ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯ ಶಾಲಿನಿ
ದೇಶೋಯಂ ಕ್ಷೋಭ ರಹಿತಾಂ, ಅಪುತ್ರಣಾ ಪುತ್ರಣಾ ಸಂತು, ಸಜ್ಜನಾ ಸಂತು ನಿರ್ಭಯಾ
ಈ ದೇವತಾ ಪ್ರಾರ್ಥನೆಯ ಮಹತ್ವ ನೋಡಿ. ಇಡೀ ಭೂ ಮಂಡಲವೇ ಸಕಾಲಿಕ ಮಳೆ ಬೆಳೆಗಳಿಂದ ಹಸಿರಾಗಿರಲಿ, ಅಪುತ್ರರಿಗೆ ಮಕ್ಕಳಿರಲಿ, ಸಜ್ಜನರು ನಿರ್ಭೀತಿಯಿಂದ ಓಡಾಡುವಂತಾಗಲೀ ಎಂಬ ದೇವತಾ ಪ್ರಾರ್ಥನೆ ಇದು. ಸರ್ವೇ ಜನಾಃ ಸುಖಿನೋ ಭವಂತು ಎಂಬ ಅರ್ಥವಿದು. ನನಗೆ ಮಾತ್ರ, ನನ್ನ ಕುಟುಂಬಕ್ಕೆ ಮಾತ್ರ ಒಳಿತಾಗಿ, ಜಗತ್ತು ಸುಟ್ಟುಕೊಂಡಿದ್ದರೆ, ದೇಶ ಹೊತ್ತಿ ಉರಿಯುತ್ತಿದ್ದರೆ ಸುಖ ಉಂಟೇ? ಇದು ಕ್ಷೋಭೆ ರಹಿತವೇ?
ನಮ್ಮ ಸನಾತನ ಸಕಲ ದೇವತಾ ಪೂಜೆಗಳ ಕೊನೆಗೆ ಹೇಳುವ ಪ್ರಾರ್ಥನಾ ಮಂತ್ರ. ಯಾವ ಧರ್ಮದಲ್ಲಿ ಈ ಸಂಪ್ರದಾಯ ಇದೆ ಎಂದು ಹೇಳಲಿ ನೋಡೋಣ. ಈಗ ಹೇಳಿ ಮೋದಿಯವರು ವಿದೇಶ ಸುತ್ತುವ ಉದ್ದೇಶವನ್ನು ಅರ್ಥ ಮಾಡಿಕೊಂಡು. ಭಯೋತ್ಪಾದನೆಯೇ ಕ್ಷೋಭೆ ತರುವಂತಹದ್ದು.
ಸಜ್ಜನರು ನಿರ್ಭೀತಿಯಿಂದ ಈ ಮತಾಂಧರ ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಹಿಂದುಗಳ ಹತ್ಯೆಗೆ ಯಾರು ಕಾರಣ? ಮತಾಂಧರು ಮತ್ತು ಅವರನ್ನು ಬೆಂಬಲಿಸುವ ದೇಶ ದ್ರೋಹಿಗಳಲ್ಲವೇ? ಒಂದು ವೇಳೆ ಇಸ್ಲಾಂ ಧರ್ಮದಲ್ಲಿ ಇಂತಹ ಕ್ಷೋಭ ರಹಿತವಾದ ಜೀವನ ಬೇಕೆಂದಿದ್ದಲ್ಲಿ ಮತಾಂಧರನ್ನು ಯಾಕೆ ಬಹಿರಂಗವಾಗಿ ಪ್ರತಿಭಟಿಸುವುದಿಲ್ಲ. ಯಾವುದೋ ಸತ್ಕಾರ್ಯಕ್ಕೆ ಅಡ್ಡಿಬರುವ, ನಿಂದಿಸುವ ಗೌರಿಯು ಅವಳ ಒಳಗಿನ ವ್ಯಾವಹಾರಿಕ ದ್ವೇಷಾಸೂಯೆಗಳಿಂದ ಸತ್ತರೆ ಕತ್ತಲಲ್ಲಿ ಫಲಕವಿಟ್ಟು ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುತ್ತಾರೆ ಮಹಿಷಾಸುರನ ಭಕ್ತರು.
ಆದರೆ ದಕ್ಷ ಅಧಿಕಾರಿಗಳ ಹತ್ಯೆಯಾದಾಗ, ಅನ್ನದಾತನ ಆತ್ಮಹತ್ಯೆಯಾದಾಗ, ಹಿಂದೂ ಕಾರ್ಯಕರ್ತರ ಕೊಲೆಯಾದಾಗ, ಹಿಂದೂ ದೇವರ ಮೆರವಣಿಗೆಯ ಮೇಲೆ ದಾಳಿಯಾದಾಗ, ಇಡಿಇಡೀ ಹಣವನ್ನೇ ನುಂಗಿ ನೀರು ಕುಡಿದವರ ವಿಚಾರದಲ್ಲಿ ಪ್ರತಿಭಟನೆಯೇ ಇಲ್ಲ. ಹೋಗಲಿ, ಅಂತಹ ಬಕಾಸುರರನ್ನು ಹಿಡಿದು ಜೈಲಿಗಟ್ಟಿದರೆ ನಮಗೆ ಬಂಡೆ ಬೇಕು, ನಮ್ಮ ಬಂಡೆ ಒಡೆದರೂ ಎಂದು ಬಾಡೂಟ ಮುಕ್ಕುತ್ತಾ ಪ್ರತಿಭಟನೆ ಮಾಡುತ್ತಾರಲ್ವೇ ಇವರನ್ನು ದೇಶಭಕ್ತರೆಂದು ಹೇಳಲಾದೀತೇ?
ನಮ್ಮ ಪ್ರಧಾನ ಸೇವಕನು ಮೇಲೆ ಹೇಳಿದ ಮಂತ್ರದ ಪ್ರಕಾರವೇ ನಡೆದುಕೊಂಡರೆ ಅವ ದೇಶದ ಪ್ರಧಾನಿಯಲ್ಲವಂತೆ. ವಿದೇಶೀ ಪ್ರಧಾನಿಯಂತೆ! ದುರುಳರಿಗೆ ದೇಶದ ಕ್ಷೇಮ ಬೇಕಿದ್ದೇ ಆಗಿದ್ದಲ್ಲಿ ಇಂದು ಇಡಿಯವರಿಗೂ, ಐಟಿಯವರಿಗೂ ಕೆಲಸವಿರುತ್ತಿರಲಿಲ್ಲ. ತಾನೊಬ್ಬ ‘ಪರಮ’ ಪವಿತ್ರ ಎಂದವನ ಮನೆ ಮಠ ಶೋಧಿಸಿದಾಗ ಸಿಕ್ಕಿತು ರಾಶಿ ರಾಶಿ ಪರಮ ಪವಿತ್ರವಾದ ಸಂಪತ್ತು!
ಇಷ್ಟಕ್ಕೇ ಮುಗಿತೆಂದುಕೊಳ್ಳಬೇಡಿ. ಇದು ಕೇವಲ ಪಾದ ಭಾಗ(1/4) ಮಾತ್ರ. ಉಳಿದ ಮುಕ್ಕಾಲು ಇನ್ನೂ ಆಗಲಿದೆ. ಕಾದು ನೋಡಿ.
Discussion about this post