ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಭಜನೆಯ ಕರಾಳತೆಯ ಸ್ಮರಣಾರ್ಥ ದಿನವನ್ನು ಪ್ರತಿವರ್ಷ 14 ಆಗ¸ಸ್ಟ್ ರಂದು ದೇಶವ್ಯಾಪಿಯಾಗಿ ಆಚರಿಸಿದ್ದು, ವಿಭಜನೆಯಲ್ಲಿ ಬಲಿಯಾದವರನ್ನು ನೈಋತ್ಯ ರೈಲ್ವೆ ಮೈಸೂರು ವಿಭಾಗವು ಅರ್ಥಪೂರ್ಣವಾಗಿ ಸ್ಮರಿಸಿದೆ.
ನೈಋತ್ಯ ರೈಲ್ವೆ ಮೈಸೂರು ವಿಭಾಗವು ಇಂದು ಮೈಸೂರು ರೈಲ್ವೆ ನಿಲ್ದಾಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು, ಆ ದುಃಖಕರ ಘಟನೆಯಲ್ಲಿ ಬಲಿಯಾದವರನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಈ ಪ್ರದರ್ಶನವು ವಿಭಜನೆಯ ಸಮಯದಲ್ಲಿ ಜನರು ಅನುಭವಿಸಿದ ಸಂಕಷ್ಟ, ಸ್ಥಳಾಂತರ ಹಾಗೂ ಧೈರ್ಯಶೀಲತೆಗೆ ಸಂಬಂಧಿಸಿದ ಅಪರೂಪದ ಚಿತ್ರಗಳನ್ನು ಒಳಗೊಂಡಿದ್ದು, ದೇಶದ ಏಕತೆ ಮತ್ತು ಪುನರ್ ನಿರ್ಮಾಣದ ಶಕ್ತಿಯನ್ನು ತೋರಿಸಿತು.
ಇದು ಭಾರತದ ವಿಭಜನೆಯ ಸಮಯದಲ್ಲಿ ಲಕ್ಷಾಂತರ ಜನರು ಅನುಭವಿಸಿದ ಅಸಹನೀಯ ನೋವು, ಸ್ಥಳಾಂತರ ಮತ್ತು ಜೀವಹಾನಿಯನ್ನು ಸ್ಮರಿಸುವ ದಿನವಾಗಿದೆ. ಇವು 20ನೇ ಶತಮಾನದಲ್ಲಿ ನಡೆದ ಅತಿದೊಡ್ಡ ಮಾನವ ವಲಸೆಯ ಹಾಗೂ ಜೀವ ಹಾನಿಯ ದುಃಖಕರ ನೆನಪುಗಳನ್ನು ಮತ್ತೆ ಜೀವಂತಗೊಳಿಸುತ್ತದೆ.
ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ರೈಲ್ವೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಭಾಗವಹಿಸಿದರು. ಈ ಸಂದರ್ಭದಲ್ಲಿ, ವಿಭಜನೆಯ ಕರಾಳತೆ ಸ್ಮರಣಾ ದಿನವು ಸಮಾಜದಲ್ಲಿನ ವಿಭಜನೆ ಹಾಗೂ ಅಸಹಕಾರದ ವಿಷವನ್ನು ನಿವಾರಿಸಿ, ಏಕತೆ, ಸಾಮಾಜಿಕ ಸೌಹಾರ್ದತೆ ಹಾಗೂ ಮಾನವ ಶಕ್ತೀಕರಣದ ಮನೋಭಾವವನ್ನು ಬಲಪಡಿಸುವ ಅಗತ್ಯವನ್ನು ನಮಗೆ ನೆನಪಿಸುತ್ತದೆ ಎಂದು ಒತ್ತಿ ಹೇಳಲಾಯಿತು.
ಈ ಸಂದರ್ಭದಲ್ಲಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ನಿವೃತ್ತ ರೈಲ್ವೆ ಅಧಿಕಾರಿಯಾದ ಸೆಲ್ವರಾಜ್ ಅವರು ರೈಲ್ವೆಗೆ ನೀಡಿದ ಸೇವೆಗಾಗಿ ಅವರನ್ನು ಸನ್ಮಾನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post