ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆಯಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹಳಷ್ಟು ಅವಾಂತರ ಸೃಷ್ಠಿಯಾಗಿದ್ದು, ಜನರ ಪರದಾಡುವಂತಾಗಿದೆ.
ನಿನ್ನೆಯಿಂದ ನಗರದಲ್ಲಿ ನಿರಂತರವಾಗಿ ವರುಣ ಆರ್ಭಟಿಸುತ್ತಿದ್ದು, ಇಂದು ರೆಡ್ ಅಲರ್ಟ್ Red alert ಘೋಷಣೆ ಮಾಡಿ, ಸುಮಾರು 10 ಮಿಮೀಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಇನ್ನು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಕೆರೆಯಂತಾಗಿವೆ. ಕಾಂಗ್ರೆಸ್ ಕಚೇರಿ ರಸ್ತೆ, ಬೈಪಾಸ್ ರಸ್ತೆಯ ಕೆಲವು ಕಡೆ, ಸೇರಿದಂತೆ ಬಹಳಷ್ಟು ಕಡೆಯ ರಸ್ತೆಗಳಲ್ಲಿ 1.5 ಅಡಿಗೂ ಎತ್ತರ ನೀರು ಹರಿಯುತ್ತಿದೆ. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
Also read: ಶಿವಮೊಗ್ಗದ ಸಿಂಹಧಾಮದಲ್ಲಿ ಆರಂಭವಾಗಲಿದೆ ದೇಶದ ಮೊದಲ ಕಾಟಿ ಸಫಾರಿ: ಏನು ವಿಶೇಷ?
ಬೈಪಾಸ್ ರಸ್ತೆಯ ಟೊಯೋಟಾ ಶೋರೂಂ ಹಿಂಭಾಗದ ಚಾನಲ್ ಓವರ್ ಫ್ಲೋ ಆಗಿ, ರಸ್ತೆಗೆ ನೀರು ನುಗ್ಗಿದ್ದು ಬಹಳಷ್ಟು ಸಮಸ್ಯೆ ಉಂಟಾಗಿದೆ.
ಇದೇ ವೇಳೆ ನ್ಯೂ ಮಂಡ್ಲಿ ಶಾಲೆಯ ಪ್ರದೇಶದಲ್ಲಿ ನೀರು ನಿಂತು ಕೆರೆಯಂತಾಗಿದೆ. ವಿನೋಬ ನಗರ ಚಾನಲ್ ಉಕ್ಕಿ ಹರಿಯುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.
ಇನ್ನು, ಗಾರೆ ಚಾನಲ್ ಉಕ್ಕಿ ಹರಿಯುತ್ತಿದ್ದು, ಇದರ ದೃಶ್ಯ ಮನಮೋಹಕವಾಗಿದ್ದು, ಜಲಪಾತದಂತೆ ಭಾಸವಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post