂದಲೇ ವೀಕ್ಷಿಸಬಹುದಾಗಿದೆ.
ದೇಶದಲ್ಲೇ ಮೊದಲು ಕಾಟಿ ಸಫಾರಿ
ಇಡಿಯ ದೇಶದಲ್ಲಿ ಎಲ್ಲಿಯೂ ಈವರೆಗೂ ಕಾಟಿ ಸಫಾರಿ ಇಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಇದನ್ನು ಆರಂಭಿಸಲಾಗುತ್ತಿದ್ದು, ಜಿಲ್ಲಾ ಪ್ರವಾಸೋದ್ಯಮಕ್ಕೆ ಇದು ಮತ್ತಷ್ಟು ಬಲ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Also Read: ಭಾರೀ ಮಳೆ: ಶಿವಮೊಗ್ಗ ಸೇರಿ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, ಮಲೆನಾಡಿನ ಸೌಂದರ್ಯವನ್ನು ಸವಿಯಲು ಆಗಮಿಸುವ ಪ್ರವಾಸಿಗರು ಹುಲಿ, ಸಿಂಹ ಸಫಾರಿ ಜೊತೆಗೆ ಕಾಟಿ ಸಫಾರಿಯ ಆನಂದವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.
ಭಾರತೀಯ ಮೃಗಾಲಯ ಪ್ರಾಧಿಕಾರಕ್ಕೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 18 ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಕರ್ನಾಟಕದ ಶಿವಮೊಗ್ಗ ಮತ್ತು ಮಹಾರಾಷ್ಟ್ರದ ಮೃಗಾಲಯಕ್ಕೆ ಅನುಮೋದನೆ ನೀಡಲಾಗಿತ್ತು. ಅದರ ಪರಿಣಾಮವಾಗಿ ಶಿವಮೊಗ್ಗ ಜಿಲ್ಲೆಯ ಸುಂದರವಾದ ಮೃಗಾಲಯ ಮತ್ತು ಸಫಾರಿ ಮಾಡಲು ಸಾಧ್ಯವಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post